Mobile Number : ಮೊಬೈಲ್ ನಂಬರ್ ಯಾಕೆ 10 ಸಂಖ್ಯೆಗಳು ಇರುತ್ತವೆ? 99% ಜನರಿಗೆ ಈ ವಿಷ್ಯ ಗೊತ್ತಿಲ್ಲ

Share the Article

Mobile Number : ಇಂದು ಮೊಬೈಲ್ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟೆದೆ. ಆದ್ರೆ ಈ ಮೊಬೈಲ್ ಹಾಗೂ ಸಿಮ್ ಕುರಿತ ಕೆಲವು ಅಚ್ಚರಿಯ ವಿಚಾರಗಳನ್ನು ಯಾರು ತಿಳಿಯಬಹುದೇ ಇಲ್ಲ. ಅದರಲ್ಲಿ ಫೋನ್ ನಂಬರ್ ಕೂಡ ಬಂದಾಗಿದೆ. ಮೊಬೈಲ್ ಸಂಖ್ಯೆ ಕೇವಲ 10 ಅಂಕೆಗಳು ಮಾತ್ರ ಏಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? 8 ಅಥವಾ 12 ಅಲ್ಲ, ಆದರೆ ಕೇವಲ 10 ಅಂಕೆಗಳು ಮಾತ್ರ. ಇದರ ಹಿಂದಿನ ನಿಜವಾದ ಕಾರಣ ಏನೆಂಬುದು ಸುಮಾರು 99% ಜನರಿಗೆ ಗೊತ್ತಿಲ್ಲ. ಹಾಗಿದ್ದರೆ ಅದು ಏನೆಂದು ತಿಳಿಯೋಣ ಬನ್ನಿ.

ಮೊಬೈಲ್ ಸಂಖ್ಯೆಯ ಮೊದಲ ಅಂಕೆ ಯಾವಾಗಲೂ 9, 8, 7 ಅಥವಾ 6 ರಿಂದ ಪ್ರಾರಂಭವಾಗುತ್ತದೆ. ಇದು ಆ ಸಂಖ್ಯೆ ಮೊಬೈಲ್ ನೆಟ್‌ವರ್ಕ್‌’ಗೆ ಸೇರಿದೆ ಎಂದು ಸೂಚಿಸುತ್ತದೆ. ಈಗ ನೀವು 10 ಅಂಕೆಗಳನ್ನ ನೋಡಿದರೆ, ಅದು ಸುಮಾರು 100 ಕೋಟಿ (1 ಬಿಲಿಯನ್) ವಿಭಿನ್ನ ಸಂಖ್ಯಾ ಸಂಯೋಜನೆಗಳನ್ನ ರಚಿಸುವ ಸಾಮರ್ಥ್ಯವನ್ನ ಹೊಂದಿದೆ. ಭಾರತದಂತಹ ದೊಡ್ಡ ಜನಸಂಖ್ಯೆಯನ್ನ ಹೊಂದಿರುವ ದೇಶದಲ್ಲಿಯೂ ಸಹ ಈ ಸಾಮರ್ಥ್ಯವು ಸಾಕಾಗುತ್ತದೆ.

ಅಂದಹಾಗೆ ಸಂಖ್ಯೆಗಳು 8 ಅಂಕೆಗಳಾಗಿದ್ದರೆ, ಸೀಮಿತ ಸಂಯೋಜನೆಗಳು ಲಭ್ಯವಿರುತ್ತವೆ ಮತ್ತು ಭವಿಷ್ಯದಲ್ಲಿ ಸಂಖ್ಯೆಗಳ ಕೊರತೆ ಉಂಟಾಗಬಹುದು. ಮತ್ತೊಂದೆಡೆ, ಅವು 12 ಅಥವಾ 13 ಅಂಕೆಗಳಾಗಿದ್ದರೆ, ಜನರು ಅವುಗಳನ್ನ ನೆನಪಿಟ್ಟುಕೊಳ್ಳುವುದು ಕಷ್ಟಕರವಾಗಿರುತ್ತದೆ. ಆದ್ದರಿಂದ, 10 ಅಂಕೆಗಳನ್ನು ಅತ್ಯಂತ ಸಮತೋಲಿತ ಮತ್ತು ಉತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ:Nepal Protest: Gen Z ಪ್ರತಿಭಟನೆ: ನೇಪಾಳದ ಆರ್ಥಿಕತೆಗೆ ಎಷ್ಟು ಹಾನಿಯಾಗಿದೆ? ಎಷ್ಟು ಉದ್ಯೋಗಗಳು ನಷ್ಟವಾದವು?

ಇನ್ನು ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಒಂದು ದಿನ 10 ಅಂಕೆಗಳ ಸಂಯೋಜನೆಯೂ ಕಡಿಮೆಯಾಗಲು ಪ್ರಾರಂಭಿಸಿದರೆ, ಸರ್ಕಾರ ಮತ್ತು ದೂರಸಂಪರ್ಕ ಕಂಪನಿಗಳು ಹೊಸ ಸಂಖ್ಯೆಯ ವ್ಯವಸ್ಥೆಯಲ್ಲಿ ಕೆಲಸ ಮಾಡಬಹುದು. ಆದಾಗ್ಯೂ, ಇದೀಗ, 10 ಅಂಕೆಗಳು ಸಾಕು ಮತ್ತು ಪ್ರಪಂಚದ ಅನೇಕ ದೇಶಗಳು ಸಹ ಈ ಮಾದರಿಯನ್ನು ಅಳವಡಿಸಿಕೊಳ್ಳಲು ಇದು ಕಾರಣವಾಗಿದೆ.

Comments are closed.