Home News Karnataka Gvt : ರಾಜ್ಯ ರೈತರಿಗೆ ಗುಡ್ ನ್ಯೂಸ್ – ತೋಟ, ಹೊಲಗಳಿಗೆ ಹೋಗುವ ರಸ್ತೆಗಳ...

Karnataka Gvt : ರಾಜ್ಯ ರೈತರಿಗೆ ಗುಡ್ ನ್ಯೂಸ್ – ತೋಟ, ಹೊಲಗಳಿಗೆ ಹೋಗುವ ರಸ್ತೆಗಳ ಕುರಿತು ಸರ್ಕಾರದಿಂದ ಮಹತ್ವದ ನಿರ್ಧಾರ

Hindu neighbor gifts plot of land

Hindu neighbour gifts land to Muslim journalist

Karnataka Gvt: ರಾಜ್ಯದಲ್ಲಿ ರೈತರುಗಳಿಗೆ ನೀರು, ಗೊಬ್ಬರ ಸಮಸ್ಯೆ ಎಷ್ಟಿದೆಯೋ ಅದರೊಂದಿಗೆ ತಮ್ಮ ಜಮೀನುಗಳಿಗೆ ಹೋಗುವ ದಾರಿಗಳ, ರಸ್ತೆಗಳ ಬಗ್ಗೆಯೂ ಅಷ್ಟೇ ಸಮಸ್ಯೆಗಳು ಇವೆ. ತಮ್ಮ ಜಮೀನಿಗೆ ಹೋಗಲು ಬೇರೆಯವರ ತೋಟಗಳನ್ನು ಸುತ್ತಿ ಬಳಸಿ ಹೋಗಬೇಕು, ನಾವು ಹೋಗುವಾಗ ಅವರು ಬೇಲಿಗಳನ್ನು ಹಾಕುತ್ತಾರೆ ಎಂಬ ಅನೇಕ ಕಂಪ್ಲೇಂಟ್ ರೈತರಿಂದ ಬರುತ್ತದೆ. ಆದರೆ ಇದೀಗ ಸರ್ಕಾರ ಈ ವಿಚಾರವಾಗಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಹೌದು, ರೈತರು ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಕಾಲುದಾರಿ, ಬಂಡಿದಾರಿ ಅಥವಾ ಸೌಲಭ್ಯ ಒದಗಿಸಲು ಕ್ರಮವಹಿಸುವಂತೆ ಮಹತ್ವದ ಆದೇಶವನ್ನು ಮಾಡಿದೆ. ಈ ಕುರಿತಂತೆ ರಾಜ್ಯದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.

ಸುತ್ತೋಲೆಯಲ್ಲಿ ರಾಜ್ಯದಲ್ಲಿ ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಬಳಸುವ ಕೃಷಿ ಸಲಕರಣೆಗಳನ್ನು ಸಾಗಿಸಲು ಅನ್ಯ ಭೂಮಾಲೀಕರ ಖಾಸಗಿ ಜಮೀನುಗಳಲ್ಲಿ ತಿರುಗಾಡಲು ‘ದಾರಿ’ ಸಮಸ್ಯೆ ಇದ್ದು, ಬಳಕೆದಾರ ರೈತರುಗಳಿಗೆ ತೊಂದರೆಗಳಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ‘ದಾರಿ’ ಸಮಸ್ಯೆ ಬಹುಕಾಲದಿಂದಲೂ ಇದ್ದು, ಅಕ್ಕಪಕ್ಕದ ಜಮೀನುಗಳ ರೈತರು ಕೆಲವು ಖಾಸಗಿ ಜಮೀನುಗಳನ್ನು ದಾಟಿಕೊಂಡು ಕೃಷಿ ಪೂರಕ ಚಟುವಟಿಕೆಗಳನ್ನು ಜರುಗಿಸಲು ಹಾಗೂ ಬೆಳೆದ ಫಸಲನ್ನು ಹೊರತರಲಾಗದೆ ನಷ್ಟ ಹೊಂದುತ್ತಿರುವುದು ಕೆಲವು ಮಾಧ್ಯಮಗಳಿಂದ ತಿಳಿದು ಬಂದಿರುತ್ತದೆ ಹಾಗೂ ಈ ಬಗ್ಗೆ ಸಾರ್ವಜನಿಕರಿಂದ ಮನವಿ/ದೂರುಗಳು ಸ್ವೀಕೃತವಾಗಿರುತ್ತವೆ. ಗ್ರಾಮ ನಕಾಶೆ ಕಂಡ ದಾರಿಗಳಲ್ಲಿ ಬಳಕೆದಾರ ರೈತರು ತಿರುಗಾಡಲು ಅವಕಾಶವಿದ್ದಾಗೂ ಕೆಲವು ಭೂಮಾಲೀಕರು ಬಳಕೆದಾರ ರೈತರುಗಳಿಗೆ ತಿರುಗಾಡಲು ಅಡ್ಡಿಪಡಿಸುತ್ತಿರುವುದು ಅಥವಾ ಅಂತಹ ಜಾಗಗಳನ್ನು ಮುಚ್ಚಿರುವುದು ಕಂಡುಬಂದಿದೆ.

ಇದನ್ನೂ ಓದಿ:Viral Video: 6 ಪಾನಿಪುರಿ ಬದಲು 4 ಪಾನಿಪುರಿ ಕೊಟ್ಟರೆಂದು ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆ, ಪೊಲೀಸರಿಂದ ಸಂಧಾನ

ಹೀಗಾಗಿ ತಾಲ್ಲೂಕಿನ ತಹಶೀಲ್ದಾರ್‌ಗಳು ನಕಾಶೆ ಕಂಡ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳಲ್ಲಿ ಅನ್ಯ ಕೃಷಿ ಬಳಕೆದಾರರು ತಿರುಗಾಡಲು ಅವಕಾಶ ನೀಡದೆ ಅಡಿಪಡಿಸುವಂತಹ ಅಥವಾ ಬಳಸಲು ಮುಚ್ಚಿರುವಂತಹ ಸಂದರ್ಭದಲ್ಲಿ ಅವುಗಳನ್ನು ತೆರವುಗೊಳಿಸಿ, ಅಂತಹ ತಿರುಗಾಡಲು ದಾರಿಗಳನ್ನು ಸುಗಮಗೊಳಿಸಲು ಕ್ರಮವಹಿಸುವಂತೆ ಸೂಚಿಸಿದ್ದಾರೆ.