Indigo: ಇಂಡಿಗೋ ಹೆಚ್ಚುವರಿ ನಿರ್ದೇಶಕರಾಗಿ ಅಮಿತಾಬ್ ಕಾಂತ್ ಆಯ್ಕೆ

Indigo: ಸೆಪ್ಟೆಂಬರ್ 15 ರಿಂದ ಜಾರಿಗೆ ಬರುವಂತೆ ಅಮಿತಾಬ್ ಕಾಂತ್ ಅವರನ್ನು ಮಂಡಳಿಯಲ್ಲಿ ಹೆಚ್ಚುವರಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಇಂಡಿಗೋ (Indigo) ಇಂದು ತಿಳಿಸಿದೆ.


ಜುಲೈ 3 ರಂದು, ನೀತಿ ಆಯೋಗದ ಮಾಜಿ ಸಿಇಒ ಮತ್ತು ಭಾರತದ ಜಿ20 ಶೆರ್ಪಾ ಆಗಿದ್ದ ಅಮಿತಾಬ್ ಕಾಂತ್ ಅವರನ್ನು ಮಂಡಳಿಗೆ ನೇಮಕ ಮಾಡುವುದಾಗಿ ವಿಮಾನಯಾನ ಸಂಸ್ಥೆ ಘೋಷಿಸಿತ್ತು.
ನಾಗರಿಕ ವಿಮಾನಯಾನ ಸಚಿವಾಲಯದಿಂದ ಭದ್ರತಾ ಅನುಮತಿ ಪಡೆದ ನಂತರ ಇದೀಗ ಅದರಂತೆ, ಅಮಿತಾಬ್ ಕಾಂತ್ ಅವರ ನೇಮಕಾತಿ ಸೆಪ್ಟೆಂಬರ್ 15, 2025 ರಿಂದ ಜಾರಿಗೆ ಬರಲಿದೆ” ಎಂದು ಇಂಡಿಗೋ ಪೋಷಕ ಸಂಸ್ಥೆ ಇಂಟರ್‌ಗ್ಲೋಬ್ ಏವಿಯೇಷನ್ ತಿಳಿಸಿದೆ.
ಇದನ್ನೂ ಓದಿ:Cockroach Tips: ಜಿರಳೆಗಳನ್ನು ಮನೆಯಿಂದ ಓಡಿಸಲು ಈ ಒಂದು ಎಲೆ ಸಾಕು!
Comments are closed.