Mysore: ಮೈಸೂರು ಅರಮನೆಯಿಂದ ಗಜಪಡೆಗೆ ವಿದಾಯ; ‘ಮುಂದಿನ ವರ್ಷ ಇವರೇ ಜಂಬೂ ಸವಾರಿ ಮಾಡಿಕೊಳ್ಳಲಿ’ ಮಾವುತರು ಬೇಸರ!

Mysore: ಕಾಡಿನಿಂದ ನಾಡಿಗೆ ಆಗಮಿಸಿ, ಎರಡು ತಿಂಗಳು ಮೈಸೂರಿನ (Mysore) ಅರಮನೆಯ ಆವರಣದಲ್ಲಿ ವಾಸ್ತವ್ಯ ಹೂಡಿ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಅಭಿಮನ್ಯು ನೇತೃತ್ವದ 14 ಆನೆಗಳ ಗಜಪಡೆಗೆ ಭಾನುವಾರ ಭಾವಪೂರ್ಣವಾಗಿ ಬೀಳ್ಕೊಡಲಾಯಿತು. ಈ ನಡುವೆ ಗೌರವ ಧನ ಇಲ್ಲದೇ ಮಾವುತರು ಬರೀಗೈಯಲ್ಲಿಯೇ ಬೇಸರದಿಂದ ಕಾಡಿಗೆ ತೆರಳಿದರು.

ಆಗಸ್ಟ್ 4 ರಂದು ಗಜಪಯಣದ ಮೂಲಕ ಹುಣಸೂರಿನ ವೀರನಹೊಸಳ್ಳಿಯಿಂದ ನಾಡಿಗೆ ಆಗಮಿಸಿದ ದಸರಾ ಆನೆಗಳು 60 ದಿನ ಮೈಸೂರಿನಲ್ಲಿಉಳಿದು ಯೋಧರ ಶಿಧಿಸ್ತಿಧಿನಂತೆ ನಿತ್ಯವೂ ಬೆಳಗ್ಗೆ, ಸಂಜೆ ತಾಲೀಮು ನಡೆಸಿ ನಾಡು ಮೆಚ್ಚುವ ರೀತಿ ಸ್ವಲ್ಪವೂ ವ್ಯತ್ಯಾಸವಾಗದಂತೆ ಜಂಬೂಸವಾರಿಯನ್ನು ನಡೆಸಿದವು. ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಮಾಡಿದ ಆನೆಗಳಿಗೆ ಭಾನುವಾರ ಅರಣ್ಯ ಇಲಾಖೆ ಹಾಗೂ ಮೈಸೂರಿನ ಜನತೆ ಭಾವಪೂರ್ಣವಾಗಿ ಬೀಳ್ಕೊಟ್ಟರು.
ಅರಮನೆ ಮಂಡಳಿಯಿಂದ ಜಂಬೂ ಸವಾರಿಯಲ್ಲಿಭಾಗವಹಿಸಿದ ಮಾವುತರು, ಕಾವಾಡಿಗಳಿಗೆ ಗೌರವಧನ ನೀಡುವುದು ವಾಡಿಕೆ. ಕಳೆದ ವರ್ಷ 5 ಸಾವಿರ ರೂ. ಹೆಚ್ಚಳ ಮಾಡಿ 15 ಸಾವಿರ ನೀಡಲಾಗಿತ್ತು. ಆದರೆ, ಈ ಬಾರಿ ಯಾವುದೇ ಗೌರವ ಧನ ನೀಡದೆ ಬರಿಗೈಯಲ್ಲಿಕಳುಹಿಸಲಾಯಿತು.
ರಾಜವಂಶಸ್ಥೆ ಶೃತಿ ಅವರು ನೀಡಿದ ಗೌರವಧನ ಬಿಟ್ಟರೆ ಮಂಡಳಿಯಿಂದ ಏನನ್ನೂ ನೀಡಲಿಲ್ಲ. ಇದರಿಂದ ಮಾವುತರು, ಕಾವಾಡಿಗಳು ಬೇಸರಗೊಂಡರು. ದಸರಾ ಯಶಸ್ವಿಗೊಳಿಸಿದ ನಮಗೆ ಈ ರೀತಿ ಮಾಡುವುದು ಸರಿಯಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಕೊಡಬೇಕು. ಏನೂ ಕೊಡದೆ ಅಪಮಾನ ಮಾಡುತ್ತಿದ್ದಾರೆ. ಮುಂದಿನ ವರ್ಷ ಇವರೇ ಜಂಬೂ ಸವಾರಿ ಮಾಡಿಕೊಳ್ಳಲಿ ಎಂದು ಅಸಮಾಧಾನ ಹೊರಹಾಕಿದರು. ಡಿಸಿಎಫ್ ಪ್ರಭುಗೌಡ ಮಾವುತರನ್ನು ಸಮಾಧಾನಪಡಿಸಿ ಕಳುಹಿಸಿದರು.
ಇದನ್ನೂ ಓದಿ:Puttur: ಪುತ್ತೂರು: ಅಕ್ಷಯ್ ಕಲ್ಲೇಗ ಕೊಲೆ ಆರೋಪಿ ಜಾಮೀನು ಅರ್ಜಿ ವಜಾ
2025ರ ವಿಶ್ವವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಆನೆ ಮಾವುತರು ಮತ್ತು ಕಾವಾಡಿಗಳಿಗೆ ನಗದು ರೂಪದಲ್ಲಿ”ಗೌರವ ಧನ” ನೀಡಲಾಗುತ್ತಿದೆ. ಆದರೆ, ಈ ಬಾರಿ ಡಿಸಿಎಫ್ ಭಾನುವಾರ ಬೆಳಗ್ಗೆ ಮಾವುತರು ಮತ್ತು ಕಾವಾಡಿಗಳ ವಿವರದ ಪಟ್ಟಿಯನ್ನು ವಿಳಂಬವಾಗಿ ನೀಡಿದ್ದಾರೆ. ಬ್ಯಾಂಕ್ ರಜೆ ಇದ್ದ ಕಾರಣ ಹಣ ಡ್ರಾ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಅವರವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ‘ಗೌರವ ಧನ’ವನ್ನು ಜಮೆ ಮಾಡಲಾಗುವುದು ಎಂದು ಅರಮನೆ ಮಂಡಳಿ ನಿರ್ದೇಶಕ ಸುಬ್ರಹ್ಮಣ್ಯ ಪ್ರಕಟಣೆಯಲ್ಲಿತಿಳಿಸಿದ್ದಾರೆ.
Comments are closed.