Mahindra SUV: GST ಹಾಗೂ ನವರಾತ್ರಿ ಎಫೆಕ್ಟ್ – ಶೇ. 60 ರಷ್ಟು ಏರಿಕೆ ಕಂಡ ಮಹೀಂದ್ರಾ SUV ಮಾರಾಟ!!

Mahindra SUV: ನವರಾತ್ರಿ ಹಿನ್ನೆಲೆಯಲ್ಲಿ ದೇಶಾದ್ಯಂತ ಕಾರು-ಬೈಕುಗಳ ಮಾರಾಟದಲ್ಲಿ ಭರ್ಜರಿ ಏರಿಕೆ ಕಂಡಿದೆ. ಅದರಲ್ಲೂ ಮಹೀಂದ್ರಾ & ಮಹೀಂದ್ರಾ ತನ್ನ ವಾಹನಗಳ ಬಂಪರ್ ಮಾರಾಟವನ್ನು ಮಾಡಿದೆ.

ಹೌದು, ದಸರಾ ಹಬ್ಬದ ಪ್ರಯೋಜನಗಳ ಜೊತೆಗೆ, ಜಿಎಸ್ಟಿ ದರ ಇಳಿಕೆಯಿಂದ ಎಸ್ಯುವಿಗಳ ಬೆಲೆಗಳು ಕಡಿಮೆಯಾದ ಕಾರಣ ವಾಹನ ಪ್ರಿಯರು ಮಹೀಂದ್ರಾ ಶೋರೂಮ್ಗೆ ತೆರಳಿದ ದೊಡ್ಡ ಪ್ರಮಾಣದಲ್ಲಿ ಬುಕ್ ಮಾಡಿದ್ದಾರೆ.
ಇದನ್ನೂ ಓದಿ;Kantara-1: ರಾಷ್ಟ್ರಪತಿ ಭವನದಲ್ಲಿ ಕಾಂತಾರ-1 ಚಿತ್ರ ಪ್ರದರ್ಶನ !!
ಮಹೀಂದ್ರಾ & ಮಹೀಂದ್ರಾ ಸೆಪ್ಟೆಂಬರ್ನಲ್ಲಿ ಒಟ್ಟು 100,298 ಯುನಿಟ್ಗಳ ಮಾರಾಟವನ್ನು ವರದಿ ಮಾಡಿದೆ, ಇದು ಸೆಪ್ಟೆಂಬರ್ 2024 ಕ್ಕೆ ಹೋಲಿಸಿದರೆ 16% ಹೆಚ್ಚಳವಾಗಿದೆ. ಹಬ್ಬದ ಋತುವಿನಲ್ಲಿ ವಾಹನ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ. ನವರಾತ್ರಿಯ ಮೊದಲ ಒಂಬತ್ತು ದಿನಗಳಲ್ಲಿ ಎಸ್ಯುವಿ ಚಿಲ್ಲರೆ ಮಾರಾಟವು 60% ಕ್ಕಿಂತ ಹೆಚ್ಚು ಹೆಚ್ಚಾಗಿದೆ. ಅದೇ ರೀತಿ, ವಾಣಿಜ್ಯ ವಾಹನಗಳ ಚಿಲ್ಲರೆ ಮಾರಾಟವು ಸಹ 70% ಕ್ಕಿಂತ ಹೆಚ್ಚು ಹೆಚ್ಚಾಗಿದೆ.
Comments are closed.