ALERT: ಈ ‘ನಂಬರ್’ಗಳಿಂದ ಕರೆಗಳನ್ನು ‘ರಿಸೀವ್’ ಮಾಡಿದ್ರೆ ನಿಮ್ಮ ಖಾತೆಯೇ ಖಾಲಿ!

ALERT: ಸುಲಭವಾಗಿ ಹಣ ಗಳಿಸುವ ನೆಪದಲ್ಲಿ ಬೀದಿ ಬೀದಿಯಲ್ಲಿ ಸೈಬರ್ ವಂಚಕರು ಇದ್ದಾರೆ. ಹೌದು, ತಂತ್ರಜ್ಞಾನ ಹೆಚ್ಚುತ್ತಿರುವಂತೆಯೇ ಆನ್‌ಲೈನ್ ವಂಚನೆಗಳು ಕೂಡ ಹೆಚ್ಚುತ್ತಿವೆ. ಜಸ್ಟ್ ಕಾಲ್ (call) ಪಿಕ್ ಮಾಡಿದ್ರೆ ಸಾಕು ನಿಮ್ಮ ಅಕೌಂಟ್ ನಲ್ಲಿ ಝೀರೋ ಬ್ಯಾಲೆನ್ಸ್ ಆಗುತ್ತೆ. ಅಥವಾ ಎಲ್ಲಾ ಮಾಹಿತಿ ಹ್ಯಾಕ್ ಆಗುತ್ತದೆ.

ಈ ಹಿನ್ನಲೆಯಲ್ಲಿ ಟೆಲಿಕಾಂ (Telecom) ಇಲಾಖೆ ಅಲರ್ಟ್ ಘೋಷಣೆ ಮಾಡಿದ್ದು, ಬಳಕೆದಾರರು ಅಲರ್ಟ್ ಆಗಿರಬೇಕು. ಅದ್ರಂತೆ, +1, +92, +968, +44, +473, +809 ಮತ್ತು +900 ನಿಂದ ಪ್ರಾರಂಭವಾಗುವ ಸಂಖ್ಯೆಗಳಿಂದ ಪ್ರಾರಂಭವಾಗುವ ದೂರವಾಣಿ ಕರೆಗಳು ಅಥವಾ ವಾಟ್ಸಾಪ್ ಕರೆಗಳನ್ನ ಸ್ವೀಕರಿಸಬಾರದು ಎಂದು ಬಳಕೆದಾರರನ್ನ ಎಚ್ಚರಿದೆ.
ಇದನ್ನೂ ಓದಿ:Bank Holiday: ಅಕ್ಟೋಬರ್ ನಲ್ಲಿ ಬ್ಯಾಂಕ್ ಗಳಿಗೆ ಬರೋಬ್ಬರಿ 21 ದಿನ ರಜೆ!!
ಹಾಗಾಗಿಯೇ ಈ ನಂಬರ್ʼಗಳಿಂದ ಕರೆಗಳು ಬಂದ್ರೆ ಯಾವುದೇ ಸಂದರ್ಭದಲ್ಲೂ ಫೋನ್ ತೆಗೆಯಬೇಡಿ ಎಂದು ಟೆಲಿಕಾಂ ಇಲಾಖೆ ಎಚ್ಚರಿಸಿದೆ(ALERT).
Comments are closed.