Kantara Movie AI Review: ಕಾಂತಾರ 1 ಚಿತ್ರದ ಭಯಂಕರ ರಿವ್ಯೂ ಕೊಟ್ಟ AI: ಏನು ಹೇಳಿದ್ದಾನೆ ಈ ಬುದ್ದಿವಂತ ?

Share the Article

Kantara Movie AI Review: ಕಾಂತಾರ 1ರಲ್ಲಿನ ಹಲವಾರು ನ್ಯೂನತೆಗಳನ್ನು ಜಗತ್ತಿನ ಬುದ್ದಿವಂತ AI ಪಟ್ಟಿ ಮಾಡಿದ್ದಾನೆ. AI ಚಲನಚಿತ್ರ ವಿಮರ್ಶೆಯು ಚಿತ್ರದಲ್ಲಿನ ನಿರ್ದಿಷ್ಟ ನ್ಯೂನತೆಗಳನ್ನು ಸೂಕ್ಷ್ಮವಾಗಿ ಗಮನಿಸಿದೆ. ಕಾಂತಾರ ಚಿತ್ರದ ಪ್ರಿಕ್ವೆಲ್ ಆಗಿರುವ ಕಾಂತಾರ 1 ಚಿತ್ರವನ್ನು ವಿಮರ್ಶಕರು ಅಸಂಗತ ನಿರೂಪಣೆ, ಅಸಮಾನ ವೇಗ, ಬಲವಂತದ ಹಾಸ್ಯ, ಕಠೋರ ದೃಶ್ಯಗಳಲ್ಲಿ ನುಸುಳಿದ ಅನಗತ್ಯ ಹಾಸ್ಯ, ವರ್ಕ್ ಆಗದ ಕೆಮಿಸ್ಟ್ರಿ ಹಾಗೂ ಮತ್ತಿತರ 2 ರೀತಿಯ ಪ್ರಾಥಮಿಕ ತಪ್ಪುಗಳಾಗಿ ವಿಂಗಡಿಸಿ ಗುರುತಿಸಿದ್ದಾರೆ.

ನಿರೂಪಣೆ ಮತ್ತು ವೇಗದ ಸಮಸ್ಯೆ:

ಮೊದಲರ್ಧ ಗೊಂದಲಮಯ: ಚಿತ್ರಕಥೆಯು ಯಾವುದೋ ಒಂದು ಘಟನೆಯನ್ನು ವಿವರಿಸಲು ಹೊರಟ ಹಾಗಿದೆ ಮೊದಲರ್ಧದ ಭಾಗ. ಚಿತ್ರದ ಮೊದಲಾರ್ಧದಲ್ಲಿ ಚದುರಿದ ಮತ್ತು ಅಸಮಂಜಸ ನಿರೂಪಣೆಯನ್ನು ವಿಮರ್ಶಕರು ಗುರುತಿಸಿದ್ದಾರೆ. ಹಲವಾರು ಕನ್ಫ್ಯೂಸ್ ಹುಟ್ಟಿಸುವ ಕಥೆಗಳನ್ನು ಒಟ್ಟಾಗಿ ಪೋಣಿಸ ಹೊರಟಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ. ಹಲವು, ಮನಸ್ಸಿಗೆ ಬಂದ ಎಲ್ಲ ಅನಗತ್ಯ ಅಂಶಗಳನ್ನು ಒಂದು ಕಡೆ ಜೋಡಿಸಿ ಒತ್ತಾಯದ ಕಥೆ ನೇಯಲು ಪ್ರಯತ್ನಿಸುದ ಹಾಗಿರುವ ಕಾರಣ ಕಥೆ ಮನಸ್ಸಿಗೆ ಮುಟ್ಟುವುದಿಲ್ಲ. ಎಲ್ಲೋ ತುಂಡು ತುಂಡಾಗಿ, ಕಥೆಯಾಗುವ ಬದಲು ಘಟನೆಗಳ ಗುಂಪಿನ ಥರ ಅದು ಗೋಚರಿಸುತ್ತದೆ. ಹಳೆಯ ಕಾಂತಾರದ ಜೀವ ಇದ್ದದ್ದು ಆದರ ಭಾವನಾತ್ಮಕ ಅಂಶದಲ್ಲಿ. ಈ ಕಾಂತಾರ 1ರಲ್ಲಿ ಭಾವನಾತ್ಮಕ ಎಳೆ ಕಳೆದುಹೋಗಿದೆ. ಬಲವಾದ ಭಾವನಾತ್ಮಕ ತಿರುಳನ್ನು ಹೊಂದಿದ್ದ ಮೂಲ ಚಿತ್ರಕ್ಕೆ ಹೋಲಿಸಿದರೆ, ಪ್ರೀಕ್ವೆಲ್‌ನ ಭಾವನಾತ್ಮಕ ಅಂಶ ಅದೃಶ್ಯವಾಗಿದೆ ಎಂದು ವಿಮರ್ಶಕರು ಭಾವಿಸಿದ್ದಾರೆ. ಅಲ್ಲಲ್ಲಿ ಅನೇಕ ಪ್ರಬಲ ದೃಶ್ಯಗಳ ಇದ್ದರೂ, ಪಾತ್ರಗಳು ಮನಸ್ಸನ್ನು ತಟ್ಟುವುದಿಲ್ಲ. ಪ್ರೇಕ್ಷಕರನ್ನು ಚಿತ್ರ ತಟ್ಟಿ ಹೃದಯ ಮುಟ್ಟೋದಿಲ್ಲ.

ಅನಗತ್ಯ ಅಂಶಗಳ ಮೇಲೆ ಫೋಕಸ್:

ಕಾಂತರಾ ಚಿತ್ರದ ಇನ್ನೊಂದು ದೊಡ್ಡ ವೀಕ್ನೆಸ್ ಎಂದರೆ ಕೆಲವು ದೃಶ್ಯಗಳು ಕೇವಲ ಮೇಕಿಂಗ್ ಅನ್ನು ತೋರಿಸಲಷ್ಟೇ ಮಾಡಿದ ಹಾಗಿದೆ. ಉದಾಹರಣೆಗೆ ಚಿತ್ರದಲ್ಲಿ ಬರುವ ಬಾಂಗ್ರ ಮಾರುಕಟ್ಟೆಯಲ್ಲಿ ರಥ ಮತ್ತು ಹುಚ್ಚಾಗಿ ಓಡುವ ಕುದುರೆಯನ್ನು ಒಳಗೊಂಡಿರುವ ಸನ್ನಿವೇಶಗಳು ಅನಗತ್ಯ ಅನ್ನಿಸುತ್ತದೆ. ಅದು ಕೇವಲ ‘ಬೆರ್ಮೆ’ ರಿಷಬ್‌  ಶೆಟ್ಟಿಯನ್ನು ಹೀರೋ ಆಗಿ ಪ್ರೊಜೆಕ್ಟ್ ಮಾಡಲೆಂದೇ ಸೃಷ್ಟಿಸಿದ ದೃಶ್ಯಗಳಾಗಿ ಮಾತ್ರ ಗೋಚರಿಸುತ್ತವೆ. ಈ ಸೀನ್ ಗಳು ಕಥೆಯನ್ನು ಮುಂದುವರಿಸದೆ ಅಮೂಲ್ಯವಾದ ಸಮಯವನ್ನು ತಿಂದು ಹಾಕಿದೆ ಎಂದು ಬರೆದಿದ್ದಾನೆ ನಮ್ಮ ಬುದ್ದಿವಂತ AI.

ಏನೇನೂ ಪರಿಣಾಮಕಾರಿಯಾಗಿಲ್ಲದ ಹಾಸ್ಯ

ಸಿನಿಮಾದಲ್ಲಿ ಅಥವಾ ಯಾವುದೇ ಕಥೆಯಲ್ಲಿ ಹಾಸ್ಯ ಅನ್ನೋದು ಅತ್ಯಂತ ದೊಡ್ಡ ಹಿಡಿದಿಡುವ ಅಂಶ. ಆದರೆ ಕಾಂತಾರ 1 ರಲ್ಲಿ ಹಾಸ್ಯ ಸಂಪೂರ್ಣ ವಿಫಲವಾಗಿದೆ. ದಿಗ್ಗಜ ಹಾಸ್ಯ ಕಲಾವಿದರು ಇದ್ದರೂ ಶಾರ್ಪ್ ಹ್ಯೂಮರ್ ಸೃಷ್ಟಿಸುವಲ್ಲಿ ರಿಶಬ್ ಶೆಟ್ಟಿ ಸೋತಿದ್ದಾರೆ. ಅಧ್ಯಾಯ 1 ರಲ್ಲಿ ಇದ್ದ, ಜನರಿಗೆ ಇಷ್ಟವಾಗಿದ್ದ ತಿಳಿಹಾಸ್ಯದ ಪ್ರಯತ್ನಗಳು ಇಲ್ಲಿಲ್ಲ. ಎಲ್ಲಿಂದಲೋ ಹಾಸ್ಯ ಅನ್ನಿಸುವ ಸಂಭಾಷಣೆ ಒಂದನ್ನು ತಂದು ಅದನ್ನು ಕಟ್ ಪೀಸ್ ಮಾಡಿ ಎಡಿಟ್ ಮಾಡಿ ಜೋಡಿಸಿದ ಹಾಗೆ ಪೇಲವ ಕಾಮಿಡಿ ಇಲ್ಲಿದೆ. ಅದು ಬಲವಂತವಾಗಿ ಭಾಸವಾಗುತ್ತವೆ. ಕೆಲವು ವಿಮರ್ಶಕರು ಹಾಸ್ಯದ ಸನ್ನಿವೇಶಗಳನ್ನು ಎಳೆಯಲಾಗಿದೆ ಎಂದು ಬರೆದಿದ್ದಾರೆ ಎಂದಿದ್ದಾನೆ ಎಐ ಮಹಾಶಯ.

ಕಠೋರ ದೃಶ್ಯಗಳಲ್ಲಿ ನುಸುಳಿದ ಅನಗತ್ಯ ಹಾಸ್ಯ:

ಕನ್ನಡ ಕಾವ್ಯ ಮೀಮಾಂಸೆಯಲ್ಲಿ ‘ಔಚಿತ್ಯ ಪ್ರಜ್ಞೆ’ ಎಂಬದೊಂದು ಗ್ರಂಥವಿದೆ. ಅದನ್ನು 11ನೆಯ ಶತಮಾನದಲ್ಲಿ ಕ್ಷೇಮೇoದ್ರ ಎಂಬ ಕವಿ ಬರೆದಿದ್ದಾನೆ. ಔಚಿತ್ಯವನ್ನು ‘wisdom of appropriateness” or “proper perception” ಎಂದು ಅರ್ಥ ಮಾಡಿಕೊಳ್ಳಬೇಕು. ಹಾಸ್ಯ ಸೋಡದ ಥರ ಅಲ್ಲ. ಎಲ್ಲದಕ್ಕೂ ಅದನ್ನು ಮಿಕ್ಸ್ ಹೊಡೆಯಲಾಗುವುದಿಲ್ಲ. ತೀವ್ರ ಸಸ್ಪೆನ್ಸ್ ಅನ್ನಿಸುವ ಸನ್ನಿವೇಶಗಳಲ್ಲಿ ಹಾಸ್ಯವನ್ನು ಸೇರಿಸಿದ್ದಕ್ಕಾಗಿ ಈ ಸಿನೆಮಾವು ಟೀಕಿಸಲ್ಪಟ್ಟಿದೆ. ಇದನ್ನು ವಿಮರ್ಶಕರು ತಪ್ಪು ಹೆಜ್ಜೆ ಎಂದು ಕರೆದಿದ್ದಾರೆ. ಎಲ್ಲಿ ಯಾವುದನ್ನು ಸೇರಿಸಬೇಕು, ಸೇರಿಸಬಾರದು ಅನ್ನೋದನ್ನು ಔಚಿತ್ಯ ಪ್ರಜ್ಞೆ ವಿವರಿಸುತ್ತದೆ. ಅದು ಓರ್ವ ನಿರ್ದೇಶಕನಿಗೆ ತೀರಾ ಅಗತ್ಯ.

ಕಥಾವಸ್ತುವಿನ ಮೇಲೆ ಟೀಕೆ

ನಾಯಕನ ಮೇಲೆ ಮಾತ್ರ ಹೆಚ್ಚಿನ ಒತ್ತು:
ಚಲನಚಿತ್ರವು ಕಾಂತಾರ 1 ಚಿತ್ರವು ಹೇಳಿದಂತೆ, ಒಂದು ವಿಶಾಲ ದಂತಕಥೆಗಿಂತ ಬೆರ್ಮೆ ಪಾತ್ರದ ಸುತ್ತ ಹೆಣೆದ ಕಥೆಯಾಗಿ ಭಾಸವಾಗುತ್ತಿದೆ ಎಂದು ವಿಶ್ಲೇಷಕರು ವಿವರಿಸಿದ್ದಾರೆ. ಕಥೆಯು ನಾಯಕನ ಮೇಲೆ ಹೆಚ್ಚು ಕೇಂದ್ರೀಕರಿಸಲು, ನಿರೂಪಣೆಯ ಇತರ ನಿರ್ಣಾಯಕ ಅಂಶಗಳನ್ನು ಚಿತ್ರವು ನಿರ್ಲಕ್ಷಿಸಿದೆ.

ಕಳಪೆ ಕೆಮಿಸ್ಟ್ರಿ:
ನಾಯಕ ನಾಯಕಿ ನಟರಾದ ರಿಷಬ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ತಮ್ಮ ವೈಯಕ್ತಿಕ ಅಭಿನಯಕ್ಕಾಗಿ ಪ್ರಶಂಸಿಸಲ್ಪಟ್ಟರೂ, ಅವರ ತೆರೆಯ ಮೇಲಿನ ಕೆಮಿಸ್ಟ್ರಿ ವರ್ಕ್ ಆಗಲಿಲ್ಲ ಎಂದು ಗುರುತಿಸಲಾಗಿದೆ. ನಿರ್ದಿಷ್ಟವಾಗಿ ಭಾವನಾತ್ಮಕ ಮತ್ತು ಪ್ರಣಯ ದೃಶ್ಯಗಳಲ್ಲಿ!!

ಬಳಕೆಯಾಗದ ಉಪಕಥಾ ವಸ್ತುಗಳು: ಬ್ರಹ್ಮರಾಕ್ಷಸರಂತಹ ಕೆಲವು ಉಪಕಥಾವಸ್ತುಗಳು ಸರಿಯಾಗಿ ಬಳಕೆಯಾಗದ ಕಾರಣ ಅವು ಮುಖ್ಯ ಕಥೆಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುವುದಿಲ್ಲ ಎಂದು ಕೆಲವು ವಿಮರ್ಶಕರು ಗಮನಸೆಳೆದಿದ್ದಾರೆ.

ಹೆಚ್ಚುವರಿ ಟೀಕೆ:
ತಪ್ಪಿಕೊಂಡ ಆಧ್ಯಾತ್ಮಿಕ ಸಂಪರ್ಕ: ಸಂಪೂರ್ಣ ಭಕ್ತಿ ನಾಟಕವನ್ನು ನಿರೀಕ್ಷಿಸುವ ಕೆಲವು ವೀಕ್ಷಕರು ನಿರಾಶೆಗೊಂಡಿದ್ದಾರೆ, ಏಕೆಂದರೆ ಕಾಂತಾರ 1 ಆಕ್ಷನ್-ಸಾಹಸ ಪ್ರಕಾರಕ್ಕೆ ಹೆಚ್ಚು ಒಲವು ತೋರುತ್ತದೆ. ಇಲ್ಲಿ ಆಧ್ಯಾತ್ಮಿಕ ಅಂಶಗಳು ದ್ವಿತೀಯ ಸ್ಥಾನಕ್ಕೆ ಇಳಿದಿದೆ, ಅದು ಸಿನಿಮಾದ.ದೊಡ್ಡ ಮೈನಸ್ ಪಾಯಿಂಟ್! ಅಲ್ಲಲ್ಲಿ ಜಾನಪದೀಯ, ಮನಸ್ಸು ಕಲಕಬಲ್ಲ ಆದಿವಾಸಿ ಹಾಡು- ಸಾಹಿತ್ಯ ಇದ್ದರೂ ಸಿನಿಮಾ ಅಂತರಂಗ ಮುಟ್ಟಲ್ಲ. ಇದು ನಮ್ಮ ಆರ್ಟಿಫಿಶಿಯಲ್ ಇಂಟಲಿಜೆಂಟ್ ಮಹಾಶಯ ಕೊಟ್ಟ ವರದಿಯ ಸಂಕ್ಷಿಪ್ತ ರೂಪ. ಜತೆಗೆ ನಮ್ಮದು ಒಂದಿಷ್ಟು ಮಸಾಲ! (ಲೇಖನ: ಸುದರ್ಶನ್ ಬಿ. ಪ್ರವೀಣ್, ಬೆಳಾಲು )

ಇದನ್ನೂ ಓದಿ;Cough Syrup Controversy: ಕೆಮ್ಮು ಔಷಧಿ ವಿವಾದದ ಬಗ್ಗೆ ಆರೋಗ್ಯ ಇಲಾಖೆಯ ಸ್ಪಷ್ಟೀಕರಣ: ‘ಸಾವಿಗೆ ಕಾರಣ ನಿರ್ಲಕ್ಷ್ಯ, ಸಿರಪ್ ಅಲ್ಲ’

Comments are closed.