Kudligi: ಮನೆ ಬಾಗಿಲಿಗೆ ಸಿದ್ದರಾಮಯ್ಯ ಫೋಟೋ ಕೆತ್ತಿಸಿದ ದಂಪತಿ!!

Share the Article

Kudligi: ಗಣ್ಯ ವ್ಯಕ್ತಿಗಳ ಮೇಲಿನ ಅಭಿಮಾನವನ್ನು ಅನೇಕರು ಅನೇಕ ರೀತಿಯಲ್ಲಿ ಎಕ್ಸ್ಪ್ರೆಸ್ ಮಾಡುತ್ತಾರೆ. ಇದೀಗ ದಂಪತಿಯೊಂದು ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದು ತಮ್ಮ ಮನೆಯ ಬಾಗಿಲ ಮೇಲೆ ಅವರ ಚಿತ್ರವನ್ನು ಕೆತ್ತನೆ ಮಾಡಿಸಿದ್ದಾರೆ.

ಹೌದು, ಕೂಡ್ಲಿಗಿ ತಾಲೂಕಿನಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಒಂದಾದ ‘ಗೃಹಲಕ್ಷ್ಮಿ ಯೋಜನೆಯಲ್ಲಿ ಪಾರ್ವತಮ್ಮ ಅವರಿಗೆ ₹ 30 ಸಾವಿರ ಸಂದಾಯವಾಗಿತ್ತು. ಅದನ್ನು ಅವರು ಇದುವರೆಗೂ ಯಾವುದೇ ಕಾರಣಕ್ಕೂ ಬಳಸಿರಲಿಲ್ಲ. ಈಗ ಅದನ್ನು ಬಳಸಿ ಬಾಗಿಲಿಗೆ ಸಿದ್ದರಾಮಯ್ಯ ಚಿತ್ರ ಕೆತ್ತಿಸಲಾಗಿದೆ.

ಇದನ್ನೂ ಓದಿ:Stray Dog Law: ಒಂದು ಬಾರಿಗಿಂತ ಹೆಚ್ಚು ಬಾರಿ ಮನುಷ್ಯನಿಗೆ ನಾಯಿ ಕಚ್ಚಿದರೆ ಆ ನಾಯಿಗೆ ಜೀವಾವಧಿ ಶಿಕ್ಷೆ

ಅಂದಹಾಗೆ ಇದಕ್ಕೆ ₹ 28 ಸಾವಿರ ಖರ್ಚಾಯಿತು. ಇದೆಲ್ಲವೂ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದ ಮಾಡಿದ್ದು ಹಳೇ ಬಾಗಿಲನ್ನು ತೆಗೆದು ಹಾಕಿ, ಸಿದ್ದರಾಮಯ್ಯ ಅವರ ಭಾವಚಿತ್ರವಿರುವ ಹೊಸ ಬಾಗಿಲು ಮನೆಗೆ ಅಳವಡಿಸಿದ್ದೇವೆ. ಊರಲ್ಲಿ ಹಬ್ಬವಿರುವ ಕಾರಣಕ್ಕೆ ಪೂಜೆ ಸಲ್ಲಿಸಿದೆವು’ ಎಂದಿದ್ದಾರೆ

Comments are closed.