Dasara Holiday: ಪೋಷಕರೇ ಗಮನಿಸಿ – ಎಲ್ಲಾ ಶಾಲಾ ಮಕ್ಕಳಿಗೆ ವಿಸ್ತರಣೆಯಾಗಿಲ್ಲ ದಸರಾ ರಜೆ !!

Dasara Holiday : ರಾಜ್ಯ ಸರ್ಕಾರವು ನಡೆಸುತ್ತಿರುವ ಜಾತಿ ಸಮೀಕ್ಷೆಯು ಇನ್ನೂ ಕೂಡ ಮುಕ್ತಾಯವಾಗಿಲ್ಲ. ಈ ಸಮೀಕ್ಷೆಗೆ ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿಈ ಹಿನ್ನೆಲೆಯಲ್ಲಿ ಈ ಸಮೀಕ್ಷೆ ಮುಕ್ತಾಯವಾಗುವವರೆಗೆ ಅಂದರೆ ಅಕ್ಟೋಬರ್ 18ರವರೆಗೆ ದಸರಾ ರಜೆಯನ್ನು ವಿಸ್ತರಿಸಿ ಸಿಎಂ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ. ಆದರೆ ಪೋಷಕರೇ ಗಮನಿಸಿ ಎಲ್ಲಾ ಶಾಲೆಗಳಿಗೂ ಈ ರಜೆ ವಿಸ್ತರಣೆ ಅನ್ವಯವಾಗುವುದಿಲ್ಲ.

ಹೌದು, ಸಿದ್ದರಾಮಯ್ಯ ಅವರು ಅಕ್ಟೋಬರ್ 18ರವರೆಗೆ ದಸರಾ ರಜೆಯನ್ನು ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಆದರೆ ಇದು ರಾಜ್ಯದ ಎಲ್ಲಾ ಶಾಲೆಗಳಿಗೂ ಅನ್ವಯವಾಗುವುದಿಲ್ಲ. ಸಿದ್ದರಾಮಯ್ಯ ಹೇಳಿರುವುದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಾತ್ರ. ಹೀಗಾಗಿ ಖಾಸಗಿ ಶಾಲೆಗಳಿಗೆ ಈ ರಜೆ ವಿಸ್ತರಣೆ ಅನ್ವಯವಾಗುವುದಿಲ್ಲ. ಆದ್ದರಿಂದ ಅಕ್ಟೋಬರ್, 7 ರಿಂದ ಖಾಸಗಿ ಶಾಲೆಗಳು ಓಪನ್ ಆಗಲಿದೆ.
Comments are closed.