ITR Filing: ಆದಾಯ ತೆರಿಗೆ ರಿಟರ್ನ್ ಸ್ಟೇಟಸ್ ತಿಳಿದುಕೊಳ್ಳುವುದು ಹೇಗೆ?

ITR Filing: ಈಗಾಗಲೇ ನೀವೆಲ್ಲ ಆದಾಯ ತೆರಿಗೆ ಪಾವತಿ ಮಾಡಿರುತ್ತೀರಿ ಅಂದು ಕೊಳ್ಳುತ್ತಿದ್ದೇವೆ. ಸೆಪ್ಟೆಂಬರ್ 16ರ ತನಕ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಲು ಡೆಡ್ ಲೈನ್ ವಿಧಿಸಲಾಗಿತ್ತು. ಇದೀಗ ಡೆಡ್ ಲೈನ್ ಮುಗಿದಿದ್ದು, ಒಂದು ವೇಳೆ ನೀವಿನ್ನೂ ರಿಟರ್ನ್ಸ್ ಮರುಪಾವತಿ ಮಾಡದೆ ಇದ್ರೆ ತಕ್ಷಣ ಆ ಕೆಲಸ ಮಾಡಿ. ಕೆಲವು ಕಂಡೀಶನ್ಗಳ ಜೊತೆ ಡಿಸೆಂಬರ್ 31ರ ತನಕ ಇನ್ಕಮ್ ಟ್ಯಾಕ್ಸ್ ಫೈಲ್ ಮಾಡಲು ಅವಕಾಶ ಇರುತ್ತದೆ. 1000 ರೂಪಾಯಿಯಿಂದ 5000 ರೂಪಾಯಿತನಕ ಲೇಟ್ ರಿಟರ್ನ್ ಫೈನ್ ಕೂಡಾ ಇರುತ್ತದೆ.

ಈಗಾಗಲೇ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಮಾಡಿದವರು ತಮ್ಮ ಮರುಪಾವತಿ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವುದು ಹೇಗೆ? ಆದಾಯ ತೆರಿಗೆ ಮರುಪಾವತಿ ಸ್ಥಿತಿಯನ್ನು ಪರಿಶೀಲಿಸಲು ಯಾವುದೇ ಮಿಸ್ಡ್ ಕಾಲ್ ಸಂಖ್ಯೆ ಇರೋದಿಲ್ಲ. ಆದರೂ ನೀವು ಆನ್‌ಲೈನ್‌ನಲ್ಲಿ ಅಥವಾ ಆದಾಯ ತೆರಿಗೆ ಇಲಾಖೆಯ ಕೇಂದ್ರೀಕೃತ ಸಂಸ್ಕರಣಾ ಕೇಂದ್ರ (CPC) ಸಹಾಯವಾಣಿಗೆ ಕರೆ ಮಾಡುವ ಮೂಲಕ ಸ್ಥಿತಿಯನ್ನು ಪರಿಶೀಲಿಸಬಹುದು.
ಮರುಪಾವತಿ ಸ್ಥಿತಿ ಆನ್‌ಲೈನ್ ಪರಿಶೀಲನೆ ಹೇಗೆ?
ಇ-ಫೈಲಿಂಗ್ ಪೋರ್ಟಲ್: ಮೊದಲಿಗೆ ನೆನಪಿಡಿ. ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದ ಕನಿಷ್ಟ 10 ದಿನದ ನಂತರವಷ್ಟೆ ನೀವು ಈ ಪರಿಶೀಲನೆ ಕೈಗೊಳ್ಳಬಹುದು.
ನಿಮ್ಮ ಪ್ಯಾನ್ ಅನ್ನು ನಿಮ್ಮ ಬಳಕೆದಾರ ID ಆಗಿ ಬಳಸಿಕೊಂಡು incometax.gov.in ನಲ್ಲಿ ಅಧಿಕೃತ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿ. ( ನೆನಪಿಡಿ: ಒಂದು ಬಾರಿ. ಯೂಸರ್ ಐಡಿ ಪಾಸ್ವರ್ಡ್ ಆಕ್ಟಿವೇಟ್ ಮಾಡಿ ಕೊಳ್ಳಬೇಕು). ಆಯಾ ಮೌಲ್ಯಮಾಪನ ವರ್ಷದ ಸ್ಥಿತಿಯನ್ನು ಪರಿಶೀಲಿಸಲು ಇ-ಫೈಲ್ > ಆದಾಯ ತೆರಿಗೆ ರಿಟರ್ನ್ಸ್ > ಫೈಲ್ ಮಾಡಿದ ರಿಟರ್ನ್‌ಗಳನ್ನು ವೀಕ್ಷಿಸಿ -ಗೆ ನ್ಯಾವಿಗೇಟ್ ಮಾಡಿ.
ಇದಲ್ಲದೆ, NSDL ಪೋರ್ಟಲ್: tin.tin.nsdl.com/oltas/refund-status-pan.html ನಲ್ಲಿ protean (ಹಿಂದೆ NSDL) ವೆಬ್‌ಸೈಟ್‌ಗೆ ಭೇಟಿ ನೀಡಿ. ಒಂದು ವೇಳೆ ನೀವು ಲಾಗಿನ್ ಆಗದೆ ಸ್ಥಿತಿಯನ್ನು ವೀಕ್ಷಿಸಲು ನಿಮ್ಮ ಪ್ಯಾನ್ ಮತ್ತು ಸಂಬಂಧಿತ ಮೌಲ್ಯಮಾಪನ ವರ್ಷವನ್ನು ನಮೂದಿಸಿ ಮರುಪಾವತಿ ಸ್ಥಿತಿ ಕ್ಷಣಗಳಲ್ಲಿ ದೊರೆಯುತ್ತದೆ.
ಮರುಪಾವತಿಗೆ ಸಹಾಯವಾಣಿ ಸಂಖ್ಯೆಗಳು
ನಿಮ್ಮ ಮರುಪಾವತಿ ವಿಳಂಬವಾಗಿದ್ದರೆ ಅಥವಾ ಇತರ ಮರುಪಾವತಿ ಸಂಬಂಧಿತ ಪ್ರಶ್ನೆಗಳಿಗೆ, ನೀವು ತೆರಿಗೆ ಇಲಾಖೆಯ ಕೇಂದ್ರೀಕೃತ ಸಂಸ್ಕರಣಾ ಕೇಂದ್ರವನ್ನು (CPC) ಸಂಪರ್ಕಿಸಬಹುದು:
ಟೋಲ್-ಫ್ರೀ ಸಂಖ್ಯೆ: 1800-103-4455
ನೇರ ಸಂಖ್ಯೆ: +91-80-46605200
ಸಹಾಯವಾಣಿ ಸಮಯ: ಸೋಮವಾರದಿಂದ ಶುಕ್ರವಾರದವರೆಗೆ, ಬೆಳಿಗ್ಗೆ 8:00 ರಿಂದ ರಾತ್ರಿ 8:00 ತನಕ
ಹಣ ರಿಟರ್ನ್ಸ್ ವಿಳಂಬಕ್ಕೆ ಸಾಮಾನ್ಯ ಕಾರಣಗಳು
ತಪ್ಪು ಬ್ಯಾಂಕ್ ವಿವರ: ಬ್ಯಾಂಕ್ ಖಾತೆ ಸಂಖ್ಯೆ, IFSC ಕೋಡ್ ತಪ್ಪಾಗಿರುವ ಸಾಧ್ಯತೆ. (ನೀವು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಬೇಕಾಗಬಹುದು.)
ಪ್ಯಾನ್ ನಿಷ್ಕ್ರಿಯವಾದ ಕಾರಣ: ಆಧಾರ್ ಕಾರ್ಡ್‌ನೊಂದಿಗೆ ಪಾನ್ ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ನಿಷ್ಕ್ರಿಯವಾಗಿರಬಹುದು.
ತಪ್ಪಾದ ಹೆಸರು: ನಿಮ್ಮ ಪ್ಯಾನ್‌ನಲ್ಲಿರುವ ಹೆಸರು ಮತ್ತು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹೆಸರಿನ ನಡುವೆ ಹೊಂದಾಣಿಕೆಯಾಗದಿರಬಹುದು.
ಹಳೆ ಬಾಕಿ: ನೀವು ಕಟ್ಟಲು ಬಾಕಿ ಇರುವ ತೆರಿಗೆ ಬೇಡಿಕೆಗೆ, ಆದಾಯ ತೆರಿಗೆ ಇಲಾಖೆಯು ನಿಮ್ಮ ಮರುಪಾವತಿಯನ್ನು ಸರಿಹೊಂದಿಸಿರಬಹುದು. ನೀವು ನಮೂದಿಸಿದ ಮೊಬೈಲ್ ಸಂಖ್ಯೆ ಅಥವಾ ಈ ಮೇಲಿಗೆ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನಿಂದ ಏನಾದರೂ ಮಾಹಿತಿ ಅಥವಾ ಕೋರಿಕೆ ಬರಬಹುದು. ಹಾಗಾಗಿ ಫೋನ್ ಇನ್ ಬಾಕ್ಸ್ ಮತ್ತು ಇ-ಮೇಲ್ ಮೇಲೆ ನಿಗಾ ಇರಲಿ.
Comments are closed.