ಮೂಡಿಗೆರೆಯಲ್ಲಿ ರಸ್ತೆಯಲ್ಲಿ ಗದೆ ಸಮೇತ ಪ್ರತ್ಯಕ್ಷರಾದ ಯಮ-ಚಿತ್ರಗುಪ್ತ: ಹಾಳಾದ ರಸ್ತೆಯ ಗುಂಡಿ ಅಳೆದು ಎಚ್ಚರಿಕೆ!

ಮೂಡಿಗೆರೆ: ಮಲೆನಾಡಿನಲ್ಲಿ ನಿರ್ಮಾಣವಾಗಿರುವ ಗುಂಡಿ ರಸ್ತೆಯನ್ನು ನೋಡಲು ಯಮ, ಚಿತ್ರಗುಪ್ತ ಭೂಲೋಕಕ್ಕೆ ಇಳಿದು ಬಂದ ಸುದ್ದಿಯಾಗಿದೆ. ಗದೆ ಮತ್ತು ತಮ್ಮ ಎಂದಿನ ಸರಿ-ತಪ್ಪು ಲೆಕ್ಕದ ಪುಸ್ತಕದ ಜತೆ ರಸ್ತೆಗೆ ಇಳಿದ ಯಮ ಚಿತ್ರಗುಪ್ತರ ತಂಡ ರಸ್ತೆ ಸರ್ವೇ ನಡೆಸಿದೆ. ಸುರಿದ ನಿರಂತರ ಮಳೆಯಿಂದ ಗ್ರಾಮೀಣ ರಸ್ತೆಗಳು ಸಂಪೂರ್ಣ ಗುಂಡಿ ಬಿದ್ದಿದ್ದು, ಇದರಿಂದ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಇದರ ವಿರುದ್ಧ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲು ನಿಡುವಾಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್ ಹಾವಳಿ ಹಾಗೂ ಕಲಾವಿದ ರಮೇಶ್ ಯಾದವ್ ಅವರು ಯಮ ಹಾಗೂ ಚಿತ್ರಗುಪ್ತನ ವೇಷ ಧರಿಸಿ ರಸ್ತೆಗೆ ಇಳಿದಿದ್ದರು. ರಸ್ತೆಗಳಲ್ಲಿ ಸಂಚರಿಸಿ ಗುಂಡಿಗಳ ಬಗ್ಗೆ ಗಮನ ಸೆಳೆದರು. ಗುಂಡಿಗಳ ಅಳತೆ ದಾಖಲು ಮಾಡಿಕೊಂಡರು. ಪಾಪ-ಪುಣ್ಯಗಳ ಬಗ್ಗೆ ಲೆಕ್ಕ ಬರೆದುಕೊಂಡರು.


ಮಲೆನಾಡಿನಲ್ಲಿ ಸುರಿದ ನಿರಂತರ ಮಳೆಯಿಂದ ಗ್ರಾಮೀಣ ರಸ್ತೆಗಳು ಸಂಪೂರ್ಣ ಗುಂಡಿ ಬಿದ್ದಿದ್ದರ ವಿರುದ್ಧ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲು ನಿಡುವಾಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್ ಹಾವಳಿ ಹಾಗೂ ಕಲಾವಿದ ರಮೇಶ್ ಯಾದವ್ ರವರು ಯಮ ಹಾಗೂ ಚಿತ್ರಗುಪ್ತನ ವೇಷ ಧರಿಸಿ ರಸ್ತೆಗೆ ಇಳಿದಿದ್ದರು.
ನಿಡುವಾಳೆ ಗ್ರಾಮದ ಸುತ್ತಮುತ್ತ ಯಮ ಹಾಗೂ ಚಿತ್ರಗುಪ್ತನ ವೇಷ ಕಂಡ ವಾಹನ ಸವಾರರು ಗುಂಡಿ ರಸ್ತೆಯಿಂದ ಆಗುತ್ತಿರುವ ಗೋಳಿನ ಅಳಲು ತೋಡಿಕೊಂಡಿರು. ಅವರಿಗೆ ‘ಗುಂಡಿ ರಸ್ತೆಯಲ್ಲಿ ನಿಧಾನವಾಗಿ ಸಾಗಬೇಕು. ಈ ರಸ್ತೆಯಲ್ಲಿ ಯಮ ಮತ್ತು ಚಿತ್ರಗುಪ್ತ ಸದಾ ಇರುತ್ತೇವೆ’ ಎಂದು ತಿಳಿ ಹೇಳಿದರು. ಆ ಮೂಲಕ ಸ್ಥಳೀಯ ಆಡಳಿತಕ್ಕೆ ಚುರುಕು ಮುಟ್ಟಿಸಿದರು. ಅಲ್ಲದೇ ಮದ್ಯಪಾನ ಮಾಡಿ ವಾಹನ ಚಲನೆ ಮಾಡದಂತೆ ಸವಾರರಿಗೆ ಜಾಗೃತಿ ಮೂಡಿಸಿದರು. ಬಳಿಕ ಗ್ರಾಮದ ನ್ಯಾಯಬೆಲೆ ಅಂಗಡಿಗೆ ತೆರಳಿ ಪಡಿತರ ಗುಣಮಟ್ಟದ ಬಗ್ಗೆ ಜಾಗೃತಿ ಮೂಡಿಸಿದರು. ಯಮ ಚಿತ್ರಗುಪ್ತರ ಪಾತ್ರ ಮಾಡಿದ ಯುವಕರ ಈ ವಿಭಿನ್ನ ಜಾಗೃತಿಗೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:plastic containers: ಈ ಆಹಾರಗಳನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಇಡಬಾರದು
Comments are closed.