Kerala: ತೆಂಗಿನಕಾಯಿ ಕೊಡಿ, ಹೊಟ್ಟೆ ತುಂಬಾ ಊಟ ಮಾಡಿ – ಕೇರಳದಲ್ಲೊಂದು ಅಪರೂಪದ ಹೋಟೆಲ್

Share the Article

Kerala: ಹೋಟೆಲ್ ಗಳಲ್ಲಿ ಪ್ಲೇಟ್ ಲೆಕ್ಕದಲ್ಲಿ ಊಟವಿದ್ದರೆ, ಇನ್ನು ಕೆಲವು ಹೋಟೆಲ್ಗಳಲ್ಲಿ ಫುಲ್ ಮೀಲ್ಸ್ ಇರುತ್ತದೆ. ಇಲ್ಲೆಲ್ಲ ನಾವು ದುಡ್ಡು ಕೊಟ್ಟು ಹೊಟ್ಟೆ ತುಂಬಾ ಊಟ ಮಾಡುತ್ತೇವೆ. ಆದರೆ ತೆಂಗಿನಕಾಯಿ ಕೊಟ್ಟು ಹೋಟೆಲ್ನಲ್ಲಿ ಹೊಟ್ಟೆ ತುಂಬ ಊಟ ಮಾಡಬಹುದು ಎಂಬುದು ನಿಮಗೆ ಗೊತ್ತಾ? ಕೇರಳದಲ್ಲೊಂದು ಅಪರೂಪದ ಹೋಟೆಲ್ ಈ ರೀತಿಯ ವ್ಯವಸ್ಥೆಯನ್ನು ಜಾರಿ ಮಾಡಿಕೊಂಡಿದೆ.

ಹೌದು, ಜಿಲ್ಲೆಯ ಪನೂರು ಬಳಿಯ ಪೊಲಿಯೂರಿನಲ್ಲಿ ಇಂದಿಗೂ ಹಣದ ವ್ಯವಹಾರವೇ ಇಲ್ಲದೇ, ಪ್ರಾಚೀನ ಆರ್ಥಿಕತೆಯಲ್ಲಿ ಜಾರಿಯಲ್ಲಿದ್ದ ವಿನಿಮಯ ವ್ಯವಸ್ಥೆ ಮೂಲಕ ವಹಿವಾಟು ನಡೆಯುತ್ತದೆ. ಶ್ರೀಧರನ್ ಅವರ ಈ ಪುಟ್ಟ ಹೋಟೆಲ್‍ನಲ್ಲಿ ಒಂದು ತೆಂಗಿನಕಾಯಿ ಕೊಟ್ಟರೆ ಪರೋಟಾ ಮತ್ತು ಚಹಾ ಸವಿಯಬಹುದು. ಎರಡು ಕಾಯಿ ಕೊಟ್ಟರೆ ಮರಗೆಣಸಿನ ಅಥವಾ ಚಿಕನ್ ಕರಿ ಇರುವ ಭರ್ಜರಿ ಭೋಜನ ಸಿಗುತ್ತದೆ.

ಇದನ್ನೂ ಓದಿ;UIDAI: ಆಧಾರ್ ನವೀಕರಣಕ್ಕೆ ಶುಲ್ಕ ಹೆಚ್ಚಳ!!

ಗ್ರಾಮದವರೇ ಹೆಚ್ಚಾಗಿ ಭೇಟಿ ನೀಡುವ ಇಲ್ಲಿ ರೈತರು ಹಣದ ಬದಲು ಸಾಮಾನ್ಯವಾಗಿ ಬಾಳೆಹಣ್ಣು, ಹಲಸಿನಹಣ್ಣು ಅಥವಾ ತರಕಾರಿಗಳನ್ನು ಕೂಡಾ ನೀಡುತ್ತಾರೆ. ಈ ಅಪರೂಪದ ಹೋಟೆಲ್ ಇದೀಗ ಜಾಲತಾಣಿಗರ ಗಮನ ಸೆಳೆದಿದೆ. ಕ್ಯಾಮೆರಾ ತೂಗಿಹಾಕಿಕೊಂಡು ಬರುವವರು ಪರೋಟಾ ಹಿಟ್ಟು ಕಲಸುವುದರಿಂದ ಹಿಡಿದು ಚಹಾ ಮಾಡುವರೆಗೂ ಪ್ರತಿಯೊಂದನ್ನೂ ಕ್ಲಿಕ್ಕಿಸಿ ಯೂಟ್ಯೂಬ್ ಅಥವಾ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದು, ವಿಡಿಯೊಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.

Comments are closed.