Home News 2025-26 ಸಾಲಿನ ಕಂಬಳಗಳ ದಿನಾಂಕ ನಿಗದಿ, ಎಲ್ಲೆಲ್ಲಿ ಯಾವಾಗ ಇಲ್ಲಿದೆ ಪಟ್ಟಿ

2025-26 ಸಾಲಿನ ಕಂಬಳಗಳ ದಿನಾಂಕ ನಿಗದಿ, ಎಲ್ಲೆಲ್ಲಿ ಯಾವಾಗ ಇಲ್ಲಿದೆ ಪಟ್ಟಿ

Kambala

Hindu neighbor gifts plot of land

Hindu neighbour gifts land to Muslim journalist

ಮೂಡುಬಿದಿರೆ: ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ಮತ್ತು ದ.ಕ. ಉಡುಪಿ ಕಂಬಳ ವ್ಯವಸ್ಥಾಪಕರ ಜಂಟಿ ಸಭೆ ಮೂಡುಬಿದಿರೆ ಕಂಬಳ ಕ್ರೀಡಾಂಗಣದ ಬಳಿಯ ‘ಸೃಷ್ಟಿ ಗಾರ್ಡನ್’ ಸಭಾಂಗಣದಲ್ಲಿ ನಡೆಯಿತು. ರವಿವಾರ ಕಂಬಳ ಸಮಿತಿ ಅಧ್ಯಕ್ಷ ರಾದ ಡಾ। ದೇವಿ ಪ್ರಸಾದ್‌ ಶೆಟ್ಟಿ ಬೆಳಪು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ 2025-26ನೇ ಸಾಲಿನ ಕಂಬಳ ದಿನಾಂಕಗಳನ್ನು ಅಂತಿಮ ಮಾಡಲಾಯಿತು.

ರಾಜ್ಯದ ಮುಖ್ಯಮಂತ್ರಿಯವರ’ ಆದೇಶದಂತೆ ರಾಜ್ಯ ಸರಕಾರವು ಕಂಬಳಕ್ಕೆ ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಪ್ರಾಧಿಕಾರದಲ್ಲಿ ಮಾನ್ಯತೆಯನ್ನು ನೀಡಿ ಪುರಸ್ಕರಿಸಿರವುದಕ್ಕೆ ರಾಜ್ಯ ಸರಕಾರಕ್ಕೆ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು.

ಪ್ರಸಾದ್ ಶೆಟ್ಟಿ ಬೆಳಪುರವರು ರಾಜ್ಯ ಕಂಬಳ ಅಸೋಸಿಯೇಶನ್ ಮತ್ತು ಕೇಂದ್ರ ಸರಕಾರದಿಂದ ಕೂಡ ಕಂಬಳಕ್ಕೆ ವಿಶೇಷ ಮಾನ್ಯತೆ ನೀಡಲು ಕಂಬಳೆ ಫೆಡರೇಶನ್ ಆಫ್ ಇಂಡಿಯಾ ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಪ್ರಕಟಿಸಿದರು.

ಕಂಬಳಕ್ಕೆ ನಮ್ಮ ಹಿರಿಯರ ಕೊಡುಗೆ ಅಪಾರವಾಗಿದ್ದು ಈ ಕಂಬಳವನ್ನು ರಾಜ್ಯ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಗುರುತಿಸಿ ಬೆಳೆಸಲು ಎಲ್ಲರ ಸಹಕಾರ ಅಗತ್ಯವಿದೆ ಅಭಿಪ್ರಾಯಪಟ್ಟರು. ಕಳೆದ ಸಾಲಿನ ಕಂಬಳಗಳಿಗೆ ಸರಕಾರ ದಿಂದ ತಲಾ 2 ಲಕ್ಷ ರೂ. ಒದಗಿ ಬರಲಿದೆ ಎಂದು ಅವರು ತಿಳಿಸಿದರು.

ಕಂಬಳ ಸಮಿತಿ ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಮಾಜಿ ಅಧ್ಯಕ್ಷ ಪಿ. ಆರ್. ಶೆಟ್ಟಿ ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ ಸುಬ್ಬಯ್ಯ ಕೊಟ್ಯಾನ್, ಕಾರ್ಯಾಧ್ಯಕ್ಷ ಗುಣಪಾಲ ಕಡಂಬ, ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚೂರು, ತೀರ್ಪುಗಾರರ ಸಮಿತಿ ಸಂಚಾಲಕ ವಿಜಯಕುಮಾರ್ ಕಂಗಿನ ಮನೆ, ಪ್ರಮುಖರಾದ ಶಾಂತರಾಮ್ ಶೆಟ್ಟಿ ಶ್ರೀಕಾಂತ್ ಭಟ್, ಚಂದ್ರಹಾಸ್ ಸಾಧು ಸನಿಲ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಕಂಬಳ: ಎಲ್ಲೆಲ್ಲಿ ಯಾವಾಗ?

1) ಪಣಪಿಲ ನವೆಂಬರ್ 15ಕ್ಕೆ

2) ಕೊಡಂಗೆ ನವಂಬರ್ 22ಕ್ಕೆ

3) ಕಕ್ಕೆ ಪದವು ನವೆಂಬರ್ 29ಕ್ಕೆ

4) ಹೊಕ್ಕಾಡಿ ಡಿಸೆಂಬರ್ 6ಕ್ಕೆ

5) ಬಳ್ಳಮಂಜ ಡಿಸೆಂಬರ್ 7ಕ್ಕೆ

6) ಬಾರಾಡಿ ಡಿಸೆಂಬರ್ 13 ಕ್ಕೆ

7) ಮೂಲ್ಕಿ ಡಿಸೆಂಬರ್ 20ಕ್ಕೆ

8) ಮಂಗಳೂರು ಡಿಸೆಂಬರ್ 27

9) ಮಿಯ್ಶಾರು, ಜನವರಿ 3 ಕ್ಕೆ

10) ನರಿoಗಾಣ ಜನವರಿ 10ಕ್ಕೆ

11) ಅಡ್ವೆ ಜನವರಿ 17

12) ಮೂಡುಬಿದರೆ ಜನವರಿ 24

13) ಐಕಳ ಜನವರಿ 31

14) ಪುತ್ತೂರು ಫೆಬ್ರವರಿ 7

15) ಜೆಪ್ಪು ಫೆಬ್ರವರಿ 14

16) ವಾಮoಜೂರು ಫೆಬ್ರವರಿ 21

17) ಎರ್ಮಾಳು ಫೆಬ್ರವರಿ 28

18) ಬಂಟ್ವಾಳ ಮಾರ್ಚ್ 7

19) ಬಂಗಾಡಿ ಮಾರ್ಚ್ 15

20) ವೇಣೂರು ಮಾರ್ಚ್ 21

21) ಉಪ್ಪಿನಂಗಡಿ ಮಾರ್ಚ್ 28

22) ಗುರುಪುರ ಏಪ್ರಿಲ್ 4

23) ಬಳ್ಕುಂಜೆ ಏಪ್ರಿಲ್ 11

24) ಹರೇಕಳ ಏಪ್ರಿಲ್ 18

25) ಬಡಗಬೆಟ್ಟು ಏಪ್ರಿಲ್ 25