Rat on Board: ಕಾನ್ಪುರದಿಂದ ದೆಹಲಿಗೆ ಹೊರಟಿದ್ದ ವಿಮಾನವನ್ನು 3 ಗಂಟೆ ನಿಲ್ಲಿಸಿದ ಇಲಿ

Rat on Board: ಇಂದು ಕಾನ್ಪುರ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಏರ್‌ಲೈನ್ಸ್ ವಿಮಾನವು ಸುಮಾರು ಮೂರು ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿಯೇ ನಿಲ್ಲಿಸಿದ ಘಟನೆಯೊಂದು ನಡೆಯಿತು.

140 ಪ್ರಯಾಣಿಕರನ್ನು ಹೊಂದಿದ್ದು,ಮಧ್ಯಾಹ್ನ 2:55 ಕ್ಕೆ ದೆಹಲಿಗೆ ಹೊರಡಬೇಕಿದ್ದ ವಿಮಾನದೊಳಗೆ ಕ್ಯಾಬಿನ್ ಒಳಗೆ ಇಲಿ ಹೋಗುವುದನ್ನು ಗಮನಿಸಿದ್ದಾರೆ. ಕೂಡಲೇ ವಿಮಾನಯಾನ ಸಿಬ್ಬಂದಿಗೆ ತಕ್ಷಣವೇ ಇಲಿ ಇರುವ ಬಗ್ಗೆ ತಿಳಿಸಲಾಯಿತು.
ಇದರ ನಂತರ, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು, ನಂತರ ಇಲಿಯನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಹುಡುಕಾಟ ಮುಂದುವರೆಯಿತು. ವಿಮಾನವು ಅಂತಿಮವಾಗಿ ಸಂಜೆ 6:03 ಕ್ಕೆ ಕಾನ್ಪುರದಿಂದ ಹೊರಟು ಸಂಜೆ 7:16 ಕ್ಕೆ ದೆಹಲಿ ತಲುಪಿದೆ.
Comments are closed.