Kantara Chapter 1: ಸೆ.26 ರಿಂದ ಕಾಂತಾರ: ಚಾಪ್ಟರ್‌ 1 ಬುಕಿಂಗ್‌ ಆರಂಭ

Share the Article

Kantara Chapter 1: ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿರುವ ಕಾಂತಾರ:ಚಾಪ್ಟರ್‌ 1 ಸಿನಿಮಾ ಅಕ್ಟೋಬರ್‌ 2 ರಂದು ಬಿಡುಗಡೆ ಆಗಲಿದೆ. ಸೆ.26 ರಂದು ಕಾಂತಾರ: ಚಾಪ್ಟರ್‌ 1 ಸಿನಿಮಾ ಟಿಕೆಟ್‌ ಬುಕಿಂಗ್‌ ಶುರು ಆಗಲಿದೆ. ಟಿಕೆಟ್‌ ದರ ಹೆಚ್ಚಾಗುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಸಿನಿಮಾ ಟಿಕೆಟ್‌ ದರ ರೂ.200 ಮೀರಬಾರದು ಎಂದು ಸರಕಾರ ಆದೇಶ ಹೊರಡಿಸಿತ್ತು. ಈ ಕುರಿತು ಮಲ್ಟಿಫ್ಲೆಕ್ಸ್‌ ಅಸೋಸಿಯೇಷನ್‌ ಮತ್ತು ʼಹೊಂಬಾಳೆ ಫಿಲ್ಮ್ಸ್‌ʼ ಸಂಸ್ಥೆ ಹೈಕೋರ್ಟ್‌ಗೆ ಹೋಗಿತ್ತು. ಆದ್ದರಿಂದ ಚಿತ್ರದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಹಾಗಾಗಿ ಟಿಕೆಟ್‌ ಬೆಲೆ ದುಬಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:Indian Railway: ಯಶವಂತಪುರ – ಮಂಗಳೂರು ನಡುವೆ ವಿಶೇಷ ರೈಲು ವ್ಯವಸ್ಥೆ

ಒಟ್ಟು 7 ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್‌ ಆಗುತ್ತಿರುವುದು ವಿಶೇಷ. ಭಾರತದಾದ್ಯಂತ 7000 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗಲಿದೆ. ರಿಷಬ್‌ ಶೆಟ್ಟಿ, ರುಕ್ಮಿಣಿ ವಸಂತ್‌, ಗುಲ್ಶನ್‌ ದೇವಯ್ಯ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

 

View this post on Instagram

 

A post shared by Hombale Films (@hombalefilms)

Comments are closed.