India: ಭಾರತದ ಕೃಷಿ ಉತ್ಪನ್ನ, ಔಷಧಿ ಮತ್ತಿತರ ವಸ್ತು ಖರೀದಿಗೆ ರಷ್ಯಾ ನಿರ್ಧಾರ

India: ಭಾರತದೊಂದಿಗೆ (India) ವ್ಯಾಪಾರ ಅಸಮತೋಲನವನ್ನು ತಗ್ಗಿಸಲು ಭಾರತದಿಂದ ಹೆಚ್ಚಿನ ಕೃಷಿ ಉತ್ಪನ್ನಗಳು ಮತ್ತು ಔಷಧಿಗಳನ್ನು ಖರೀದಿಸುವುದು ಸೇರಿದಂತೆ ಇನ್ನಿತರ ಕ್ರಮಗಳನ್ನು ರೂಪಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ್ದಾರೆ.

ಡಿಸೆಂಬರ್ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಾರ್ಷಿಕ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡುವ ವಾರಗಳ ಮೊದಲು ಪುಟಿನ್ ಘೋಷಣೆ ಮಾಡಿದ್ದಾರೆ.
ಅಮೆರಿಕದ ದಂಡನಾತ್ಮಕ ಸುಂಕಗಳಿಂದಾಗಿ ಭಾರತ ಎದುರಿಸುತ್ತಿರುವ ನಷ್ಟಗಳನ್ನು ರಷ್ಯಾದಿಂದ ಕಚ್ಚಾ ತೈಲ ಆಮದುಗಳಿಂದ ಸಮತೋಲನಗೊಳಿಸಲಾಗುತ್ತದೆ, ಜೊತೆಗೆ ಅದು ಸಾರ್ವಭೌಮ ರಾಷ್ಟ್ರವಾಗಿ ಪ್ರತಿಷ್ಠೆಯನ್ನು ಪಡೆಯುತ್ತದೆ ಎಂದು ಪುಟಿನ್ ಹೇಳಿದ್ದಾರೆ.
ಇದನ್ನೂ ಓದಿ;India economy: ಜಾಗತಿಕ ಪ್ರಕ್ಷುಬ್ದತೆಯ ನಡುವೆಯೂ ಭಾರತ ಸ್ಥಿರ ಶಕ್ತಿಯಾಗಿದೆ: ಹಣಕಾಸು ಸಚಿವೆ
ಭಾರತದ ಮೇಲೆ ಅಮೆರಿಕ ವಿಧಿಸಿದ ಒಟ್ಟು ಸುಂಕಗಳನ್ನು ಶೇಕಡಾ 50 ಕ್ಕೆ ತರುತ್ತದೆ. ವ್ಯಾಪಾರ ಅಸಮತೋಲನವನ್ನು ತೆಗೆದುಹಾಕಲು, ರಷ್ಯಾ ಭಾರತದಿಂದ ಹೆಚ್ಚಿನ ಕೃಷಿ ಉತ್ಪನ್ನಗಳು ಮತ್ತು ಔಷಧಿಗಳನ್ನು ಖರೀದಿಸಬಹುದು ಎಂದು ಪುಟಿನ್ ಹೇಳಿದ್ದಾರೆ.
Comments are closed.