Gokarna Cave : ಗೋಕರ್ಣದ ಗುಹೆಯಲ್ಲಿದ್ದ ಮಹಿಳೆ, ಮಕ್ಕಳನ್ನು ರಷ್ಯಾಗೆ ಕಳುಹಿಸಲು ಕೋರ್ಟ್ ಆದೇಶ

Gokarna Cave : ತನ್ನ ಚಿಕ್ಕ ಮಕ್ಕಳ ಜೊತೆ ರಾಮತೀರ್ಥ ಬೆಟ್ಟದ ನಡುವಿನ ಗುಹೆಯೊಂದರಲ್ಲಿ ವಾಸವಿದ್ದ ರಷ್ಯಾ ಮಹಿಳೆಯನ್ನು ವಾಪಸ್ ಆಕೆಯ ದೇಶಕ್ಕೆ ಕಳುಹಿಸಲು ಹೈಕೋರ್ಟ್ ಅನುಮತಿ ಇದೆ.

ರಷ್ಯಾಗೆ ಮರಳುವ ಬಗ್ಗೆ ಮಹಿಳೆಯ ಇಚ್ಛೆ ಪರಿಗಣಿಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ಹೊರಡಿಸಿದೆ. ಅಗತ್ಯ ದಾಖಲೆಗಳನ್ನು ಮಹಿಳೆಗೆ ಒದಗಿಸಲು ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಇದನ್ನೂ ಓದಿ:Air India Mangalore: ಮಂಗಳೂರು: ದುಬೈಗೆ ತೆರಳಬೇಕಿದ್ದ ಏರ್‌ಇಂಡಿಯಾ ವಿಮಾನ ಹಾರಾಟ ರದ್ದು
ರಾಮತೀರ್ಥ ಬೆಟ್ಟದ ನಡುವಿನ ಗುಹೆಯೊಂದರಲ್ಲಿ ವಾಸವಿದ್ದ ರಷ್ಯಾದ ಮಹಿಳೆಯು ಕತ್ತಲೆಯಿಂದ ಕೂಡಿದ್ದ ಗುಹೆಯಲ್ಲಿ ತನ್ನ ಮಕ್ಕಳ ಜೊತೆ ನೆಲೆಸಿದ್ದು, ಈ ಗುಹೆಯ ಸುತ್ತ ಬೃಹತ್ ಗಾತ್ರದ ಸರ್ಪಗಳಿವೆ. ಹೀಗಿದ್ದರೂ ಆ ಮಹಿಳೆ ಅಲ್ಲಿ ವಾಸವಾಗಿದ್ದಾಳೆಂದು ಪೊಲೀಸರಿಗೆ ಅಚ್ಚರಿಯನ್ನುಂಟು ಮಾಡಿತ್ತು. ಇನ್ನು ಫೆನ್ಸಿಂಗ್ ಇದ್ದರೂ ಪಕ್ಕದ ಗುಡ್ಡದಿಂದ ಗುಹೆ ಒಳಗೆ ಹೋಗಿ ನೆಲೆಸಿದ್ದ ರಷ್ಯಾದ ಮಹಿಳೆ ಈ ಹಿಂದೆ ಕೂಡಾ ಈ ಗುಹೆಯಲ್ಲಿ ನೆಲೆಸಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು.
Comments are closed.