33 ಕೋಟಿಗೆ ತನ್ನ ಆತ್ಮವನ್ನು ಮಾರಾಟ ಮಾಡಿದ ಮಹಿಳೆ; ಮಾರಿದ ಆ ಆತ್ಮ ಎಲ್ಲಿಟ್ಟಿದ್ದಾರೆ?

ಮಾಸ್ಕೋ: ಮಹಿಳೆಯೊಬ್ಬರು ತಮ್ಮ ಆತ್ಮವನ್ನು 33 ಕೋಟಿ ರೂ.ಗೆ ($4 ಮಿಲಿಯನ್) ಮಾರಾಟ ಮಾಡಿದ್ದಾರೆ. ಈ ವಿಚಿತ್ರ ಒಪ್ಪಂದಕ್ಕೆ ರಕ್ತದಲ್ಲಿ ಸಹಿ ಹಾಕಲಾಗಿದ್ದು, ಆತ್ಮವನ್ನು ಮಾರಿದ ಹಣದಿಂದ ಆಕೆಯು ಗೊಂಬೆ ಮತ್ತು ಸಂಗೀತ ಕಾರ್ಯಕ್ರಮದ ಟಿಕೆಟ್ ಅನ್ನು ಖರೀದಿಸಿದ್ದಾಗಿ ಹೇಳಿಕೊಂಡಿದ್ದಾಳೆ. ಈ ಕುರಿತು ಡೈಲಿ ಸ್ಟಾರ್ ಪತ್ರಿಕೆಯೊಂದು ವರದಿ ಮಾಡಿದೆ.

ತಮಾಷೆಗೆಂದು ಮಾಡಿದ್ದ ಪೋಸ್ಟ್
ರಷ್ಯಾದ ಫೇಸ್ ಬುಕ್ ಮಾದರಿಯಾದ Vkontakteನ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಡಿಮಿಟ್ರಿ ಎಂಬ ಹೆಸರಿನ ವ್ಯಕ್ತಿಯೊಬ್ಬ ತಾನು ಆತ್ಮವನ್ನು ಖರೀದಿಸುವುದಾಗಿ ತಮಾಷೆಯ ಪೋಸ್ಟ್ ಒಂದನ್ನು ಬರೆದುಕೊಂಡಿದ್ದರು. ಆರಂಭದಲ್ಲಿ ಇದನ್ನು ಎಲ್ಲರೂ ತಮಾಷೆಯಾಗಿ ತಿಳಿದುಕೊಂಡು ಕಮೆಂಟ್ ಮಾಡಿದ್ದರು ಕೂಡಾ. ಆದರೆ ಏಕಾಏಕಿ ಮಹಿಳೆಯೊಬ್ಬಳು ತನ್ನ ಅತ್ಮವನ್ನು ಮಾರಿಕೊಳ್ಳಲು. ಮುಂದೆ ಬಂದಿದ್ದಾಳೆ.
ರಕ್ತದಲ್ಲಿ ಸಹಿ, ಮಾರಿ ಹಾರಿ ಹೋದ ಆತ್ಮ?
ಆಕೆ 33 ಕೋಟಿ ಪಡೆದು ತಮ್ಮ ಆತ್ಮವನ್ನು ಮಾರಿ ಹಾಕಿದ್ದಾಳೆ. ಈ ಒಪ್ಪಂದ ರಕ್ತದಲ್ಲಿ ಸಹಿ ಹಾಕಿ ಬರೆಯಲಾಗಿದೆ. ಈ ಒಪ್ಪಂದದ ದಾಖಲೆಯನ್ನು ಡಿಮಿಟ್ರಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಒಪ್ಪಂದದ ಕುರಿತು ಮಹಿಳೆ ಹೇಳಿದ್ದೇನು ಗೊತ್ತಾ?
ತನ್ನ ಆತ್ಮ ಮಾರಾಟ ಮಾಡಿಕೊಂಡ ಬಗ್ಗೆ ಯಾವುದೇ ನನಗೆ ಯಾವುದೇ ವಿಷಾದವಿಲ್ಲ. (ದುಡ್ಡು ಬಂದಿತ್ತಲ್ಲ, ಆ ಕಾರಣ ಇರಬಹುದು!!) “ನನ್ನ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗಿದೆ. ಈ ಹಣದಿಂದ Labubu ಗೊಂಬೆ ಮತ್ತು ಪ್ರಸಿದ್ಧ ಗಾಯಕಿ ನಾಡೆಜ್ಡಾ ಕಡಿಶೇವಾ ಅವರ ಮ್ಯೂಸಿಕ್ ಪ್ರೋಗ್ರಾಂನ ಟಿಕೆಟ್ ಖರೀದಿಸಿದ್ದೇನೆ” ಎಂದು ಮಹಿಳೆ ಹೇಳಿಕೊಂಡಿದ್ದಾರೆ.
“ನಾನು ಆತ್ಮ ಖರೀದಿಯ ಆಫರ್ ಅನ್ನು ನಾನು ತಮಾಷೆಯಾಗಿ ನೀಡಿದ್ದೆ. ಆದರೆ ಮಹಿಳೆಯೊಬ್ಬರು ಅದನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ತಿಳಿದಿರಲಿಲ್ಲ ಎಂದು ಡಿಮಿಟ್ರಿ ಹೇಳಿಕೊಂಡಿದ್ದಾರೆ. 33 ಕೋಟಿ ರೂಪಾಯಿ ಖರ್ಚು ಮಾಡು ಖರೀದಿಸಿರುವ ಆತ್ಮವನ್ನು ಡಿಮಿಟ್ರಿ ಎಲ್ಲಿಟ್ಟಿದ್ದಾರೆ? ಏನು ಮಾಡುತ್ತಾರೆ? ಅನ್ನೋದು ಇದೀಗ ಉತ್ತರ ಸಿಗದ ಪ್ರಶ್ನೆ!
Comments are closed.