Indian Railway: ಬೆಂಗಳೂರಿನಿಂದ ವಿಶೇಷ ರೈಲು: ವೇಳಾಪಟ್ಟಿ ಇಲ್ಲಿದೆ

Indian Railway: ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ವಿಶೇಷ ರೈಲುಗಳ (Indian Railway) ಸೇವೆ ಆರಂಭಿಸಿದೆ. ಈ ಸೇವೆಯು ಸೆಪ್ಟೆಂಬರ್ 28 ರಂದೇ ಆರಂಭವಾಗಿದ್ದು, ಅಕ್ಟೊಬರ್ 5 ಮತ್ತು 6ರವರೆಗೆ ಮುಂದುವರಿಯಲಿದೆ.

ನೈಋತ್ಯ ರೈಲ್ವೆಯು (South Western Railway) ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ-ಎರ್ನಾಕುಲಂ ಜಂಕ್ಷನ್ ನಡುವೆ ವಿಶೇಷ ರೈಲು ಸೇವೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಈ ರೈಲುಗಳ ಸಮಯ, ಸಂಖ್ಯೆ, ನಿಲುಗಡೆ ಹಾಗೂ ವೇಳಾಪಟ್ಟಿ ಇಲ್ಲಿದೆ.
ಎರ್ನಾಕುಲಂ- ಬೆಂಗಳೂರು ಕಂ. ನಿಲ್ದಾಣ ರೈಲುಗಳ ವೇಳಾಪಟ್ಟಿ
ರೈಲು ಸಂಖ್ಯೆ 06147 ಎರ್ನಾಕುಲಂ ಜಂಕ್ಷನ್ ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್ ವಿಶೇಷವು ಸೆಪ್ಟೆಂಬರ್ 28ರಿಂದ ಕಾರ್ಯಾರಂಭ ಮಾಡಿದೆ. 2025 ಅಕ್ಟೋಬರ್ 5ರ ಭಾನುವಾರಗಳಂದು ಸಂಜೆ 4:20 ಕ್ಕೆ ಎರ್ನಾಕುಲಂ ಜಂಕ್ಷನ್ (ERS) ನಿಂದ ಹೊರಡುತ್ತದೆ. ಮರುದಿನ (ಸೋಮವಾರ) ಬೆಳಗ್ಗೆ 08:15 ಕ್ಕೆ ಬೆಂಗಳೂರು ಕಂಟೋನ್ಮೆಂಟ್ (BNC) ನಿಲ್ದಾಣಕ್ಕೆ ಬರಲಿದೆ. ಈ ರೈಲು 2 ಟ್ರಿಪ್ ಸೇವೆ ನೀಡಲಿದೆ.
* ಬೆಂಗಳೂರು ಕಂಟೋನ್ಮೆಂಟ್ ಎರ್ನಾಕುಲಂ ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06148) ವಿಶೇಷವು 2025 ಸೆಪ್ಟೆಂಬರ್ 29 ಮತ್ತು 2025 ಅಕ್ಟೋಬರ್ 6ರಂದು ಸೋಮವಾರ ರಾತ್ರಿ 22:10 ಕ್ಕೆ ಬೆಂಗಳೂರು ಕಂಟೋನ್ಮೆಂಟ್ (BNC) ನಿಂದ ಹೊರಡುತ್ತದೆ. ಈ ರೈಲು ಮೂರನೇ ದಿನ (ಮಂಗಳವಾರ) ಬೆಳಗ್ಗೆ 10:00 ಗಂಟೆಗೆ ಎರ್ನಾಕುಲಂ ಜಂಕ್ಷನ್ (ERS) ತಲುಪಲಿದೆ. ಈ ರೈಲು ಸಹ 2 ಟ್ರಿಪ್‌ಗಳ ಸೇವೆ ನೀಡುತ್ತದೆ.
ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ಅಲುವಾ, ತ್ರಿಶೂರ್, ಪಾಲಕ್ಕಾಡ್ ಜಂಕ್ಷನ್, ಪೋದನೂರು ಜಂಕ್ಷನ್, ತಿರುಪ್ಪೂರು, ಈರೋಡ್ ಜಂಕ್ಷನ್, ಸೇಲಂ ಜಂಕ್ಷನ್, ಬಂಗಾರಪೇಟೆ, ವೈಟ್‌ಫೀಲ್ಡ್, ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಈ ರೈಲು 22 LHB ಬೋಗಿಗಳೊಂದಿಗೆ ಚಲಿಸಲಿದೆ. ಇದರಲ್ಲಿ ಎರಡು ಎಸಿ ಪ್ರಥಮ ದರ್ಜೆ, ಮೂರು ಎಸಿ 2-ಟೈರ್, ಏಳು ಎಸಿ 3-ಟೈರ್ ಎಕಾನಮಿ, ನಾಲ್ಕು ಸ್ಲೀಪರ್ ಕ್ಲಾಸ್, ನಾಲ್ಕು ಜನರಲ್ ಸೆಕೆಂಡ್ ಕ್ಲಾಸ್ ಮತ್ತು ಜನರೇಟರ್ ಹೊಂದಿರುವ ಎರಡು ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಸೇರಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಮುಂಗಡ ಬುಕ್ಕಿಂಗ್ ಗಾಗಿ ನೀವು IRCTC ವೆಬ್‌ಸೈಟ್, ಆಪ್ ಮೂಲಕ ಬುಕ್ ಮಾಡಿಕೊಳ್ಳಬಹುದು.
Comments are closed.