PM Modi: ಭಾರತ ಪ್ರಧಾನಿ ಮೋದಿಗೆ 75ರ ಸಂಭ್ರಮ; ಈ ಭಾರೀ ಸ್ಪೆಷಲ್ ವಿಶ್ ಮಾಡಿದ ವ್ಯಕ್ತಿ ಯಾರು?!

Share the Article

PM Modi: ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಗೆ ಇಂದು (ಸೆ.17) 75ನೇ ಹುಟ್ಟುಹಬ್ಬದ ಸಂಭ್ರಮ. ಆದ್ರೆ ಈ ಒಬ್ರು ಸ್ಪೆಷಲ್ ವಿಶ್ ಮಾಡಿರುವ ಹಾಗಿದೆ. ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಇದುವರೆಗೆ ಮೋದಿ ಬಗ್ಗೆ ಹುಸಿ ಹುಸಿಯಾಗಿ ಇದ್ದದ್ದು ಅಲ್ಲದೇ ಭಾರತದ ಮೇಲೆ ಅಮೆರಿಕವು ಭಾರೀ ವ್ಯಾಪಾರ ಸುಂಕಗಳನ್ನು ವಿಧಿಸಿತ್ತು. ಇದೀಗ ಅಮೇರಿಕ ಅಧ್ಯಕ್ಷರು ಫೋನ್‌ ಕರೆ ಮಾಡಿ ಮೋದಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

ಸದ್ಯ ಟ್ರಂಪ್‌ ಶುಭಾಶಯಕ್ಕೆ ಮೋದಿ ಧನ್ಯವಾದ ತಿಳಿಸಿದ್ದಾರೆ. ಭಾರತ-ಅಮೆರಿಕ ಸಂಬಂಧಗಳನ್ನು ಉತ್ತಮಗೊಳಿಸುವ ಬದ್ಧತೆ ಮತ್ತು ಉಕ್ರೇನ್ ಸಂಘರ್ಷವನ್ನು ಪರಿಹರಿಸುವ ನಿಟ್ಟಿನಲ್ಲಿ ಅಮೆರಿಕದ ನಿಲುವಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ಪ್ರಧಾನಿ ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ;Bannerghatta National Park: ವಿಶ್ವದಲ್ಲೇ ಮೊದಲ ಬಾರಿ ಕರಡಿಗೆ ಕೃತಕ ಕಾಲು ಜೋಡಣೆ ಯಶಸ್ವಿ!

ಇದಕ್ಕೆ ಪ್ರತಿಕ್ರಿಯೆಯಾಗಿ ಟ್ರಂಪ್ ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ, ಪ್ರಧಾನಿ ಮೋದಿಯವರೊಂದಿಗೆ ಸಂಭಾಷಣೆ ಅದ್ಭುತವಾಗಿತ್ತು. ಉಕ್ರೇನ್-ರಷ್ಯಾ ಯುದ್ಧವನ್ನು ಪರಿಹರಿಸುವಲ್ಲಿ ಅಮೆರಿಕದ ಉಪಕ್ರಮಗಳಿಗೆ ಭಾರತದ ಬೆಂಬಲಕ್ಕಾಗಿ ಮೋದಿ ಅವರನ್ನು ಶ್ಲಾಘಿಸುತ್ತೇನೆಂದು ತಿಳಿಸಿದ್ದಾರೆ.

Comments are closed.