India: ಕಾರ್ಖಾನೆಯಲ್ಲಿ ರೊಬೊ ಅಳವಡಿಕೆ: 6ನೇ ಸ್ಥಾನದಲ್ಲಿ ಭಾರತ

Share the Article

India: ಭಾರತವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಕಳೆದ ಎರಡು ವರ್ಷಗಳಿಂದ ರೊಬೊಗಳ ಅಳವಡಿಕೆ ದಾಖಲೆ ಮಟ್ಟದಲ್ಲಿ ಹೆಚ್ಚಿದೆ. ಅಂತೆಯೇ ಕಾರ್ಖಾನೆಗಳಲ್ಲಿ ರೊಬೊಗಳ ಅಳವಡಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ 6ನೇ ಸ್ಥಾನ ಭಾರತಕ್ಕೆ ದೊರಕಿದೆ.

‘ಭಾರತದಲ್ಲಿ ಒಟ್ಟು 9,120 ಬೃಹತ್ ರೊಬೊಗಳನ್ನು ಕಾರ್ಖಾನೆಗಳಲ್ಲಿ ಅಳವಡಿಸಲಾಗಿದೆ. ಇದು ಕಳೆದ ಸಾಲಿಗಿಂತ ಶೇ 7ರಷ್ಟು ಅಧಿಕವಾಗಿದ್ದು, ಈಗ ಭಾರತ ಜಗತ್ತಿನಲ್ಲೇ 6ನೇ ಸ್ಥಾನದಲ್ಲಿದೆ’ ಎಂದು ಅಂತರರಾಷ್ಟ್ರೀಯ ರೊಬೊಟಿಕ್ಸ್‌ ಒಕ್ಕೂಟವು ಇತ್ತೀಚೆಗೆ ಬಿಡುಗಡೆ ಮಾಡಿದ ವಿಶ್ವ ರೊಬೊಟಿಕ್ಸ್‌ 2025 ವರದಿಯಲ್ಲಿ ದಾಖಲಿಸಿದೆ.

ಇದನ್ನೂ ಓದಿ:SSLC ಪರೀಕ್ಷಾ ಶುಲ್ಕ ಹೆಚ್ಚಿಸಿದ ಸರ್ಕಾರ!!

ಕಾರ್ಖಾನೆಗಳಲ್ಲಿ ರೊಬೊಗಳ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿರುವ ಜರ್ಮನಿ, ಕೊರಿಯಾ, ಅಮೆರಿಕ, ಜಪಾನ್ ಹಾಗೂ ಚೀನಾ ನಂತರದ ಸ್ಥಾನದಲ್ಲಿ ಭಾರತವಿದೆ(india) ಎಂದು ಈ ವರದಿಯಲ್ಲಿ ಹೇಳಲಾಗಿದೆ.

Comments are closed.