Customs Raids: ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಸುಕುಮಾರನ್ ನಿವಾಸಗಳ ಮೇಲೆ ಕಸ್ಟಮ್ಸ್ ದಾಳಿ

Custom Raids: ಭೂತಾನ್‌ನಿಂದ 100 ಕ್ಕೂ ಹೆಚ್ಚು ಸಂಖ್ಯೆಯ ಪ್ರೀಮಿಯಂ ವಾಹನಗಳನ್ನು ಅಕ್ರಮವಾಗಿ ಆಮದು ಮಾಡಿಕೊಂಡ ಆರೋಪದ ಮೇಲೆ , ಕಸ್ಟಮ್ಸ್ ಪ್ರಿವೆಂಟಿವ್ ವಿಭಾಗವು ಮಂಗಳವಾರ (ಇಂದು) (ಸೆಪ್ಟೆಂಬರ್ 23, 2025) ಕೇರಳದ ಪ್ರಮುಖ ನಟರಾದ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರ್ ಅವರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ನಟರುಗಳು ಮಾತ್ರವಲ್ಲದೇ ಕೆಲವು ಉದ್ಯಮಿಗಳ ಮನೆಗಳ ಮೇಲೂ ಸಹ ಕಸ್ಟಮ್ಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಕಸ್ಟಮ್ಸ್ ಸಂಸ್ಥೆಯು ರಾಜ್ಯಾದ್ಯಂತ ದಾಳಿ ನಡೆಸಿದ್ದು, ಕೊಚ್ಚಿ, ತಿರುವನಂತಪುರಂ, ಕೋಝಿಕ್ಕೋಡ್, ಮಲಪ್ಪುರಂ, ಕುಟ್ಟಿಪ್ಪುರಂ ಮತ್ತು ತ್ರಿಶೂರ್ ಸೇರಿದಂತೆ ಸುಮಾರು 30 ಸ್ಥಳಗಳಲ್ಲಿ ಇದು ನಡೆಯುತ್ತಿದೆ.
ಕೇರಳದ ಕೊಚ್ಚಿಯಲ್ಲಿರುವ ತೇವರದಲ್ಲಿರುವ ಪೃಥ್ವಿರಾಜ್ ಸುಕುಮಾರನ್ ಮನೆ ಹಾಗೂ ಕೊಚ್ಚಿಯ ಪನಂಪಿನ್ನಿ ನಗರದಲ್ಲಿರುವ ದುಲ್ಕರ್ ಸಲ್ಮಾನ್ ಮನೆ ಮೇಲೆ ಕಸ್ಟಮ್ಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಪೃಥ್‌ವುರಾಜ್ ಅವರ ತಿರುವನಂತಪುರಂನ ಮನೆ ಮೇಲೇ ದಾಳಿ ಮಾಡಿದ್ದು, ಅಲ್ಲಿ ಯಾವುದೇ ವಿದೇಶಿ ವಾಹನ ಪತ್ತೆಯಾಗಿಲ್ಲ ಎನ್ನಲಾಗಿದೆ.
“ಭಾರತೀಯ ಕಾನೂನು ಸೆಕೆಂಡ್ ಹ್ಯಾಂಡ್ ವಾಹನಗಳ ಆಮದನ್ನು ನಿಷೇಧಿಸುತ್ತದೆ. ಮೋಟಾರು ವಾಹನ ಇಲಾಖೆಯ ಪರಿವಾಹನ್ ವೆಬ್‌ಸೈಟ್ ಮತ್ತು ನಮ್ಮ ವೆಬ್‌ಸೈಟ್‌ನಲ್ಲಿ ನಕಲಿ ಸೇರಿದಂತೆ 10 ರಿಂದ 15 ಉಲ್ಲಂಘನೆಗಳನ್ನು ಅಕ್ರಮ ಆಮದು ಒಳಗೊಂಡಿದೆ ಎಂದು ನಾವು ಗುರುತಿಸಿದ್ದೇವೆ” ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.
ಕೆಲ ಲಿಮಿಟೆಡ್ ಎಷಿನ್ ಕಾರುಗಳನ್ನು ಈ ನಟರುಗಳು ವಿದೇಶಗಳಿಂದ ತರಿಸಿದ್ದು, ಇದೀಗ ಕಸ್ಟಮ್ಸ್ ಅಧಿಕಾರಿಗಳು ಆ ಕಾರುಗಳ ದಾಖಲೆಗಳನ್ನು ಪರಿಶೀಲನೆ ಮಾಡಿದ್ದು, ತೆರಿಗೆ, ನೋಂದಣಿ ಇತ್ಯಾದಿ ಮಾಹತಿ ಪಡೆದಿದ್ದಾರೆ.
ಈ ವಾಹನಗಳು ಯಾವುದೂ ಭಾರತದಲ್ಲಿ ತಯಾರಾಗಿಲ್ಲ. ಹೊಸ ವಾಹನಗಳನ್ನು ಭೂತಾನ್ ಮೂಲಕ ಬಳಸಿದ ವಾಹನಗಳಾಗಿ ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿದೆ ಎಂದು ಶಂಕಿಸಲಾಗಿದೆ. ಅಕ್ರಮವಾಗಿ ಆಮದು ಮಾಡಿಕೊಂಡಿರುವುದು ಕಂಡುಬಂದ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು. ಸಂಬಂಧಿತ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದ ಮಾಲೀಕರು ದಂಡನಾತ್ಮಕ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿದರು.
ದುಲ್ಕರ್ ಬಳಿ ಹಲವು ಕಾರುಗಳಿದ್ದು, ಅಂದಾಜು ಅವರೇ ಹೇಳಿದಂತೆ 40 ಕ್ಕೂ ಹೆಚ್ಚು ಕಾರುಗಳು ಇದೆ. ಬಿಎಂಡಬ್ಲ್ಯೂ ಒಂದೇ ಬ್ರ್ಯಾಂಡ್‌ನ 10 ಕ್ಕೂ ಹೆಚ್ಚು ಕಾರುಗಳು ಇದೆ. ಎಲ್ಲಾ ರೀತಿಯ ಎಸ್‌ಯುವಿ ಕಾರುಗಳು, ಪಿಕಪ್ ಟ್ರಕ್‌ಗಳು, ಸೂಪರ್ ಕಾರುಗಳು ದುಲ್ಕರ್ ಬಳಿ ಇದೆ.
ಇದನ್ನೂ ಓದಿ:False Hindu God: ಹನುಮಂತ ನಕಲಿ ದೇವರು ಎಂದ ಟ್ರಂಪ್ ಪಕ್ಷದ ನಾಯಕ
ಪೃಥ್ವಿರಾಜ್ ಬಳಿ ಕೂಡಾ ಹಲವು ವಿದೇಶಿ ಕಾರುಗಳು ಇದೆ. ಆಸ್ಟಿನ್ ಮಾರ್ಟಿನ್ ಕಾರು ಕೂಡಾ ಇದೆ. ಹಲವು ಸ್ಪೋರ್ಟ್ಸ್ ಕಾರುಗಳುನ್ನು ಹೊಂದಿದ್ದಾರೆ.
Comments are closed.