Bigg Boss Kannada: ಬಿಗ್ ಬಾಸ್ ಮನೆಗೆ ಮಾಸ್ಕ್ ಮ್ಯಾನ್ ಜತೆಗೆ ಒಂದು ಕಾಕ್ರೋಚ್ ಎಂಟ್ರಿ!

Bigg Boss Kannada: ಇದೀಗ ಎಲ್ಲಿ ನೋಡಿದರೂ ಮಾಸ್ಕ್ ಮ್ಯಾನ್ ನದ್ದೇ ಮಾತು. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಶವ ಹೂತು ಹಾಕಿದ ಪ್ರಕರಣದಲ್ಲಿ ಬುರುಡೆ ಎತ್ತಿಕೊಂಡು ಬಂದ ಮಾಸ್ಕ್ ಮ್ಯಾನ್ ಪಾತ್ರದಾರಿ ಈಗ ಎಲ್ಲೆಲ್ಲೂ ಹಲವು ರೂಪಗಳಲ್ಲಿ ಹಲವು ಪಾತ್ರಗಳಲ್ಲಿ ಪ್ರತ್ಯಕ್ಷವಾಗುತ್ತಿದ್ದಾನೆ. ಈ ಬಾರಿ ಮಾಸ್ಕ್ ಮ್ಯಾನ್ ಬಿಗ್ ಗೆ ಕೂಡಾ ಎಂಟ್ರಿ ಕೊಡುತ್ತಿದ್ದಾರೆ. ಜತೆಗೆ ಒಂದು ಕಾಕ್ರೋಚ್ ಕೂಡಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದೆ! ಮನೆ ಅಂದ ಮೇಲೆ ಜಿರಳೆ ಒಳಗೆ ನುಸುಳೋದು ಸಹಜ ತಾನೇ?

ಕಲರ್ಸ್ ಕನ್ನಡ ವಾಹಿನಿಯು ಪ್ರತಿ ಬಾರಿಯೂ ಶೋಗೆ ನಾನಾ ರೀತಿಯ ತಂತ್ರಗಳನ್ನು ಬಳಕೆ ಮಾಡುತ್ತದೆ. ಅದೇ ರೀತಿ ಈ ಬಾರಿ ಮುಖವಾಡದ ವ್ಯಕ್ತಿಯೋರ್ವನು ಜನರೆದುರು ಹೋಗಿ ನಾನು ಬಿಗ್ ಬಾಸ್ ಗೆ ಹೋಗುತ್ತೇನೆ ಎಂದು ಹೇಳಿದ್ದಾನೆ. ಆತನ ಧ್ವನಿ ಗುರುತು ಸಿಕ್ಕಿದ್ದರೆ ಈತನೇ ಅಂತ ಕಂಡು ಹಿಡಿಯಬಹುದಿತ್ತು; ಆದರೆ ಧ್ವನಿಯನ್ನು ಬದಲಾಯಿಸಲಾಗಿದೆ. ಹೀಗಾಗಿ, ಆತ ಯಾರು ಎಂದು ಹೇಳುವುದು ಕಷ್ಟವಾಗಿತ್ತು. ಆದರೆ, ನಮ್ಮ ವೀಕ್ಷಕರು ಬುದ್ದಿವಂತರು ನೋಡಿ. ಇದೀಗ ಮಾಸ್ಕ್ ಮ್ಯಾನ್ ಯಾರೆಂದು ಪತ್ತೆ ಮಾಡಿಯೇ ಬಿಟ್ಟಿದ್ದಾರೆ ಅನ್ನುವ ಸುದ್ದಿ ಬಂದಿದೆ.
ಆ ವ್ಯಕ್ತಿ ಯಾರೆಂಬುದನ್ನು ಬಿಗ್ ಫ್ಯಾನ್ಸ್ ಕಂಡು ಹಿಡಿದೇ ಬಿಟ್ಟಿದ್ದಾರೆ. ಆತ ಬೇರ್ಯಾರೂ ಅಲ್ಲ ಕಾಕ್ರೋಚ್ ಸುಧಿ. ಹಲವು ಸಿನಿಮಾಗಳ ಜತೆ ‘ಟಗರು’ ಸಿನಿಮಾದಲ್ಲಿ ನಟಿಸಿದ್ದ ಆತ. ಅಲ್ಲಿ ಆತನಿಗೆ ಜನಪ್ರಿಯತೆ ತಂದು ಕೊಟ್ಟದ್ದು ಒಂದು ಜಿರಳೆ. ಅಲ್ಲಿ ಆತ ನಿರ್ವಹಿಸಿದ ಕಾಕ್ರೋಚ್ ಹೆಸರಿನ ಪಾತ್ರ. ನಂತರ ಆತನಿಗೆ ಕಾಕ್ರೋಚ್ ಸುಧಿ ಎಂಬ ಹೆಸರೇ ಪರ್ಮನೆಂಟ್ ಆಯಿತು.
ಈಗ ‘ಕಾಕ್ರೋಚ್ ‘ ಬಿಗ್ ಬಾಸ್ ಮನೆಗೆ ಬರುತ್ತದೆ ಎಂಬುದು ಮೊದಲಿನಿಂದಲೂ ಇದ್ದ ಸುದ್ದಿಯಾಗಿತ್ತು ಎನ್ನಬಹುದು. ಆದರೆ, ಇದನ್ನು ಒಪ್ಪಲು ಅವರು ರೆಡಿ ಇರಲೇ ಇಲ್ಲ. ಇದನ್ನು ಅವರು ಫೇಕ್ ಸುದ್ದಿ ಎಂದು ಕರೆದರು. ನನಗೆ ಹೊರಗೆ ಒಪ್ಪಿಕೊಂಡ ಕಮಿಟ್ಮೆಂಟ್ಗಳು ಸಾಕಷ್ಟು ಇವೆ. ಹೀಗಾಗಿ, ನಾನು ಬರೋದೇ ಇಲ್ಲ ಎಂದು ಹೇಳಿದ್ದರು. ಆದರೆ, ಅದು ಸುಳ್ಳಾಗಿದೆ. ಅವರು ಆಗಮಿಸಿದ್ದಾರೆ.
ಇದನ್ನೂ ಓದಿ:Bangalore: ರಾಜ್ಯದ ಜನತೆಯ ಗಮನಕ್ಕೆ: ಜಾತಿ ಗಣತಿ ಸಮೀಕ್ಷೆ ಕುರಿತು ಮಹತ್ವದ ಸುದ್ದಿ
ಸುದೀ ಮೈಮೇಲೆ ಒಂದಷ್ಟು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೂಗಳು ವಿಡಿಯೋದಲ್ಲಿ ಕಾಣಿಸಿ, ಮಾಸ್ಕ್ ಮ್ಯಾನ್ ಕಾಕ್ರೋಚ್ ಸುಧಿ ಎಂದು ಪ್ರೇಕ್ಷಕರಿಗೂ ಸ್ಪಷ್ಟವಾಗಿದೆ. ಇವತ್ತು, ಸೆಪ್ಟೆಂಬರ್ 28ರ ಎಪಿಸೋಡ್ನಲ್ಲಿ ಈ ವಿಚಾರ ರಿವೀಲ್ ಆಗಲಿದೆ.
Comments are closed.