ಇದು ಹನಿಮೂನ್ ಅಲ್ಲ, ‘ಹಾರ್ವೆಸ್ಟ್’ ಮೂನ್! ಅ.6, 7ರ ರಾತ್ರಿಯನ್ನು ಬೆಳಗಲಿದೆ ಅಪರೂಪದ ಚಂದ್ರ ಬೆಳಕು!

ಹೊಸದಿಲ್ಲಿ: ಹನಿ ಮೂನ್ ಅಂದ್ರೆ ಏನೆಂದು ಎಲ್ಲರಿಗೂ ಗೊತ್ತು. ಎಂಥ ಬೋಳನ ಮುಂದೆ ಕೂಡಾ ಹನಿಮೂನ್ ವಿಷಯ ಪ್ರಸ್ತಾಪಿಸಿದರೆ ಆತನ ಕಣ್ಣಲ್ಲಿ ಬೆಳಕು ಬೆಳಗದೆ ಇರದು. ಆದರೆ ಇದು ಹನಿಮೂನ್ ಅಲ್ಲ, ಹಾರ್ವೆಸ್ಟ್ ಮೂನ್!
ಅ.6 ಮತ್ತು ಅ.7ರ ರಾತ್ರಿಯಂದು ಆಗಸದಲ್ಲಿ ಅಪರೂಪದ ಈ ವಿದ್ಯಮಾನ ಘಟಿಸಲಿದೆ. ಅವತ್ತು ರಾತ್ರಿಯಿಡೀ ಬೆಳಕೇ ಬೆಳಕು!! ಅಂದು ಚಂದ್ರನ ಬೆಳಕು ಅತ್ಯಂತ ಪ್ರಕಾಶಮಾನವಾಗಿರುತ್ತದೆ. ‘ಹಾರ್ವೆಸ್ಟ್ ಮೂನ್’ ಎಂಬ ಖಗೋಳ ವಿಸ್ಮಯವು ಈ ಸಾರು 2 ರಾತ್ರಿಗಳಲ್ಲಿ ಘಟಿಸಲಿದೆ. ಅತ್ಯಂತ ಪ್ರಕಾಶಮಾನವಾದ ಚಂದ್ರನನ್ನು ಕಾಣುವ ಅವಕಾಶ ಭಾರತ ಸೇರಿ ಹಲವು ರಾಷ್ಟ್ರಗಳಿಗೆ ಒಲಿದಿದೆ. ಹಾರ್ವೆಸ್ಟ್ ಎಂದರೆ ಸುಗ್ಗಿ ಎಂಬರ್ಥ.

ರೈತಾಪಿ ವರ್ಗ ತಮ್ಮ ಕಟಾವು ಮುಂತಾದ ಕೆಲಸಗಳನ್ನು ರಾತ್ರಿಯಲ್ಲೂ ಮಾಡುವಷ್ಟು ಪ್ರಭಾವಶಾಲಿ ಬೆಳಕನ್ನು ಹಾರ್ವೆಸ್ಟ್ ಮೂನ್ ಒದಗಿಸುತ್ತದೆ. ರಾತ್ರಿಯ ಹೊತ್ತಲ್ಲೂ ಕೂಡ ರೈತರು ತಮ್ಮ ಕೃಷಿ ಚಟುವಟಿಕೆ ಮಾಡುವಷ್ಟು ಬೆಳಕನ್ನು ಚಂದ್ರ ನೀಡುವುದರಿಂದ ಈ ಪ್ರಾಕೃತಿಕ ವಿದ್ಯಮಾನಕ್ಕೆ ಹಾರ್ವೆಸ್ಟ್ ಮೂನ್ ಎನ್ನುವ ಹೆಸರನ್ನಿಡಲಾಗಿದೆ. ಈ ಹಿಂದೆ 5 ವರ್ಷಗಳ ಹಿಂದೆ 2020ರಲ್ಲಿ ಹಾರ್ವೆಸ್ಟ್ ಮೂನ್ ಕಾಣಿಸಿಕೊಂಡಿತ್ತು.
ಹಾರ್ವೆಸ್ಟ್ ಮೂನ್ ಗೆ ಏನು ಕಾರಣ?
ಈ ಸಂದರ್ಭವು ಶರತ್ಕಾಲದ ವಿಷುವತ್ ಸಂಕ್ರಾಂತಿಗೆ ಹತ್ತಿರವಿರುವ ಹುಣ್ಣಿಮೆಯಾಗಿದೆ. ಸೂರ್ಯಾಸ್ತದ ನಂತರ ಹಲವಾರು ಸತತ ರಾತ್ರಿಗಳಲ್ಲಿ ಪ್ರಕಾಶಮಾನವಾದ ಚಂದ್ರನ ಬೆಳಕನ್ನು ಇದು ಒದಗಿಸುತ್ತವೆ. ಐತಿಹಾಸಿಕವಾಗಿ ನೋಡಿದರೆ, ರೈತರಿಗೆ ವಿದ್ಯುತ್ ಪರಿಚಯ ಆಗದೇ ಇದ್ದ ಸಂದರ್ಭಕ್ಕೆ ಮುಂಚಿತವಾಗಿ ಬೆಳೆಗಳನ್ನು ಕೊಯ್ಲು ಮಾಡಲು ಇದು ಸಹಾಯ ಮಾಡಿತು.
ಉತ್ತರ ಗೋಳಾರ್ಧದಲ್ಲಿ ವರ್ಷದ ಈ ಸಮಯದಲ್ಲಿ ಚಂದ್ರನ ಕಕ್ಷೆಯು ದಿಗಂತಕ್ಕೆ ಹೋಲಿಸಿದರೆ ಕನಿಷ್ಠ ಕೋನವನ್ನು ಹೊಂದಿರುವುದರಿಂದ ಈ ವಿಶಿಷ್ಟವಾದ ಮಾದರಿಯು ಸಂಭವಿಸುತ್ತದೆ. ಇದು ರಾತ್ರಿಯ ಚಂದ್ರೋದಯದ ವಿಳಂಬವು ಸಾಮಾನ್ಯವಾಗಿ 50 ನಿಮಿಷಗಳ ಬದಲಿಗೆ ಕೇವಲ 15-20 ನಿಮಿಷಗಳಿಗೆ ಇಳಿಯುತ್ತದೆ.
ಇದನ್ನೂ ಓದಿ:Kantara Chapter 1: ಕಾಂತಾರ ಸಿನಿಮಾದ ಮೇಲೆ ಶೇ.100 ಸುಂಕ, ಕಾಂತಾರ 1 ಚಿತ್ರದ ಕಥೆ?
ಐತಿಹಾಸಿಕ ಮಹತ್ವ: ವಿದ್ಯುತ್‌ಗೆ ಮೊದಲು, ರೈತರು ಸೂರ್ಯಾಸ್ತದ ನಂತರ ತಮ್ಮ ಬೆಳೆಗಳನ್ನು ಸಂಗ್ರಹಿಸಲು ಚಂದ್ರನ ಬೆಳಕನ್ನು ಅವಲಂಬಿಸಿದ್ದರು.
ಗರಿಷ್ಠ ಕೊಯ್ಲು ಕಾಲ: ಬೇಸಿಗೆಯ ಕೊನೆಯಲ್ಲಿ ಮತ್ತು ಶರತ್ಕಾಲದ ಆರಂಭದಲ್ಲಿ ಅನೇಕ ಬೆಳೆಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ಇದು ರೈತರಿಗೆ ಅತ್ಯಂತ ಕಾರ್ಯನಿರತ ಮತ್ತು ನಿರ್ಣಾಯಕ ಸಮಯವಾಗಿದೆ. ಈ ಸಂದರ್ಭ ಚಂದ್ರನ ಬೆಳಕನ್ನು ಬಳಸಿಕೊಂಡು ಕೃಷಿ ಚಟುವಟಿಕೆ ನಡೆಸಲಾಗುತ್ತಿತ್ತು. ಅದಕ್ಕಾಗಿ ಹಾರ್ವೆಸ್ಟ್.ಮೂನ್ ಐತಿಹಾಸಿಕವಾಗಿ ಪ್ರಸಿದ್ಧ.
Comments are closed.