KPSC: ಗ್ರೂಪ್‌ ಸಿ ಹುದ್ದೆ ನೇಮಕಾತಿ ಪರೀಕ್ಷೆ; 6 ಕೃಪಾಂಕ ಘೋಷಣೆ

Share the Article

KPSC Group C Post: ಗ್ರೂಪ್‌ ಸಿ ಹುದ್ದೆ ಪರೀಕ್ಷೆಗೆ 6 ಕೃಪಾಂಕಗಳನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಘೋಷಿಸಿದೆ. 22 ಪ್ರಶ್ನೆಗಳ ಉತ್ತರದಲ್ಲಿ ಮಾರ್ಪಾಡು ಮಾಡಲಾಗಿದೆ.

ವಿವಿಧ ಇಲಾಖೆಗಳಲ್ಲಿನ ಗ್ರೂಪ್‌ ಸಿ ಹುದ್ದೆಗಳ ನೇಮಕಾತಿಗೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಪರಿಷ್ಕೃತ ಸರಿ ಉತ್ತರಗಳನ್ನು ಕರ್ನಾಟಕ ಲೋಕಸೇವಾ ಆಯೋಗ ಬಿಡುಗಡೆ ಮಾಡಿದೆ.

ಇದರಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆ-1 ರಲ್ಲಿ (ವಿಷಯ ಸಂಕೇತ 656) ಮೂರು ಕೃಪಾಂಕ ನೀಡಲಾಗಿದೆ. ಒಟ್ಟಾರೆ 16 ಪ್ರಶ್ನೆಗಳ ಉತ್ತರಗಳಲ್ಲಿ ಬದಲಾವಣೆ ಮಾಡಿದ ರೀತಿ ಆಗಿದೆ.

ಇದರೊಂದಿಗೆ ಮೂರು ಪ್ರಶ್ನೆಗಳಿಗೆ ಪರ್ಯಾಯ ಉತ್ತರ ನೀಡಲಾಗಿದೆ. ವಿಷಯಾಧಾರಿತ ನಿರ್ದಿಷ್ಟ ಪತ್ರಿಕೆ – 2 ರಲ್ಲಿ (ವಿಷಯ ಸಂಕೇತ 657) ಮೂರು ಕೃಪಾಂಕ ನೀಡಲಾಗಿದೆ. ಮೂರು ಉತ್ತರಗಳನ್ನು ಬದಲಾಯಿಸಲಾಗಿದೆ. ಎರಡೂ ಪತ್ರಿಕೆಗಳಿಂದ ಒಟ್ಟಾರೆ 22 ಉತ್ತರಗಳನ್ನು ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ:MUDA Scam: ಮೂಡಾ ಹಗರಣ: ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಅರೆಸ್ಟ್‌

ಪರಿಷ್ಕೃತ ಕೀ ಉತ್ತರಗಳಿಗೆ ಸಂಬಂಧಪಟ್ಟಂತೆ ಯಾವುದೇ ಮನವಿ, ಆಕ್ಷೇಪಣೆ ಪರಿಗಣಿಸುವುದಿಲ್ಲ ಎಂದು ಹೇಳಲಾಗಿದೆ.

Comments are closed.