LifeStyle: ವ್ಯಾಯಾಮ ಮಾಡುವ ಮನಸ್ಸಾಗುವುದಿಲ್ಲವೇ? ವ್ಯಾಯಾಮದ ಸಂದರ್ಭದಲ್ಲಿ ಆಲಸ್ಯವೇ?

Lifestyle: ಫಿಟ್ ಮತ್ತು ಸ್ಲಿಮ್ ಆಗಿ ಕಾಣುವ ಬಯಕೆ ಎಲ್ಲರಲ್ಲೂ ಇರುತ್ತದೆ. ಆದರೆ, ಉತ್ತಮ ಆರೋಗ್ಯ ಮತ್ತು ಉತ್ತಮ ಮೈಕಟ್ಟು ಎಲ್ಲರಿಗೂ ಸಹಜವಾಗಿ ಲಭ್ಯವಾಗಿರುವುದಿಲ್ಲ. ಇದಕ್ಕಾಗಿ ಆಹಾರ ನಿಯಂತ್ರಣದೊಂದಿಗೆ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಯೂ ಅವಶ್ಯಕ. ಆರೋಗ್ಯ ಮತ್ತು ಮೈಕಟ್ಟು ಉತ್ತಮವಾಗಿದ್ದರೂ ಸಹ ಅದನ್ನು ಕಾಯ್ದುಕೊಂಡು ಹೋಗಲು ಜೀವನಶೈಲಿಯನ್ನು ನಿರ್ವಹಿಸುವುದು ಅಗತ್ಯ.

ಆದರೆ, ಅದು ಎಲ್ಲರಿಗೂ ಸಹಜ ಸಾಧ್ಯವಾಗುವುದಿಲ್ಲ. ಏಕೆಂದರೆ, ಸಾಕಷ್ಟು ಜನರಲ್ಲಿ ಸ್ವಯಂ ಪ್ರೇರಣೆಯೆ ಇರುವುದಿಲ್ಲ. ಆದ್ದರಿಂದ, ಅನೇಕ ಜನರು ವ್ಯಾಯಾಮವನ್ನು ಪ್ರಾರಂಭಿಸುವ ಮೊದಲೇ ಅದನ್ನು ಕೈ ಬಿಡುತ್ತಾರೆ. ಕೆಲವರಿಗೆ ವ್ಯಾಯಾಮ ಮಾಡಬೇಕು ಎಂದು ಮನಸ್ಸಿನಲ್ಲಿ ಭಾವನೆ/ಇಚ್ಛೆ ಇರುತ್ತದೆ. ಆದರೆ, ಪ್ರತ್ಯಕ್ಷವಾಗಿ ಮಾಡಬೇಕಾದರೆ ಆಲಸ್ಯ ಅಡ್ಡಿಯಾಗುತ್ತದೆ.
ಈ ಅಡೆತಡೆಗಳನ್ನು ಮೆಟ್ಟಿ ವ್ಯಾಯಾಮವನ್ನು ಆರಂಭಿಸಲು, ನಾವು ನಿಮಗೆ ಕೆಲವು ವಿಷಯಗಳನ್ನು ಹೇಳಲಿದ್ದೇವೆ. ಆರಂಭದ ಕೆಳವು, ಅದನ್ನು ನೀವು ಅಭ್ಯಾಸ ಮಾಡಿಕೊಂಡು ಮುಂದುವರೆದರೆ ನಿಮಗೆ ಅದರಿಂದ ಸಾಕಷ್ಟು ಸಹಾಯವಾಗುತ್ತದೆ.
ವ್ಯಾಯಾಮದ ಮಹತ್ವದ ಬಗ್ಗೆ ಅರಿತುಕೊಳ್ಳುವುದು ಮೊಟ್ಟಮೊದಲನೆಯ ಹೆಜ್ಜೆ!
ವ್ಯಾಯಾಮ ಎಂದರೆ ನಮ್ಮ ನಿತ್ಯದ ದೈಹಿಕ ಚಟುವಟಿಕೆಗಳ ಹೊರತು ಹೆಚ್ಚುವರಿ ದೈಹಿಕ ಚಟುವಟಿಕೆಗಳನ್ನು ಮಾಡುವುದು. ಈ ಹೆಚ್ಚುವರಿ ಚಟುವಟಿಕೆಗಳು ನಮಗೆ ಸ್ವಲ್ಪ ಆಯಾಸವನ್ನು ಉಂಟು ಮಾಡಬೇಕು ಬೆವರು ಸುರಿಯಬೇಕು ಮತ್ತು ಎದುಸಿರು ಬಿಡುವಂತಾಗಬೇಕು. ಇದೆಲ್ಲವೂ ಸೌಮ್ಯ ಪ್ರಮಾಣದಲ್ಲಿ ಆಗಬೇಕು. ಇದರಿಂದ ಅನೇಕ ಆರೋಗ್ಯ ಲಾಭಗಳು ದೊರೆಯುತ್ತವೆ.
ಮುಖ್ಯವಾಗಿ ರಕ್ತ ಪರಿಚಲನೆ ಮತ್ತು ಉಸಿರಾಟ ಉತ್ತಮವಾಗುತ್ತದೆ. ಎರಡು ಕ್ರಿಯೆಗಳು ಒಟ್ಟಿಗೆ ನಡೆಯುವುದರಿಂದ ದೇಹದ ಪ್ರತಿಯೊಂದು ಜೀವಕೋಶಕ್ಕೂ ಆಹಾರ ಮತ್ತು ಆಮ್ಲಜನಕದ ಸರಬರಾಜು ಉತ್ತಮ ರೀತಿಯಲ್ಲಿ ನಡೆಯುತ್ತದೆ ಅಲ್ಲದೆ ಜೀವಕೋಶಗಳಲ್ಲಿ ನಿರ್ಮಾಣವಾದ ತ್ಯಾಜ್ಯ ವಸ್ತುಗಳು ಹೊರಹಾಕಲ್ಪಡುತ್ತವೆ. ಅಂದರೆ, ನಿಮ್ಮ ವಾಹನವನ್ನು ಸರ್ವಿಸಿಂಗ್ ಮಾಡಿದ ನಂತರ ವಾಹನಕ್ಕೆ ವಾಹನದ ಆರೋಗ್ಯಕ್ಕೆ ಹೇಗೆ ಸಹಾಯಕವಾಗುತ್ತದೋ ಹಾಗೆ ದೇಹಕ್ಕೆ ವ್ಯಾಯಾಮವು ಹೊಸ ಚೈತನ್ಯವನ್ನು ನೀಡುತ್ತದೆ. ಇದು ಕಾಯಿಲೆಗಳನ್ನು ದೂರ ಇಟ್ಟು ಆರೋಗ್ಯವಾಗಿ ದೀರ್ಘಕಾಲ ಬಾಳಲು ಅತ್ಯವಶ್ಯಕವಾಗಿರುತ್ತದೆ. ಇದನ್ನು ನೀವು ಚೆನ್ನಾಗಿ ಮನಗಾಣಬೇಕು.
ವ್ಯಾಯಾಮ ದಿನವನ್ನು ಹೇಗೆ ಪ್ರಾರಂಭಿಸುವುದು…?
ಮೊದಲಿಗೆ, ನೀವು ವ್ಯಾಯಾಮವನ್ನು ಪ್ರಾರಂಭಿಸಲು ಬಯಸುತ್ತೀರಿ ಮತ್ತು ಅದನ್ನು ಹೇಗೆ ಮಾಡಬೇಕೆಂದು ಮನವರಿಕೆ ಮಾಡಿಕೊಳ್ಳಿ. ಒಮ್ಮೆ ನೀವು ವ್ಯಾಯಾಮ ಮಾಡಲು ನಿರ್ಧರಿಸಿದರೆ, ನಿಮ್ಮ ಗುರಿಗಳನ್ನು ಹೊಂದಿಸಿ. ಹಾಗೆ, ನೀವು ಎಷ್ಟು ಕಿಲೋಗಳನ್ನು ಕಳೆದುಕೊಳ್ಳಲು ಬಯಸುತ್ತೀರಿ. ನಂತರ ಪ್ರತಿದಿನ ಒಂದೇ ಸಮಯದಲ್ಲಿ ವ್ಯಾಯಾಮ ಮಾಡುವ ಮೂಲಕ ಇಷ್ಟು ದಿನಗಳಲ್ಲಿ ಇಷ್ಟು ತೂಕವನ್ನು ಕಳೆದುಕೊಳ್ಳಲು ಗಡುವನ್ನು ನಿಗದಿಪಡಿಸಿ ನಿರ್ಧಾರ ತೆಗೆದುಕೊಳ್ಳಬೇಡಿ.
ಏಕೆಂದರೆ ಮೊದಮೊದಲು ಕೆಲವು ದಿನಗಳ ಕಾಲ ಹಿತವೆನಿಸುತ್ತದೆ, ನಂತರ ನೋವು ಅನುಭವಿಸಬಹುದು. ಆದ್ದರಿಂದ ವಾರಕ್ಕೆ ಕೇವಲ 3 ದಿನಗಳಿಂದ ಪ್ರಾರಂಭಿಸಿ. ಪ್ರತಿ ದಿನ ಪರ್ಯಾಯವಾಗಿ ವ್ಯಾಯಾಮ ಮಾಡಿ. ಆರಂಭದಲ್ಲಿ ಹೆಚ್ಚು ವ್ಯಾಯಾಮ ಮಾಡಬೇಡಿ. ಬದಲಾಗಿ, ಮೊದಲಿಗೆ ಸುಲಭವಾದ ವ್ಯಾಯಾಮಗಳೊಂದಿಗೆ ಪ್ರಾರಂಭಿಸಿ. ಇದರಿಂದ ಸಂಭ್ರಮ ಕೊನೆಯವರೆಗೂ ಇರುತ್ತದೆ.
ವ್ಯಾಯಾಮ ಬೋರ್ ಅನಿಸುತ್ತದೆಯೇ…?
ವ್ಯಾಯಾಮದಿಂದ ಬೇಸರವಾಗಲು ಶುರುವಾದಾಗಲೆಲ್ಲ ವ್ಯಾಯಾಮದ ಲಾಭಗಳನ್ನು ಮತ್ತು ನಿಮ್ಮ ಗುರಿಯನ್ನು ನೆನಪಿಸಿಕೊಳ್ಳಿ. ನಿಮ್ಮನ್ನು ಸವಾಲು ಮಾಡುವುದು ನಿಮಗೆ ಸ್ಥಿರವಾಗಿರಲು ಸಹಾಯ ಮಾಡುತ್ತದೆ. ವ್ಯಾಯಾಮವನ್ನು “ಒಂದು ಕೆಲಸ” ಅಥವಾ “ಬಂಧನಕಾರಕ ಕ್ರಿಯೆ” ಅಥವಾ “ಹೊರೆ” ಎಂಬ ಭಾವನೆಯನ್ನು ಮೊದಲು ತೊಡೆದು ಹಾಕಿ. ವ್ಯಾಯಾಮವನ್ನು ಒಂದು ಮನರಂಜನಾತ್ಮಕ ಕ್ರಿಯೆಯಾಗಿ ಮಾರ್ಪಡಿಸಿಕೊಳ್ಳಿ. ಉದಾ: ವ್ಯಾಯಾಮವನ್ನು ನಿಮಗೆ ಇಷ್ಟವಾಗುವ ಆಟದ ಸ್ವರೂಪದಲ್ಲಿ ಸಹ ನೀವು ಪ್ರಾರಂಭಿಸಬಹುದು. ವ್ಯಾಯಾಮವನ್ನು ಆಹ್ಲಾದಕರ ವಾತಾವರಣದಲ್ಲಿ ಮಾಡಿ. ಇದರಿಂದ ವ್ಯಾಯಾಮ ಬೇಸರದ ಕೆಲಸ ಎನಿಸುವುದಿಲ್ಲ.
ಇದನ್ನೂ ಓದಿ;Cricket: ರೋಹಿತ್ ಶರ್ಮಾ ನಾಯಕತ್ವದಿಂದ ತೆಗೆದುಹಾಕಿದ್ದು ಸರಿಯಾದ ನಿರ್ಧಾರ: ಸೌರವ್ ಗಂಗೂಲಿ
ವ್ಯಾಯಾಮ ಮಾತ್ರವಲ್ಲದೆ ಆಹಾರ ಕ್ರಮದ ಕಡೆಗೂ ಗಮನ ಕೊಡಿ. ತಜ್ಞರ ಸಲಹೆಯೊಂದಿಗೆ ನಿಮ್ಮ ಜೀವನಶೈಲಿಗೆ ಅನುಗುಣವಾಗಿ ಆರೋಗ್ಯಕರ ಆಹಾರ ಯೋಜನೆಯನ್ನು ಪಡೆಯಿರಿ. ನೀವು ಅದರಲ್ಲಿ ಮೋಸದ (ಚೀಟ್) ದಿನವನ್ನು ಸಹ ಹಾಕಬಹುದು. ಇದರಿಂದ, ಒಂದು ದಿನ ನೀವು ನಿಮ್ಮ ನೆಚ್ಚಿನ ಆಹಾರವನ್ನು ತಿನ್ನಬಹುದು.
Comments are closed.