Pratap Simha: ‘ಕಾಂತಾರ- 1’ ನೋಡಲು 68,920 ಕೊಟ್ಟು ಇಡೀ ಥಿಯೇಟರ್ ಬುಕ್ ಮಾಡಿದ ಪ್ರತಾಪ್ ಸಿಂಹ !!

Prathap Simha: ಕನ್ನಡಿಗರು ಹೆಮ್ಮೆ ಪಡುವಂತಹ ‘ಕಾಂತಾರ: ಚಾಪ್ಟರ್ 1’ 2 ದಿನ ಕೂಡ ಎಲ್ಲ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ. ಈಗ ವೀಕೆಂಡ್ನಲ್ಲಿ ಕೂಡ ಸಿನಿಮಾ ಅಬ್ಬರಿಸಲಿದೆ. ಜನಸಾಮಾನ್ಯರು ಮಾತ್ರವಲ್ಲದೇ ರಾಜಕೀಯ ಕ್ಷೇತ್ರದವರು ಕೂಡ ‘ಕಾಂತಾರ: ಚಾಪ್ಟರ್ 1’ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಪ್ರತಾಪ್ ಸಿಂಹ (Pratap Simha) ಅವರು ಸಿನಿಮಾ ನೋಡಲು ಇಡೀ ಚಿತ್ರಮಂದಿರದ ಟಿಕೆಟ್ ಬುಕ್ ಮಾಡಿದ್ದಾರೆ.

ಹೌದು, ಒಟ್ಟು 197 ಟಿಕೆಟಿಗೆ ಪ್ರತಾಪ್ ಸಿಂಹ ₹68,920 ಪಾವತಿಸಿ ಥಿಯೇಟರ್ ಬುಕ್ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ಮಾಜಿ ಸಂಸದ ಪ್ರತಾಪ್ ಸಿಂಹ, ‘ಭಾನುವಾರ 4 ಗಂಟೆಗೆ ಕಾರ್ಯಕರ್ತರೆಲ್ಲ ಸೇರಿ ಕಾಂತಾರ-2 ನೋಡೋಣ, ಡಿಆರ್ಸಿಯಲ್ಲಿ ಫುಲ್ ಸ್ಕ್ರೀನ್ ಬುಕ್ ಮಾಡಿದ್ದೇನೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ಅಲ್ಲದೆ ಟಿಕೆಟ್ ಬುಕಿಂಗ್ ವಿವರವನ್ನು ಕೂಡ ಪ್ರತಾಪ್ ಸಿಂಹ ಅವರು ಹಂಚಿಕೊಂಡಿದ್ದಾರೆ. DRCಯಲ್ಲಿ 2ನೇ ಸ್ಕ್ರೀನ್ನಲ್ಲಿ ಒಟ್ಟು 197 ಟಿಕೆಟ್ಗಳನ್ನು ಅವರು ಬುಕ್ ಮಾಡಿದ್ದಾರೆ. ಇದಕ್ಕಾಗಿ ಅವರು ಒಟ್ಟು 68,920 ರೂಪಾಯಿ ಖರ್ಚು ಮಾಡಿದ್ದಾರೆ. ಸಿನಿಮಾ ನೋಡಿದ ಬಳಿಕ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
Comments are closed.