Kerela : ಪ್ರೀತಿಯಲ್ಲಿ ಬಿದ್ದಿದ್ದ ಹಿಂದೂ ಯುವತಿ ಆತ್ಮಹತ್ಯೆ – ಲವ್ ಜಿಹಾದ್ ಶಂಕೆ!!

Kerala: ಪ್ರೀತಿಸುತ್ತಿದ್ದ ಹಿಂದು ಯುವತಿ ಒಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದಲ್ಲಿ ನಡೆದಿದೆ ಇದರ ಬೆನ್ನಲ್ಲೇ ಈ ಘಟನೆಯ ಕುರಿತು ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ.

ಹೌದು, ಅಂಜನಾ ಎಂಬ ಯುವತಿ ತನ್ನ ಸಹಪಾಠಿ ಹ್ಯಾರಿಸ್ ಎಂಬಾತನು ಬೀಸಿದ ಪ್ರೀತಿಯ ಬಲೆಗೆ ಬಿದ್ದಿದ್ದು, ಈಗ ಆಕೆಯ ಬದುಕು ದುರಂತ ಅಂತ್ಯ ಕಂಡಿದೆ. ಆಕೆ ಅಕ್ಟೋಬರ್ 2 ರಂದು ಮಧ್ಯರಾತ್ರಿ ಕೇರಳದ ಅರೂರ್ ರೈಲು ನಿಲ್ದಾಣದ ಬಳಿ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಅಂಜನಾ ಕಲಾಮಸ್ಸೆರಿಯ ಸಿಐಪಿಇಟಿ ಕಾಲೇಜಿನಲ್ಲಿ ಪ್ಲಾಸ್ಟಿಕ್ ತಂತ್ರಜ್ಞಾನ ಡಿಪ್ಲೊಮಾ ಕೋರ್ಸ್‌ನ ಮೂರನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿದ್ದಳು. ಅದೇ ಕಾಲೇಜಿನಲ್ಲಿ ಓದುತ್ತಿದ್ದ ಓದುತ್ತಿದ್ದ ಚಿಕ್ಕರಕ್ಕುಡಿಯ ಕೋತಮಂಗಲಂ ವೆಂಡುವಾಝಿಯ ಹ್ಯಾರಿಸ್ ಎಂಬ ಯುವಕನನ್ನು ಪ್ರೀತಿ ಮಾಡುತ್ತಿದ್ದಳು. ಅಂಜನಾಳಿಗೆ ಮದುವೆಯಾಗುವುದಾಗಿ ಹ್ಯಾರಿಸ್ ಭರವಸೆ ನೀಡಿ ಆಗಾಗ್ಗೆ ಆಕೆ ಜೊತೆ ಸೇರುತ್ತಿದ್ದ. ಆ ಬಳಿಕ ಕಿರುಕುಳ ನೀಡಲು ಶುರು ಮಾಡಿದ್ದ ಎಂದು ತಿಳಿದು ಬಂದಿದೆ. ಸಾವಿಗೆ ಒಂದು ತಿಂಗಳ ಮೊದಲು, ಇಬ್ಬರೂ ಎಡಪ್ಪಳ್ಳಿಯ ಲಾಡ್ಜ್‌ನಲ್ಲಿ ಉಳಿದು ದೈಹಿಕ ಸಂಬಂಧ ಬೆಳೆಸಿದ್ದರು. ಬಳಿಕ ಆಕೆ ತಂದೆ ರತೀಶ್ ಅವರು ಹ್ಯಾರಿಸ್ ನಿಂದ ಗರ್ಭಿಣಿಯಾಗಿದ್ದಾಳೆಂದು ಶಂಕಿಸಿ ಆಕೆಯನ್ನು ಕೊಂದಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.
ಇನ್ನೂ ಅಂಜನಾ ಸಾವು ಕಾಣುತ್ತಿದ್ದಂತೆ ಹ್ಯಾರಿಸ್ ಬೆಂಗಳೂರಿಗೆ ಓಡಿಹೋಗಿದ್ದಾನೆ ಎಂದು ವರದಿಯಾಗಿದೆ. ಹ್ಯಾರಿಸ್ ಅಥವಾ ಹ್ಯಾರಿಸ್ ಕಳುಹಿಸಿದ ಸ್ನೇಹಿತರು ಅಂಜನಾಳನ್ನು ಬಲವಂತವಾಗಿ ರೈಲಿನ ಮುಂದೆ ತಳ್ಳಿ ಕೊಂದಿರಬಹುದು ಎಂದು ಕುಟುಂಬವು ದೂರಿದೆ.
Comments are closed.