SBI ಬ್ಯಾಂಕ್ ಕಡೆಯಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ – 20 ಲಕ್ಷದವರೆಗೆ ಸ್ಕಾಲರ್ಶಿಪ್ ಪಡೆಯಲು ಅವಕಾಶ!!

Share the Article

SBI: ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದು ಬರೋಬರಿ 20 ಲಕ್ಷದವರೆಗೆ ಸ್ಕಾಲರ್ಶಿಪ್ ಪಡೆಯಲು ಅವಕಾಶವನ್ನು ನೀಡಿದೆ.

ಹೌದು, ಎಸ್‌ಬಿಐ ತನ್ನ 75 ನೇ ವಾರ್ಷಿಕೋತ್ಸವದ ಅಂಗವಾಗಿ ಈ ವಿದ್ಯಾರ್ಥಿವೇತನವನ್ನು ಹಮ್ಮಿಕೊಂಡಿದೆ. ಶಾಲೆಯಿಂದ ಕಾಲೇಜುವರೆಗಿನ ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ವರೆಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ವಿದ್ಯಾರ್ಥಿವೇತನಕ್ಕಾಗಿ ನೋಂದಣಿ ನವೆಂಬರ್ 15 ರವರೆಗೆ ತೆರೆದಿರುತ್ತದೆ. ಹಾಗಿದ್ದರೆ ವಿದ್ಯಾರ್ಥಿಗಳು ಇದಕ್ಕೆ ಹೇಗೆ ಅಪ್ಲೈ ಮಾಡುವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಏನಿದು ವಿದ್ಯಾರ್ಥಿ ವೇತನ?

ಎಸ್ ಬಿ ಐ ಫೌಂಡೇಶನ್ ತನ್ನ 75ನೇ ವಾರ್ಷಿಕೋತ್ಸವಕ್ಕಾಗಿ ಈ ಒಂದು ವಿದ್ಯಾರ್ಥಿ ವೇತನವನ್ನು ಘೋಷಿಸಿದೆ. ಈ ವಿದ್ಯಾರ್ಥಿವೇತನವು ಶಾಲೆಗಳು, ಕಾಲೇಜುಗಳು, ಐಐಟಿಗಳು, ಐಐಎಂಗಳು, ವೈದ್ಯಕೀಯ ಕಾಲೇಜುಗಳು ಮತ್ತು ವಿದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಲಭ್ಯವಿದೆ. ವಿದ್ಯಾರ್ಥಿವೇತನಗಳು 15,000 ರಿಂದ 20 ಲಕ್ಷ ರೂ.ವರೆಗೆ ಇರುತ್ತವೆ. ಈ ವರ್ಷ ಒಟ್ಟು 23,230 ಅಭ್ಯರ್ಥಿಗಳಿಗೆ ನೀಡಲಾಗುವುದು.

ಅರ್ಹತೆ ಏನು?

SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನದ ಅರ್ಹತಾ ಮಾನದಂಡಗಳಿಗೆ ಸಂಬಂಧಿಸಿದಂತೆ, ಶಾಲಾ ಮಟ್ಟದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕುಟುಂಬದ ಆದಾಯ 3 ಲಕ್ಷಕ್ಕಿಂತ ಹೆಚ್ಚಿರಬಾರದು. ಅದೇ ರೀತಿ, ಕಾಲೇಜು ಮತ್ತು ಇತರ ಉನ್ನತ ಶಿಕ್ಷಣ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕುಟುಂಬದ ಆದಾಯ 6 ಲಕ್ಷ ರೂ. ಗಿಂತ ಹೆಚ್ಚಿರಬಾರದು.

ಇನ್ನು ಅಭ್ಯರ್ಥಿಗಳು ನೋಂದಣಿ ಸಮಯದಲ್ಲಿ ತಮ್ಮ ಶೈಕ್ಷಣಿಕ ದಾಖಲೆಗಳನ್ನು ಸಹ ಅಪ್‌ಲೋಡ್ ಮಾಡಬೇಕು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ.75 ಅಂಕಗಳು ಅಥವಾ 7.0 CGPA ಪಡೆದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅಲ್ಲದೆ ಒಟ್ಟು ವಿದ್ಯಾರ್ಥಿವೇತನಗಳಲ್ಲಿ ಶೇ.50 ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಈ ವಿದ್ಯಾರ್ಥಿವೇತನಗಳಲ್ಲಿಶೇ.50 SC ಮತ್ತು ST ಅಭ್ಯರ್ಥಿಗಳಿಗೆ ಮೀಸಲಾಗಿದೆ. ಅಂತಹ ಅಭ್ಯರ್ಥಿಗಳು ತಮ್ಮ ಅಂಕಗಳಲ್ಲಿ ಶೇ.10 ಕಡಿತವನ್ನು ಸಹ ಪಡೆಯುತ್ತಾರೆ.

ನೋಂದಾಯಿಸುವುದು ಹೇಗೆ?

ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು, ಮೊದಲು sbiashascholarship.co.in ಗೆ ಭೇಟಿ ನೀಡಿ .

ಮುಖಪುಟದಲ್ಲಿ “ಈಗಲೇ ಅನ್ವಯಿಸು” ಆಯ್ಕೆಯನ್ನು ನೀವು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನೋಂದಾಯಿಸಿಕೊಳ್ಳಬಹುದು.

ನೋಂದಣಿ ಪುಟ ತೆರೆಯುತ್ತದೆ. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ನಮೂದಿಸುವ ಮೂಲಕ ನೀವು ನೋಂದಾಯಿಸಿಕೊಳ್ಳಬಹುದು.

ನೋಂದಣಿ ನಂತರ, ಅರ್ಜಿ ನಮೂನೆ ತೆರೆಯುತ್ತದೆ. ಅರ್ಜಿ ಸಲ್ಲಿಸುವ ಸಮಯದಲ್ಲಿ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

ಇದನ್ನೂ ಓದಿ:Katrina Kaif: ಮಕ್ಕಳಿಗಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕತ್ರಿನಾ ಕೈಫ್ ಪೂಜೆ – 6 ತಿಂಗಳಲ್ಲಿ ದಕ್ಕಿತು ಫಲ, ಯಾವುದು ಆ ಪೂಜೆ?

ನೋಂದಣಿಗೆ ಕೊನೆಯ ದಿನಾಂಕ ನವೆಂಬರ್ 15. ಅಂದರೆ ವಿದ್ಯಾರ್ಥಿವೇತನ ನೋಂದಣಿಗಳನ್ನು ನವೆಂಬರ್ 15 ರವರೆಗೆ ಮಾಡಬಹುದು

Comments are closed.