Mallikarjuna Kharge: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು, ಬೆಂಗಳೂರಿನಲ್ಲಿ ಚಿಕಿತ್ಸೆ

Share the Article

Mallikarjuna Kharge: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಬುಧವಾರ (ಅಕ್ಟೋಬರ್ 1) ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವೈದ್ಯರು ಅವರ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಖರ್ಗೆ ಅವರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲಾಗುವುದು, ಮತ್ತು ಅದರ ನಂತರವೇ ಸಂಪೂರ್ಣ ವಿವರಗಳು ತಿಳಿಯಲಿವೆ.

ಮಲ್ಲಿಕಾರ್ಜುನ ಖರ್ಗೆ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಸರಣಿ ಪ್ರವಾಸ, ಬಿಹಾರ ಚುನಾವಣೆ ಓಡಾಟದ ಹಿನ್ನೆಲೆಯಲ್ಲಿ ಆಯಾಸಗೊಂಡಿದ್ದರು ಎನ್ನಲಾಗಿದೆ. ಅನಾರೋಗ್ಯ ಕಾರಣದಿಂದ ಉಸಿರಾಟ ಸಮಸ್ಯೆ ಹೆಚ್ಚಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:LPG Price Hike Today: ಇಂದು ಎಲ್‌ಪಿಜಿ ಬೆಲೆಯಲ್ಲಿ 15.50 ರೂ. ಏರಿಕೆ; ಎಟಿಎಫ್ ಬೆಲೆಯಲ್ಲಿ 3,052.50 ರೂ. ಏರಿಕೆ

ಜನರಲ್‌ ಚೆಕಪ್‌ಗೆಂದು ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲಾಗಿದ್ದು, ನಿತ್ಯದ ಚೆಕಪ್‌ ನಡೆಸಿರುವ ರಾಮಯ್ಯ ಆಸ್ಪತ್ರೆ ವೈದ್ಯರು, ಇಸಿಜಿ ಪರೀಕ್ಷೆ ಮಾಡಿದ್ದು, ನಿನ್ನೆ ರಾತ್ರಿಯಿಂದ ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ.

Comments are closed.