Home News Tirupathi : ತಿರುಪತಿ ತಿರುಮಲ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ!! ಹೆಚ್ಚಿದ ಭದ್ರತೆ

Tirupathi : ತಿರುಪತಿ ತಿರುಮಲ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ!! ಹೆಚ್ಚಿದ ಭದ್ರತೆ

Hindu neighbor gifts plot of land

Hindu neighbour gifts land to Muslim journalist

Tirupathi : ತಿರುಪತಿ ದೇವಾಲಯಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಐಎಸ್‌ಐ, ಎಲ್ ಇ ಟಿ ಉಗ್ರರು ಪಿತೂರಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ತಿರುಪತಿ ಪೊಲೀಸರು ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ.

ಹೌದು, ತಿರುಪತಿ ದೇವಾಲಯಕ್ಕೆಪಾಕಿಸ್ತಾನದ ಗುಪ್ತಚರ ವಿಭಾಗ ಐಎಸ್‌ಐ ಹಾಗೂ ಶ್ರೀಲಂಕಾದ ಎಲ್‌ಟಿಟಿಇ ಉಗ್ರ ಸಂಘಟನೆಗಳ ಹೆಸರಿನಲ್ಲಿ ಇಮೇಲ್ ಬೆದರಿಕೆ ಬಂದಿದೆ. ಭಾರತದ ತೀರ್ಥ ಕ್ಷೇತ್ರದಲ್ಲಿ ಕಾರ್ಯಾಚರಣೆ ನಡೆಸಲು ಕೊಸೊವಾದಲ್ಲಿ ಮೊಸಾದ್ ನೇತೃತ್ವದಲ್ಲಿ ತರಬೇತಿ ನೀಡಲಾಗಿದೆ. ತಿರುಪತಿಯಲ್ಲಿ ಶುಕ್ರವಾರ ಬಾಂಬ್ ಸ್ಪೋಟಗೊಳ್ಳಲಿದೆ. ತಮಿಳುನಾಡಿನ ಸಮಸ್ಯೆಗಳನ್ನು ತಿರುಪತಿಗೆ ಸ್ಥಳಾಂತರ ಮಾಡುತ್ತಿರುವುದಕ್ಕೆ ಕ್ಷಮೆ ಇರಲಿ ಎಂದು ಇಮೇಲ್‌ನಲ್ಲಿ ಹೇಳಲಾಗಿದೆ.

ಇಮೇಲ್ ಸಂದೇಶ ಬಂದ ಬೆನ್ನಲ್ಲೇ ತಿರುಪತಿ ದೇಗುಲ ಸುತ್ತ ಮುತ್ತ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ. ತನಿಖಾ ಎಜೆನ್ಸಿಗಳು ಇಮೇಲ್ ಬೆದರಿಕೆ, ಇದರ ಹಿಂದಿನ ಷಡ್ಯಂತ್ರ ಕುರಿತು ತನಿಖೆ ಆರಂಭಿಸಿದೆ. ಸೈಬರ್ ಕ್ರೈಂ ಪೊಲೀಸರು ಇಮೇಲ್ ಬೆದರಿಕೆ ಮೂಲ ಪತ್ತೆಗೆ ಇಳಿದಿದೆ.

ಇದನ್ನೂ ಓದಿ:GST ಪರಿಷ್ಕರಣೆ – ರಾಜ್ಯ ಸರ್ಕಾರಕ್ಕೆ ಆದ ನಷ್ಟವೆಷ್ಟು?

ಪೊಲೀಸರು, ತನಿಖಾ ಎಜೆನ್ಸಿಗಳು ಬಾಂಬ್ ಸ್ಕ್ವಾಡ್ ಹಾಗೂ ಶ್ವಾನದಳ ತಂಡದ ಜೊತೆ ದೇವಸ್ಥಾನಕ್ಕೆ ಆಗಮಿಸಿ ತಪಾಸಣೆ ನಡೆಸಿದ್ದಾರೆ. ದೇವಸ್ಥಾನ ಸುತ್ತ ಮುತ್ತ ತಪಾಸಣೆ ನಡೆಸಲಾಗಿದೆ. ಇದೀಗ ದೇವಸ್ಥಾನ ಸುತ್ತ ಮುತ್ತ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.