Arattai Messenger: ಹರಟೆಗೆ ಬಂತು ಸ್ವದೇಶಿ ವಾಟ್ಸ್ಆ್ಯಪ್ ‘ಅರಟ್ಟೈ’; ಏಕಾಏಕಿ ಜನಪ್ರಿಯತೆ ಪಡಕೊಂಡ ಸ್ವದೇಶಿ ಆ್ಯಪ್!

Share the Article

Arattai Messenger: ಹೊಸದಿಲ್ಲಿ: ಟೆಕ್ ಜಗತ್ತಿನಲ್ಲಿ ಸಂಚಲನ ಮೂಡಿದೆ. ಭಾರತದ ‘ಜೋಹೋ’ ಬಿಡುಗಡೆಗೊಳಿಸಿದ್ದ ‘ಅರಟ್ಟೆ’ ಎಂಬ ಮೆಸೇಜಿಂಗ್ ಆ್ಯಪ್‌ನ ಜನಪ್ರಿಯತೆ ಸದ್ದಿಲ್ಲದೇ ಕಲರವ ಎಬ್ಬಿಸಿದೆ. ಈ ಸ್ವದೇಶಿ ಸಾಮಾಜಿಕ ಆಪ್, ಜಾಗತಿಕ ಮೆಸೇಜಿಂಗ್ ದೈತ್ಯ ‘ವಾಟ್ಸ್ ಆ್ಯಪ್’ಗೆ ಕೂಡಾ ಟಕ್ಕರ್ ನೀಡಬಹುದು ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಹರಟೆಗೆ ‘ಅರಟ್ಟೆ’ ವೇದಿಕೆ
ಕನ್ನಡದಲ್ಲಿ ಹರಟೆ’ ಹೊಡೆಯುವುದಕ್ಕೆ ತಮಿಳಿನಲ್ಲಿ ‘ಅರಟ್ಟೆ’ ಎನ್ನಲಾಗುತ್ತದೆ. ಭಾಷೆ ಯಾವುದಿದ್ದರೇನು, ಹರಟೆ ಮಾನವ ಸಹಜ ಗುಣವಲ್ಲವೆ? ಹಾಗಾಗಿ ಇದೇ ಹೆಸರನ್ನು ಡಿಜಿಟಲ್ ಹರಟೆಗೆ ಸಹಾಯಕವಾಗಬಲ್ಲ ಈ ಆ್ಯಪ್‌ ಗೆ ಹೆಸರಿಡಲಾಗಿದೆ. ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಇತ್ತೀಚೆಗೆ ಸ್ವ ದೇಶಿ ಆ್ಯಪ್‌ಗಳ ಬಳಕೆ ಹೆಚ್ಚಿಸುವಂತೆ ಹೇಳಿಕೆ ನೀಡಿದ್ದರು. ಅದು ಪರ್ಯಾಯ ಆ್ಯಪ್‌ಗಳ ಹುಡುಕಾಟ ನಡೆಸುವಂತೆ ಮಾಡಿತ್ತು. ಆಗ ಜನರ ಕಣ್ಣಿಗೆ ಬಿದ್ದದ್ದೇ ಅರಟ್ಟೆ!

ಇದನ್ನೂ ಓದಿ:ಇದು ಹನಿಮೂನ್ ಅಲ್ಲ, ‘ಹಾರ್ವೆಸ್ಟ್’ ಮೂನ್! ಅ.6, 7ರ ರಾತ್ರಿಯನ್ನು ಬೆಳಗಲಿದೆ ಅಪರೂಪದ ಚಂದ್ರ ಬೆಳಕು!

ದೈತ್ಯ ವಾಟ್ಸ್ಆ್ಯಪ್‌ ಗೆ ಅರಟ್ಟೆ ಟಕ್ಕರ್?

ಅರಟ್ಟೆ 2021ರಲ್ಲೇ ಬಿಡುಗಡೆಯಾಗಿದ್ದರೂ, ಪ್ರತೀದಿನಕ್ಕೆ 3,000 ಡೌನ್ಹೋಡ್‌ಗಳನ್ನಷ್ಟೇ ಕಾಣುತ್ತಿದ್ದ ಈ ಆ್ಯಪ್, ಕಳೆದ 3 ದಿನಗಳಲ್ಲಿ ದಿನವೊಂದಕ್ಕೆ 3.5 ಲಕ್ಷದವರೆಗೆ ಡೌನ್ಫೋಡ್ ಆಗಿದೆ. ಬಳಕೆದಾರರ ಸಂಖ್ಯೆ ಹಠಾತ್ ಏರಿಕೊಂಡ ಪರಿಣಾಮ ಆ್ಯಪ್ ಕಾರ್ಯಾಚರಣೆಯಲ್ಲಿ ಕೆಲ ತಾಂತ್ರಿಕ ದೋಷಗಳು ಕಂಡುಬರುತ್ತಿವೆ ಎನ್ನಲಾಗುತ್ತಿದೆ. ಜೋಹೋ ತಂಡ ಆ ನಿಟ್ಟಿನಲ್ಲಿ ಕಾರ್ಯ ನಿರತವಾಗಿದೆ. ಕಾರನಿರತವಾಗಿದೆ.

Comments are closed.