Yamaha: ದಸರಾ ಹಬ್ಬಕ್ಕಾಗಿ ಸ್ಕೂಟರ್, ಬೈಕ್ ಮೇಲೆ ಭರ್ಜರಿ ಆಫರ್ ಘೋಷಿಸಿದ ಯಮಹಾ!! ಕೊಳ್ಳಲು ಮುಗಿಬಿದ್ದ ರಾಜ್ಯದ ಜನ

Yamaha: ಕೇಂದ್ರ ಸರ್ಕಾರ GST ಪರಿಷ್ಕರಣೆ ಮಾಡಿದ ಬಳಿಕ ಹಲವು ಕಾರು ಮತ್ತು ಬೈಕ್ ಕಂಪನಿಗಳು ದರವನ್ನು ಇಳಿಸಿ ತಮ್ಮ ಹೊಸ ದರಗಳನ್ನು ಘೋಷಿಸಿಕೊಂಡಿವೆ. ಇದರ ನಡುವೆಯೇ ಯಮಹಾ ಬೈಕ್ ಕಂಪನಿ ದಸರಾ ಹಬ್ಬಕ್ಕಾಗಿ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಜನರು ಕೂಡ ಮುಗಿಬಿದ್ದು ಕೊಳ್ಳುತ್ತಿದ್ದಾರೆ.

ಹೌದು, ಕರ್ನಾಟಕದಲ್ಲಿ ದಸರಾ ಹಬ್ಬ ಎಂದರೆ ತುಂಬಾ ವಿಶೇಷ. ಮೈಸೂರು ಮಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಅತಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಈ ಸಂಭ್ರಮದ ನಡುವೆ ಯಮಹಾ, ರಾಜ್ಯದ ಜನತೆಗೆ ಗುಡ್ ನ್ಯೂಸ್ ಕೊಟ್ಟಿದ್ದು ತನ್ನ ಬೈಕ್ ಮತ್ತು ಸ್ಕೂಟರ್ ಗಳ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಹಾಗಿದ್ದರೆ ಯಾವ ಬೈಕ್ ಹಾಗೂ ಸ್ಕೂಟರ್ ಮೇಲೆ ಏನೆಲ್ಲಾ ಆಫರ್ ಇದೆ ಎಂದು ನೋಡೋಣ.
ಯಮಹಾದ ನವರಾತ್ರಿ ವಿಶೇಷ ಆಫರ್ ಗಳು:
* R15 V4: ಈ ವಾಹನದ ಮೇಲೆ Rs. 15,734 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 6,560 ಮೌಲ್ಯದ ವಿಮಾ ಪ್ರಯೋಜನ
* MT-15: ಈ ವಾಹನದ ಮೇಲೆ Rs. 14,964 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 6,560 ಮೌಲ್ಯದ ವಿಮಾ ಪ್ರಯೋಜನ
* FZ-S Fi ಹೈಬ್ರಿಡ್: ಈ ವಾಹನದ ಮೇಲೆ Rs. 12,031 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 6,501 ಮೌಲ್ಯದ ವಿಮಾ ಪ್ರಯೋಜನ
* Fascino 125 ಹೈಬ್ರಿಡ್: Rs. 8,509 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 5,401 ಮೌಲ್ಯದ ವಿಮಾ ಪ್ರಯೋಜನ
* RayZR 125 Fi: Rs. 7,759 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 3,799 ವರೆಗೆ ಪ್ರಯೋಜನ
ಇದನ್ನೂ ಓದಿ:Yogurt: ಮೊಸರು ಸಿಕ್ಕಾಪಟ್ಟೆ ಹುಳಿ ಇದ್ರೆ ಈ ಒಂದು ವಸ್ತು ಬೆರೆಸಿದ್ರೆ ಸಾಕು
Comments are closed.