Asia Cup ನಲ್ಲಿ ಒಂದೇ ಓವರ್ ಗೆ 5 ಸಿಕ್ಸ್ ಬಿಟ್ಟುಕೊಟ್ಟ ಮಗ – ಹೃದಯಘಾತದಿಂದ ಸಾವನ್ನಪ್ಪಿದ ತಂದೆ !!

Asia Cup: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಅಫ್ಗಾನಿಸ್ತಾನದ ಆಟಗಾರ ಮೊಹಮ್ಮದ್ ನಬಿ, ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇದೇ ಸಂದರ್ಭದಲ್ಲಿ ದುನಿತ್ ವೆಲ್ಲಾಲಗೆ ಅವರ ತಂದೆ ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆ ನಡೆದಿದೆ.

ಏಷ್ಯಾ ಕಪ್ 2025ರ ಪ್ರಮುಖ ಪಂದ್ಯದಲ್ಲಿ ಶ್ರೀಲಂಕಾ ಜಯ ಸಾಧಿಸಿ ಸೂಪರ್ 4ಗೆ ಅರ್ಹತೆ ಪಡೆದಿದೆ. ಅಫ್ಘಾನಿಸ್ತಾನ ವಿರುದ್ದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಜಯ ಸಾಧಿಸಿದ ಲಂಕಾ ಮುಂದಿನ ಹಂತಕ್ಕೆ ತೇರ್ಗಡೆಯಾಗಿದೆ. ಇದೇ ಪಂದ್ಯದಲ್ಲಿ ಲಂಕಾದ ಬೌಲರ್ ದುನಿತ್ ವೆಲ್ಲಲಗೆ (Dunith Wellalage) ಅವರು ಒಂದೇ ಓವರ್ ನಲ್ಲಿ ಐದು ಸಿಕ್ಸರ್ ಬಿಟ್ಟುಕೊಟ್ಟರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿ ಶ್ರೀಲಂಕಾಗೆ 170 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಶ್ರೀಲಂಕಾ 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿತು. ಹೀಗೆ ಪಂದ್ಯ ಗೆದ್ದು ಸೂಪರ್ 4 ಹಂತಕ್ಕೆ ಲಗ್ಗೆ ಇಟ್ಟ ಖುಷಿಯಲ್ಲಿರುವಾಗಲೇ ಶ್ರೀಲಂಕಾ ತಂಡದ ಆಟಗಾರ ದುನಿತ್ ವೆಲ್ಲಲಾಗೆಗೆ ದುಃಖದ ಸುದ್ದಿಯೊಂದು ಬರ ಸಿಡಿಲಿನಂತೆ ಬಡಿದಿತ್ತು. ಆತ ಆಟವಾಡುತ್ತಿರುವಾಗಲೇ ಆತನ ತಂದೆ ಸುರಂಗ ವೆಲ್ಲಲಾಗೆ ನಿಧನ ಹೊಂದಿದ್ದರು.
ಇದರಿಂದಾಗಿ ಏಷ್ಯಾ ಕಪ್ ಟೂರ್ನಿಯನ್ನು ಅರ್ಧದಿಂದಲೇ ಮೊಟಕುಗೊಳಿಸಿ ಅವರು ಸ್ವದೇಶಕ್ಕೆ ಮರಳಿದ್ದಾರೆ. ಅಫ್ಗಾನಿಸ್ತಾನ ವಿರುದ್ಧದ ಪಂದ್ಯದ ಬಳಿಕವಷ್ಟೇ ವೆಲ್ಲಾಳಗೆ ಅವರಿಗೆ ತಂದೆಯ ನಿಧನ ವಾರ್ತೆ ತಿಳಿದು ಬಂತು. ಅಫ್ಗಾನಿಸ್ತಾನದ ಬ್ಯಾಟರ್ ಮೊಹಮ್ಮದ್ ನಬಿ ಸಹ ಸಂತಾಪ ಸೂಚಿಸಿದ್ದಾರೆ.
Comments are closed.