

SSLC: ರಾಜ್ಯ ಸರ್ಕಾರವು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶಾಕ್ ನೀಡಿದ್ದು ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ.
ಹೌದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2025-26ನೇ ಸಾಲಿನಲ್ಲಿ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಪರಿಷ್ಕರಣೆ ಮಾಡಿ ಆದೇಶ ಹೋರಡಿಸಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಪಟ್ಟಂತೆ ನೋಂದಣಿಯಾಗುವ ವಿದ್ಯಾರ್ಥಿಗಳಿಂದ ಉಲ್ಲೇಖಿತ-1ರ ಸರ್ಕಾರದ ಆದೇಶದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಶುಲ್ಕವನ್ನು ಶೇಕಡಾ 5 ರಷ್ಟು ಪ್ರತಿ ವರ್ಷ ಹೆಚ್ಚಿಸಿ ಪರಿಷ್ಕರಿಸಲು ಆದೇಶಿಸಲಾಗಿದೆ. ಅಂದರೆ ರೂ.676 ಇದ್ದ ಎಸ್ ಎಸ್ ಎಲ್ ಸಿ ಪರೀಕ್ಷಾ ಶುಲ್ಕ ವನ್ನು ರೂ.710ಕ್ಕೆ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ:Gold Price : ಚಿನ್ನದ ದರ ಇಂದು 4,400 ರೂ. ಹೆಚ್ಚಳ!
ಪುನರಾವರ್ತಿ ಶಾಲಾ, ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ ಒಂದು ವಿಷಯಕ್ಕೆ ರೂ.427 ಇದ್ದದ್ದು ರೂ.448ಕ್ಕೆ ಏರಿಸಲಾಗಿದೆ. ಎರಡು ವಿಷಯಕ್ಕೆ ರೂ.532 ಇದ್ದದ್ದನ್ನು ರೂ.559ಕ್ಕೆ ಹೆಚ್ಚಳ ಮಾಡಲಾಗಿದೆ. ಮೂರು ಮತ್ತು ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ ರೂ.716 ಇದ್ದ ಶುಲ್ಕವನ್ನು ರೂ.752ಕ್ಕೆ ಹೆಚ್ಚಿಸಲಾಗಿದೆ.













