Mysore Dasara: ಅರಮನೆ ದರ್ಬಾರ್ ಹಾಲ್‌ನಲ್ಲಿ ‘ಸಿಂಹಾಸನ’ ಜೋಡಣೆ : ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಮ್‌ನಿಂದ ಬಿಡಿಭಾಗ ರವಾನೆ

Share the Article

Mysore Dasara: ದಸರಾ ಮಹೋತ್ಸವದ ವೇಳೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನಡೆಸುವ ಖಾಸಗಿ ದರ್ಬಾರ್ ಗಾಗಿ ಮಂಗಳವಾರ ಅರಮನೆಯ ಸ್ಟ್ರಾಂಗ್ ರೂಮ್‌ನಿಂದ ಚಿನ್ನದ ಸಿಂಹಾಸನ ಹಾಗೂ ಬೆಳ್ಳಿ ಭದ್ರಾಸನದ ಐಡಿಭಾಗಗಳನ್ನು ಬಿಗಿ ಭದ್ರತೆಯಲ್ಲಿ ತಂದು ದರ್ಬಾರ್ ಹಾಲ್ ಹಾಗೂ ಕನ್ನಡಿ ತೊಟ್ಟಿಯಲ್ಲಿ ಜೋಡಣೆ ಮಾಡಲಾಯಿತು.

ನವರಾತ್ರಿ ವೇಳೆ ಅರಮನೆಯ ಒಳಾಂಗಣದಲ್ಲಿ ಯದುವಂಶದ ಪರಂಪರೆಯಂತೆ ಖಾಸಗಿ ದರ್ಬಾರ್ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯ ಜರುಗಲಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರಾಜವಂಶಸ್ಥರು ನವರಾತ್ರಿ ವೇಳೆ ರತ್ನ ಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸುವ ಸಂಪ್ರದಾಯವಿದ್ದು, ಅದಕ್ಕಾಗಿ ಇಂದು ಸಿಂಹಾಸನ ಹಾಗೂ ಭದ್ರಾಸನ ಜೋಡಣಾ ಕಾರ್ಯ ಪೂರ್ಣಗೊಳಿಸಲಾಯಿತು.

ಹೋಮದ ಬಳಿಕ ಸ್ಯಾಂಗ್ ರೂಮ್ ಓಪನ್: ಸಿಂಹಾಸನ ಜೋಡಣೆಗಾಗಿ ದರ್ಬಾರ್ ಹಾಲ್‌ನಲ್ಲಿ ಅರಮನೆಯ ಪುರೋಹಿತರು ಬೆಳಗ್ಗೆ 7.30ಕ್ಕೆ ಗಣಪತಿ, ಚಾಮುಂಡೇಶ್ವರಿ ಪೂಜೆ ನವಗ್ರಹ ಹೋಮ, ಶಾಂತಿ ಪೂಜೆ ನೆರವೇರಿಸಿದ ಬಳಿಕ ವಿವಿಧ ಹೋಮ-ಹವನ ನಡೆಸಿದರು. ಅಂತಿಮ ವಾಗಿ ಪೂರ್ಣಾಹುತಿ ಬಳಿಕ, ರಾಜವಂಶ ಸ್ಥರ ಸೂಚನೆ ಮೇರೆಗೆ ಅರಮನೆಯಲ್ಲಿರುವ ಸ್ಟ್ರಾಂಗ್ ರೂಮ್ ತೆರೆಯಲಾಯಿತು.

“ಪಿಡಿ ಭಾಗಗಳ ಸ್ಥಳಾಂತರ: ಸ್ಟ್ರಾಂಗ್ ರೂಮ್ ನಲ್ಲಿದ್ದ ಚಿನ್ನದ ಸಿಂಹಾಸನದ ಪೀಠ, ಛತ್ರಿ ಸೇರಿದಂತೆ 9 ಐಡಿ ಭಾಗ ಗಳನ್ನು ದರ್ಬಾರ್ ಹಾಲ್‌ಗೆ ಕೊಂಡೊಯ್ಯಲಾಯಿತು. ಬೆಳ್ಳಿಯ ಭದ್ರಾಸನದ 8 ಬಿಡಿ ಭಾಗಗಳನ್ನು ಕನ್ನಡಿ ತೊಟ್ಟಿಗೆ ಸಾಗಿನಲಾಯಿತು. ನಂತರ ಬೆಳಗ್ಗೆ 10.45ರಿಂದ 11.15 ರೊಳಗೆ ಸಿಂಹಾಸನ ಜೋಡಣೆ ಮಾಡಿ, ಪೂಜೆ ಸಲ್ಲಿಸಿದ ಬಳಿಕ ಬೆಳ್ಳಿಯ ಭದ್ರಾಸನವನ್ನು ಸಹ ಜೋಡಣೆ ಮಾಡ ಲಾಯಿತು. ಬಳಿಕ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸುವನ್ನು ಗೋಶಾಲೆಗೆ ಕರೆತರಲಾಯಿತು.

ಸಿಸಿ ಕ್ಯಾಮರಾಗಳಿಗೆ ಪರದೆ: ಸ್ಟ್ರಾಂಗ್ ರೂಮ್‌ನಿಂದ ಸಿಂಹಾಸನದ ಬಿಡಿಭಾಗಗಳನ್ನು ತರುವ ವೇಳೆ ಆರಮನೆಯ ಒಳಾಂಗಣದ ಮಾರ್ಗದಲ್ಲಿದ್ದ ಸಿಸಿ ಕ್ಯಾಮರಾಗಳಿಗೆ ಪರದೆ ಬಿಡಲಾಗಿತ್ತು, ಸಿಂಹಾಸನ ಜೋಡಣೆ ಮಾಡಿದ ನಂತರ ಸಿಂಹಾಸನಕ್ಕೂ ಪರದೆ ಬಿಡಲಾಯಿತು. ಸೆ.22ರಂದು ಮುಂಜಾನೆ 5.30ರಿಂದ 5.45ರೊಳಗೆ ಸಿಂಹಾಸನಕ್ಕೆ ಸಿಂಹದ ಜೋಡಣೆ ಮಾಡಿದ ನಂತರ ಖಾಸಗಿ ದರ್ಬಾರ್ ನೆರವೇರಲಿದೆ.

ಇದನ್ನೂ ಓದಿ:Life Style: ಮದುವೆಯಾದ ಹೆಣ್ಣು ಮಕ್ಕಳು ಗೂಗಲ್ ನಲ್ಲಿ ಮೊದಲು ಸರ್ಚ್ ಮಾಡೋದೇ ಈ ವಿಷಯದ ಬಗ್ಗೆ !

ಅರಮನೆಯ ಸಿಬ್ಬಂದಿಗಳಿಂದಲೇ ಜೋಡಣೆ: ಚಿನ್ನದ ಸಿಂಹಾಸನ ಹಾಗೂ ಬೆಳ್ಳಿ ಭದ್ರಾಸನವನ್ನು ಈ ಹಿಂದೆ ನಂಜನಗೂಡು ತಾಲೂಕಿನ ಗೆಜ್ಜಗಳ್ಳಿಯಿಂದ ಕೆಲವರು ಬಂದು ವ್ಯವಸ್ಥಿತವಾಗಿ ಜೋಡಣೆ ಮಾಡುವ ಪದ್ಧತಿ ಅನುಸರಿಸುತ್ತಾ ಬರಲಾಗಿತ್ತು. ಆದರೆ, ಕಳೆದ ಕೆಲ ವರ್ಷ ಗಳಿಂದ ಅರಮನೆಯ ಸಿಬ್ಬಂದಿಗಳೇ ಸಿಂಹಾ ಸನ ಮತ್ತು ಭದ್ರಾಸನ ಜೋಡಣೆ ಮಾಡು ತ್ತಿದ್ದಾರೆ. ಈ ಬಾರಿಯೂ ಅರಮನೆಯ ಸಿಬ್ಬಂದಿಯೇ ಜೋಡಣಾ ಕಾರ್ಯ ನಡೆಸಿದರು. ಬಿಗಿ ಭದ್ರತೆ ಹಿನ್ನೆಲೆಯಲ್ಲಿ ಸಿಂಹಾಸನ ಜೋಡಣಾ ಕಾರ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಅರಮನೆ ಸಿಬ್ಬಂದಿ ಮೊಬೈಲ್ ಪಡೆದು ಲಾಕರ್‌ನಲ್ಲಿಡಲಾಗಿತ್ತು.

Comments are closed.