GOLD Rate: ದಾಖಲೆಯ ಏರಿಕೆಯೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಚಿನ್ನದ ಬೆಲೆ: ಬೆಲೆ ಏರಿಕೆಗೆ ಅಮೆರಿಕ-ಚೀನಾ ಕಾರಣವೇ?

Share the Article

GOLD Rate: ಬುಧವಾರ ಚಿನ್ನದ ಬೆಲೆ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಹಳದಿ ಲೋಹವು ಮೊದಲ ಬಾರಿಗೆ ₹1.22 ಲಕ್ಷ/10 ಗ್ರಾಂನ ಗಡಿಯನ್ನು ದಾಟಿದೆ. MCX ಚಿನ್ನದ ಪ್ಯೂಚರ್‌ಗಳು ₹1,22,735/10 ಗ್ರಾಂನ ಗರಿಷ್ಠ ಮಟ್ಟವನ್ನು ತಲುಪಿವೆ. ವಿಶ್ವ ಚಿನ್ನದ ಮಂಡಳಿಯ ದತ್ತಾಂಶದ ಪ್ರಕಾರ, ಮಂಗಳವಾರ ಮೊದಲ ಬಾರಿಗೆ ಚಿನ್ನದ ಸ್ಪಾಟ್ ಬೆಲೆಗಳು $4,000 (ಸುಮಾರು ₹3.55 ಲಕ್ಷ)/ಔನ್ಸ್‌ಗೆ ತಲುಪಿವೆ.

ಚಿನ್ನದ ಬೆಲೆ ಏರಿಕೆಗೆ ಕಾರಣವೇನು?

ಈ ವರ್ಷ ಚಿನ್ನದ ಬೆಲೆಗಳು ಶೇ.60ಕ್ಕಿಂತ ಹೆಚ್ಚು ಏರಿಕೆಯಾಗಿವೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ. ಇದು ಹಣಕಾಸು ನೀತಿಯಲ್ಲಿನ ಆಳವಾದ ಜಾಗತಿಕ ಬದಲಾವಣೆ, ಕರೆನ್ಸಿಯ ಏರಿಳಿತ, ಅಪಾಯದ ಭಾವನೆಯ ಪರಿಣಾಮವಾಗಿದೆ. ರಷ್ಯಾ-ಉಕ್ರೇನ್ ಯುದ್ಧ ಮತ್ತು ಮಧ್ಯಪ್ರಾಚ್ಯದಲ್ಲಿನ ಅಶಾಂತಿ ಸೇರಿದಂತೆ ನಿರಂತರ ಜಾಗತಿಕ ಉದ್ವಿಗ್ನತೆಗಳು ಹೂಡಿಕೆದಾರರನ್ನು ಚಿನ್ನದತ್ತ ಮುಖ ಮಾಡುವಂತೆ ಮಾಡಿದೆ. ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ ₹1.22 ಲಕ್ಷಕ್ಕೆ ತಲುಪಿದೆ.

ಚಿನ್ನದ ಬೆಲೆಯಲ್ಲಿನ ತ್ವರಿತ ಏರಿಕೆಯ ಹಿಂದೆ ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧವೇನು?

ಜಾಗತಿಕವಾಗಿ ಮತ್ತು ಭಾರತದಲ್ಲಿ ಚಿನ್ನದ ಬೆಲೆಯಲ್ಲಿನ ಗಮನಾರ್ಹ ಏರಿಕೆಗೆ ಅಮೆರಿಕ-ಚೀನಾ ಸಂಘರ್ಷವೇ ಕಾರಣ ಎಂದು ಹೇಳಲಾಗುತ್ತಿದೆ. ವಿಶ್ಲೇಷಕರ ಪ್ರಕಾರ, ಚೀನಾದ ಕೇಂದ್ರ ಬ್ಯಾಂಕ್ ತನ್ನ ವಿದೇಶಿ ವಿನಿಮಯ ಮೀಸಲುಗಳನ್ನು ವೈವಿಧ್ಯಗೊಳಿಸಲು ಪ್ರಯತ್ನಿಸುತ್ತಿರುವುದರಿಂದ ಸತತ 11ನೇ ತಿಂಗಳು ಚಿನ್ನವನ್ನು ಖರೀದಿಸುತ್ತಿದೆ. ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆಯೂ ಬೆಲೆಗಳನ್ನು ಬೆಂಬಲಿಸುತ್ತಿದೆ.

Comments are closed.