Bigg Boss-12: ‘ಬಿಗ್‌ ಬಾಸ್ ಮನೆಗೆ ಬೀಗ- ರಾಜಕೀಯಾವಾಗಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ರೆಸಾರ್ಟ್‌ಗೆ ಸ್ಪರ್ಧಿಗಳು ಶಿಫ್ಟ್ !!

Share the Article

Bigg Boss-12 : ಕಂದಾಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆ ಆರೋಪದ ಮೇಲೆ, ಬಿಗ್‌ಬಾಸ್’ ರಿಯಾಲಿಟಿ ಷೋ ನಡೆಯುತ್ತಿರುವ ಬಿಡದಿಯ ಜಾಲಿವುಡ್ ಸ್ಟುಡಿಯೋಸ್ ಆಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ತಾಲ್ಲೂಕು ಆಡಳಿತ ಮಂಗಳವಾರ ಬೀಗಮುದ್ರೆ ಹಾಕಿದೆ. ಈ ಮನೆಯಲ್ಲಿ ರಾತ್ರೋರಾತ್ರಿ ಬಿಗ್ ಬಾಸ್ ಸ್ಪರ್ಧಿಗಳನ್ನು ಮನೆಯಿಂದ ಹೊರಕ್ಕೆ ಹಾಕಲಾಗಿದ್ದು ಅವರನ್ನು ಐಷಾರಾಮಿ ರೆಸಾರ್ಟ್ ಗೆ ಶಿಫ್ಟ್ ಮಾಡಲಾಗಿದೆ.

ಹೌದು, ಬಿಗ್ ಬಾಸ್ ಕನ್ನಡದ ಎಲ್ಲಾ 17 ಸ್ಪರ್ಧಿಗಳನ್ನು ಬಿಡದಿಯ ಐತಿಹಾಸಿಕ ಹಾಗೂ ರಾಜಕೀಯವಾಗಿ ಸುದ್ದಿಯಾಗಿದ್ದ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಹೋಬಳಿಯ ಇಂಡಸ್ಟ್ರಿಯಲ್ ಏರಿಯಾದ ಬಿಗ್‌ಬಾಸ್ ಅದ್ದೂರಿ ಮನೆಯಲ್ಲಿದ್ದ ಎಲ್ಲಾ 17 ಸ್ಪರ್ಧಿಗಳನ್ನು ಯಾವುದೇ ಹೋಟೆಲ್‌ಗೆ ಕರೆದುಕೊಂಡು ಹೋಗದೇ ಖ್ಯಾತ, ಐಷಾರಾಮಿ ರೆಸಾರ್ಟ್‌ಗೆ ಕರೆದುಕೊಂಡು ಬರಲಾಗಿದೆ.

ಸ್ಪರ್ಧಿಗಳನ್ನು ಬೆಂಗಳೂರು-ಮೈಸೂರು ಹೆದ್ದಾರಿ ಬಳಿಯಲ್ಲಿರುವ ಬಿಡದಿ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದ್ದು, ಇದು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಕ್ಷಿಪ್ರ ಕ್ರಾಂತಿಯುಂಟಾಗಿರುವ ಸಂದರ್ಭದಲ್ಲಿ ಮುನ್ನಲೆಗೆ ಬಂದ ರೆಸಾರ್ಟ್ ಆಗಿದೆ. ಈ ಹಿಂದೆ ಗುಜರಾತಿನ ಕಾಂಗ್ರೆಸ್ ಶಾಸಕರನ್ನು ಈಗಲ್ ಟನ್ ಗಾಲ್ಫ್ ರೆಸಾರ್ಟ್‌ನಲ್ಲಿ ಇರಿಸಲಾಗಿತ್ತು. ಈ ವೇಳೆ ಈಗಲ್ ಟನ್ ಗಾಲ್ಫ್ ರೆಸಾರ್ಟ್ ನತ್ತ ಇಡೀ ದೇಶದ ಗಮನ ಸೆಳೆದಿತ್ತು. ರೆಸಾರ್ಟ್ ರಾಜಕಾರಣ ಅಂದ್ರೆ ಎಲ್ಲರ ಕಣ್ಮುಂದೆ ಬಿಡದಿಯ ಈಗಲ್ ಟನ್ ಗಾಲ್ಫ್ ರೆಸಾರ್ಟ್‌ ಬರುತ್ತದೆ. ಇದೀಗ ಇದೇ ರೆಸಾರ್ಟ್‌ಗೆ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನ ಎಲ್ಲಾ ಸ್ಪರ್ಧಿಗಳು ಶಿಫ್ಟ್ ಆಗಿದ್ದಾರೆ.

ಹೈಕೋರ್ಟ್‌ ಮೊರೆ ಸಾಧ್ಯತೆ
ಬಿಗ್‌ಬಾಸ್‌ ಸ್ಪರ್ಧೆ ಶುರುವಾಗಿ 11 ದಿನವಾಗಿದೆ. ಈಗ ಜಿಲ್ಲಾಡಳಿತ ಬೀಗಮುದ್ರೆ ಹಾಕಿದ್ದು ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲು ಜಾಲಿವುಡ್‌ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಕೋರ್ಟ್‌ನಲ್ಲಿ ಮಂಡಳಿ ಆದೇಶಕ್ಕೆ ತಡೆಯಾಜ್ಞೆ ಸಿಗುವ ವಿಶ್ವಾಸ ಇರುವುದರಿಂದ ಮತ್ತೆ ಬಿಗ್‌ಬಾಸ್‌ ಷೋ ಮುಂದುವರಿಸಲು ಸ್ಪರ್ಧಿಗಳನ್ನು ಸಮೀಪದ ಈಗಲ್ಟನ್ ರೆಸಾರ್ಟ್‌ನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Comments are closed.