RBI: ₹2,000 ನೋಟುಗಳು ಇನ್ನೂ ಚಲಾವಣೆಯಲ್ಲಿ: ಆರ್ಬಿಐ ಸೇರದ ನೋಟುಗಳು ಎಷ್ಟು ಗೊತ್ತಾ?

RBI: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮೇ 19, 2023 ರಂದು ಚಲಾವಣೆಯಿಂದ 2000 ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಮೇ 19, 2023 ರಂದು ವ್ಯವಹಾರದ ಮುಕ್ತಾಯದ ಸಮಯದಲ್ಲಿ 3.56 ಲಕ್ಷ ಕೋಟಿ ರೂ.ಗಳಷ್ಟಿತ್ತು. ನೋಟ್ ಬ್ಯಾನ್ ನಂತರ ಇನ್ನು ಹಿಂತಿರುಗಿಸದೇ ಚಲಾವಣೆಯಲ್ಲಿರುವ 2000 ರೂ. ನೋಟುಗಳ ಒಟ್ಟು ಮೌಲ್ಯ ಎಷ್ಟು ಗೊತ್ತಾ?

ಬುಧವಾರ ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ, ₹5,884 ಕೋಟಿ ಮೌಲ್ಯದ ₹2,000 ಮುಖಬೆಲೆಯ ನೋಟುಗಳು ಇನ್ನೂ ಚಲಾವಣೆಯಲ್ಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) 2023ರ ಮೇ 19ರಂದು ₹2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಇಲ್ಲಿಯವರೆಗೆ ಶೇ.98.35ರಷ್ಟು ನೋಟುಗಳು ಬ್ಯಾಂಕ್ಗೆ ಮರಳಿವೆ ಎಂದು ಆರ್ಬಿಐ ತಿಳಿಸಿದೆ. ₹5,956 ಕೋಟಿ ಮೌಲ್ಯದ ₹2,000 ನೋಟುಗಳು ಇನ್ನೂ ಚಲಾವಣೆಯಲ್ಲಿವೆ ಎಂದು ಸೆಪ್ಟೆಂಬರ್ 1ರಂದು ಆರ್ಬಿಐ ಹೇಳಿತ್ತು.
ಅಕ್ಟೋಬರ್ 9, 2023 ರಿಂದ, ಆರ್ಬಿಐ ವಿತರಣಾ ಕಚೇರಿಗಳು ವ್ಯಕ್ತಿಗಳು/ಸಂಸ್ಥೆಗಳಿಂದ ಅವರ ಬ್ಯಾಂಕ್ ಖಾತೆಗಳಿಗೆ ಠೇವಣಿ ಇಡಲು 2000 ರೂ. ನೋಟುಗಳನ್ನು ಸ್ವೀಕರಿಸುತ್ತಿವೆ. ಇದಲ್ಲದೆ, ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ದೇಶದ ಯಾವುದೇ ಅಂಚೆ ಕಚೇರಿಯಿಂದ ಇಂಡಿಯಾ ಪೋಸ್ಟ್ ಮೂಲಕ 2000 ರೂ. ನೋಟುಗಳನ್ನು ಯಾವುದೇ ಆರ್ಬಿಐ ವಿತರಣಾ ಕಚೇರಿಗಳಿಗೆ ಕಳುಹಿಸಬಹುದು.
ವಿತರಣಾ ಕಚೇರಿಗಳು ಅಹಮದಾಬಾದ್, ಬೆಂಗಳೂರು, ಬೇಲಾಪುರ, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂಗಳಲ್ಲಿವೆ.
Comments are closed.