KSRTC: ರಾಜ್ಯದ ಜನತೆಗೆ ಶಾಕ್ – ಇನ್ಮುಂದೆ ಪ್ರತೀ ವರ್ಷವೂ ಹೆಚ್ಚಾಗುತ್ತೆ ಬಸ್ ಟಿಕೆಟ್ ದರ !!

KSRTC: ಸಾರಿಗೆ ಇಲಾಖೆಯು ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ ಒಂದನ್ನು ನೀಡಿದ್ದು ಇನ್ನು ಮುಂದೆ ಪ್ರತಿ ವರ್ಷವೂ ಬಸ್ ಟಿಕೆಟ್ ದರವನ್ನು ಹೆಚ್ಚಿಸಲು ನಿರ್ಧರಿಸಿದೆ.

ಹೌದು, ಸಾಮಾನ್ಯವಾಗಿ ಸಾರಿಗೆ ಟಿಕೆಟ್ ದರವನ್ನು ಕೆಲ ವರ್ಷಗಳಿಗೊಮ್ಮೆ ಹೆಚ್ಚಳ ಮಾಡುವ ಕ್ರಮ ಇತ್ತು. ಆದರೆ ಇನ್ನು ಮುಂದೆ ಹೀಗಾಗಲ್ಲ, ಬದಲಾಗಿ ವರ್ಷಕ್ಕೊಮ್ಮೆ ಬಸ್ ಟಿಕೆಟ್ ದರ ಏರಿಕೆಯಾಗಲಿದೆ. ಯಸ್.. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯಿಂದಾಗಿ ಕೆಎಸ್ಆರ್ಟಿಸಿ ಸಂಸ್ಥೆಯು ಅತೀವ ನಷ್ಟದಲ್ಲಿ ಮುನ್ನಡೆಯುತ್ತಿದೆ. ಹೀಗಾಗಿ ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಬಲ ತಂದುಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆಯಂತೆ ಇನ್ನು ಮುಂದೆ ಸಾರಿಗೆ ಸಂಸ್ಥೆಗಳ ದರವನ್ನ ಕೂಡ ವರ್ಷಕ್ಕೊಮ್ಮೆ ಏರಿಕೆ ಮಾಡಲು ನಿರ್ಧರಿಸಿದೆ. ಇದಕ್ಕಾಗಿ ಸಮಿತಿ ರೂಪಿಸಲಾಗಿದೆ.
KERC ಮಾದರಿಯಲ್ಲಿ ಇನ್ಮುಂದೆ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ಇರಲಿದೆ. ಕರ್ನಾಟಕ ಮೋಟಾರು ವಾಹನ ನಿಯಮ 1989ರ ಅಡಿಯಲ್ಲಿ ದರ ನಿಯಂತ್ರಣ ಸಮಿತಿಯನ್ನ ರಾಜ್ಯ ಸರ್ಕಾರ ರಚನೆ ಮಾಡಿದೆ. ಈ ಸಮಿತಿ ಪ್ರತಿ ವರ್ಷ ರಸ್ತೆ ಸಾರಿಗೆ ದರ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಿದೆ. ದಿನೇ ದಿನೇ ಪೆಟ್ರೋಲ್, ಡೀಸೆಲ್ ದರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಂಗ್ ಟರ್ಮ್ ನಲ್ಲಿ ಏರಿಕೆ ಬದಲು ಆಗಾಗ ಏರಿಕೆಗೆ ಸಮಿತಿ ರಚನೆ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.
ಈ ಸಮಿತಿ ಮಾಡಿದ ಶಿಫಾರಸ್ಸುಗಳ ಅನ್ವಯ ರಾಜ್ಯ ಸರ್ಕಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಿದೆ. ಅದರಂತೆ ದರ ಪರಿಷ್ಕರಣೆಯಾಗಲಿದೆ. ಸಾರಿಗೆ ಇಲಾಖೆಯ ಪರಿಸ್ಥಿತಿ ಸುಧಾರಣೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
Comments are closed.