Home News Mysore : ದಸರಾ ನಡುವೆ ಚಾಮುಂಡಿ ಬೆಟ್ಟದ ಅರ್ಚಕ ನಿಧನ – ಅರ್ಧ ದಿನ ದೇವಿಯ...

Mysore : ದಸರಾ ನಡುವೆ ಚಾಮುಂಡಿ ಬೆಟ್ಟದ ಅರ್ಚಕ ನಿಧನ – ಅರ್ಧ ದಿನ ದೇವಿಯ ದರ್ಶನ ಬಂದ್

Hindu neighbor gifts plot of land

Hindu neighbour gifts land to Muslim journalist

Mysore : ಮೈಸೂರಿನಲ್ಲಿ (Mysuru) ದಸರಾ ಸಂಭ್ರಮ (Dasara) ಮನೆ ಮಾಡಿದೆ, ಇದರ ನಡುವೆಯೇ ದೇವಸ್ಥಾನಕ್ಕೆ ಸೂತಕದ ಛಾಯೆ ಆವರಿಸಿದ್ದು, ಚಾಮುಂಡಿ ಬೆಟ್ಟದ (Chamundi Betta) ಶಿವಾರ್ಚಕರು ನಿಧನರಾಗಿದ್ದಾರೆ.

ಹೌದು, ದಸರಾ ಆರಂಭದ ಬೆನ್ನಲ್ಲಿಯೇ ಚಾಮುಂಡಿ ಬೆಟ್ಟದ ಶಿವಾರ್ಚಕ ಮಂಗಳವಾರ ನಿಧರಾಗಿದ್ದಾರೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸೋಮವಾರ ಅದ್ದೂರಿ ಚಾಲನೆ ಸಿಕ್ಕಿತ್ತು. ಇದರ ನಡುವೆಯೇ ಈ ಅವಗಢ ಸಂಭವಿಸಿದೆ. ಚಾಮುಂಡಿ ಬೆಟ್ಟದ ಶಿವಾರ್ಚಕರಾಗಿದ್ದ ವಿ. ರಾಜು ಹಠಾತ್‌ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ತಾಯಿ ಚಾಮುಂಡಿ ದೇವಿ ದರ್ಶನ ಕೆಲ ಕಾಲ ನಿರ್ಬಂಧಿಸಲಾಗಿದೆ.

ಹಲವು ದಿನಗಳಿಂದ ರಾಜು ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದ್ದು, ಈ ಹಿಂದೆ ಅಪಘಾತವಾಗಿ ಆರೋಗ್ಯ ಸಮಸ್ಯೆ ಎದುರಾಗಿತ್ತು. ರಾತ್ರಿ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ.