Beluru: ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ನೀಚರು, ಭಕ್ತರಿಂದ ಪ್ರತಿಭಟನೆ

Beluru: ದೇವಾಲಯದಲ್ಲಿದ್ದ ಗಣಪತಿ ಮೂರ್ತಿಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ.

ಬೇಲೂರು ಪಟ್ಟಣದ ಪುರಸಭೆಯ ಶ್ರೀ ವರಸಿದ್ದಿ ವಿನಾಯಕ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಎರಡು ಚಪ್ಪಲಿಯನ್ನು ಗಣೇಶನ ಮೂರ್ತಿಗೆ ಹಾಕಲಾಗಿದೆ. ಇಂದು ಬೆಳಿಗ್ಗೆ ಭಕ್ತರು ದೇವರ ದರ್ಶನಕ್ಕೆಂದು ಬಂದಾಗ ಚಪ್ಪಲಿ ಕಂಡು ಆಘಾತಗೊಂಡು, ನಂತರ ವಿಷಯ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಎಸ್‌ಪಿ ಮೊಹಮ್ಮದ್ ಸುಜೇತಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪೊಲೀಸರಿಂದ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:PM Modi: ದೇಶವನ್ನುದ್ದೇಶಿಸಿ ಇಂದು ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಮಾತು
Comments are closed.