Rakshith Shetty : ಕೊನೆಗೂ ‘ಕಾಂತಾರ’- 1′ ಬಗ್ಗೆ ಮೌನ ಮುರಿದ ರಕ್ಷಿತ್ ಶೆಟ್ಟಿ- ವೈರಲ್ ಆಯ್ತು ಕಾಮೆಂಟ್ !!

Rakshith Shetty: ಕನ್ನಡಿಗರು ಹೆಮ್ಮೆ ಪಡುವಂತಹ ‘ಕಾಂತಾರ: ಚಾಪ್ಟರ್ 1’ 2 ದಿನ ಕೂಡ ಎಲ್ಲ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ. ಈಗ ವೀಕೆಂಡ್ನಲ್ಲಿ ಕೂಡ ಸಿನಿಮಾ ಅಬ್ಬರಿಸುತಿದೆ. ಇದೀಗ ರಿಶಬ್ ಶೆಟ್ಟಿಯ ಆಪ್ತ ಸ್ನೇಹಿತ ರಕ್ಷಿತ್ ಶೆಟ್ಟಿ ರಿಪ್ಲೇ ಮಾಡಿದ್ದಾರೆ.

“ಅತ್ಯುತ್ತಮ ನಟನಿಗೆ ರಾಜ್ಯ ಸರ್ಕಾರದಿಂದ ಗೌರವ. ಅಭಿನಂದನೆ ಮಗಾ” ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿ “ಥ್ಯಾಂಕ್ಸ್ ಮಗಾ. ಕಾಂತಾರ- 1 ಚಿತ್ರದ ಅದ್ಭುತ ಯಶಸ್ಸಿಗೆ ಹೃತ್ಪೂರ್ವಕ ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ. ಇದು ಸಖತ್ ವೈರಲ್ ಆಗುತ್ತಿದೆ. ಹೆಚ್ಚು ಕಮ್ಮಿ ಒಂದೇ ಸಮಯದಲ್ಲಿ ಇಬ್ಬರೂ ಚಿತ್ರರಂಗಕ್ಕೆ ಬಂದವರು. ಒಬ್ಬರ ಬೆನ್ನಿಗೆ ಒಬ್ಬರು ನಿಂತವರು. ಒಬ್ಬರ ಯಶಸ್ಸನ್ನು ಮತ್ತೊಬ್ಬರು ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ;Mahindra THAR 2025: ಭಾರತದಲ್ಲಿ ಕೇವಲ 10 ಲಕ್ಷ ರೂ.ಗೆ ಹೊಸ ಮಹೀಂದ್ರಾ ಥಾರ್ ಬಿಡುಗಡೆ
ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಇನ್ನು ಸಿನಿಮಾ ನೋಡಿ ಪ್ರತಿಕ್ರಿಯಿಸಿಲ್ಲ. ಈ ಬಗ್ಗೆ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ‘ಕಾಂತಾರ’ ಸಿನಿಮಾ ನೋಡಿ ಓಡಿ ಬಂದು ರಿಷಬ್ ಶೆಟ್ಟಿಯನ್ನು ರಕ್ಷಿತ್ ಅಪ್ಪಿಕೊಂಡಿದ್ದು ಅಭಿಮಾನಿಗಳು ಮರೆತ್ತಿಲ್ಲ. ಆದರೆ ಈ ಬಾರಿ ಸುಳಿವೇ ಇಲ್ಲ ಎಂದು ಕೆಲವರು ಕೇಳುತ್ತಿದ್ದಾರೆ.
Comments are closed.