Viral Video : ವರ್ಗಾವಣೆಗೊಂಡ ಡಿಸಿ- ಪಲ್ಲಕ್ಕಿಯಲ್ಲಿ ಹೊತ್ತೊಯ್ದು ಬೀಳ್ಕೊಟ್ಟ ಸಿಬ್ಬಂದಿಗಳು

Viral Video : ಸರ್ಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ವರ್ಗಾವಣೆಗೊಂಡರೆ ಜನರು ನೂರು ದೇವರಿಗೆ ಕೈ ಮುಗಿಯುತ್ತೇವೆ ಎನ್ನುತ್ತಾರೆ. ಕೆಲವೊಮ್ಮೆ ಹಿಡಿ ಶಾಪ ಹಾಕಿ ಅವರನ್ನು ಬೀಳ್ಕೊಟ್ಟು ಕಳುಹಿಸುತ್ತಾರೆ. ಹೆಚ್ಚಿನ ಅಧಿಕಾರಿಗಳಿಗೆ ಇದೇ ರೀತಿ ಮರ್ಯಾದೆ ಸಿಗುತ್ತದೆ. ಆದರೆ ಇಲ್ಲೊಂದೆಡೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಬೇರೆಡೆಗೆ ವರ್ಗಾವಣೆಗೊಂಡಾಗ ಕಚೇರಿಯ ಸಿಬ್ಬಂದಿಗಳು ಅವರನ್ನು ಪಲ್ಲಕ್ಕಿಯಲ್ಲಿ ಹೊತ್ತೊಯ್ದು ಬೀಳ್ಕೊಟ್ಟು ಬಂದಿದ್ದಾರೆ.

https://www.instagram.com/reel/DPfkNESgGLC/?igsh=NzZlMWp3ZnYzcWhj
ಹೌದು, ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಜಿಲ್ಲಾಧಿಕಾರಿ ಸಂಸ್ಕೃತಿ ಜೈನ್ ಅವರಿಗೆ ಅಲ್ಲಿನ ಜನ ಬಹಳ ಭಾವಪೂರ್ಣವಾದ ಹಾಗೂ ವಿಭಿನ್ನವಾದ ವಿದಾಯ ಕೂಟವನ್ನು ಏರ್ಪಡಿಸಿ ಅವರನ್ನು ಗೌರವಯುತವಾಗಿ ಬೀಳ್ಕೊಟ್ಟಿದ್ದಾರೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಐಎಎಸ್ ಅಧಿಕಾರಿ ಸಂಸ್ಕೃತಿ ಜೈನ್ ಅವರನ್ನು ಸಹ ಅಧಿಕಾರಿಗಳು ಮತ್ತು ಸಿಬ್ಬಂದಿ ಸುಂದರವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದ್ದು, ಇದು ಜಿಲ್ಲೆಯಲ್ಲಿ ಅವರ ಅಧಿಕಾರಾವಧಿಯಲ್ಲಿ ಅವರು ನಡೆಸಿದ ಕಾರ್ಯಗಳು ಹಾಗೂ ಇತರ ಅಧಿಕಾರಿಗಳ ಜೊತೆ ಹೊಂದಿದ್ದ ಸಹಕಾರಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ:Sujata Bhat: ಧರ್ಮಸ್ಥಳಕ್ಕೆ ಹೋಗಿ ವೀರೇಂದ್ರ ಹೆಗ್ಗಡೆಯವರ ಕ್ಷಮೆ ಕೇಳುತ್ತೇನೆ – ಸುಜಾತಾ ಭಟ್
Comments are closed.