Nude Party : ಭಾರತಕ್ಕೂ ವಕ್ಕರಿಸಿದ ‘ಬೆತ್ತಲೆ ಪಾರ್ಟಿ’ – ಇಲ್ಲಿ ಏನೆಲ್ಲಾ ಮಾಡಲಾಗುತ್ತೆ ಗೊತ್ತಾ?

Share the Article

Nude Party : ಭಾರತೀಯ ಸಂಸ್ಕೃತಿಗೆ ತನ್ನದೇ ಆದ ಮಹತ್ವವಿದೆ. ಇಲ್ಲಿ ಪ್ರತಿಯೊಂದು ಆಚರಣೆಯು ಕೂಡ ವಿಭಿನ್ನವಾಗಿದ್ದು ಒಂದಕ್ಕೊಂದು ವಿಶೇಷವಾದ ಅರ್ಥವನ್ನು ಹೊಂದಿವೆ. ಆದರೆ ಇಂದು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ನಮ್ಮ ಜನ ಬೇಕಾಬಿಟ್ಟಿಯಾಗಿ ಅಲ್ಲಿನ ಸಂಸ್ಕೃತಿಗಳನ್ನು ಅಡಾಪ್ಟ್ ಮಾಡಿಕೊಳ್ಳುತ್ತಿದ್ದಾರೆ. ಅಂತಯೇ ಇದೀಗ ವಿದೇಶಗಳಲ್ಲಿ ನಡೆಯುವ ಬೆತ್ತಲೆ ಪಾರ್ಟಿ ಇದೀಗ ಭಾರತಕ್ಕೂ ವಕ್ಕರಿಸಿಬಿಟ್ಟಿದೆ.

ಹೌದು, ಇತ್ತೀಚಿಗೆ ಛತ್ತೀಸ್‌ಗಢದ, ರಾಯ್‌ಪುರದಲ್ಲಿ ಸೆಪ್ಟೆಂಬರ್ 21 ರಂದು ಯುವಕ ಯುವತಿಯರ ಬೆತ್ತಲೆ ಪಾರ್ಟಿ ನಡೆಸಲು ತಯಾರಿ ಮಾಡಲಾಗಿತ್ತು ಶಾಕಿಂಗ್ ಸತ್ಯ ಒಂದು ಬೆಳಕಿಗೆ ಬಂದಿದ್ದು ಬಳಿಕ ಈ ರೀತಿಯ ಪೋಸ್ಟರ್ಗಳು ವೈರಲ್ ಆದ ಬೆನ್ನಲ್ಲೇ ಪೊಲೀಸರು ಹಲವಾರು ಶಂಕಿತ ಸಂಘಟಕರನ್ನು ಬಂಧಿಸಿದ್ದಾರೆ. ಬಂಧಿತರನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದೆ. ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಛತ್ತೀಸ್‌ಗಢದ ಮುಖ್ಯಮಂತ್ರಿ ತಿಳಿಸಿದ್ದಾರೆ.

ಅಂದಹಾಗೆ ಯುರೋಪ್ ಮತ್ತು ಅಮೆರಿಕದ ಸ್ಥಳಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಪಾರ್ಟಿಗಳು ಭಾರತದಲ್ಲಿ ಸುದ್ದಿಯಾಗಿರುವುದು ಇದೇ ಮೊದಲು. ಮೂಲಗಳ ಪ್ರಕಾರ, ಮುಂಬರುವ ಪಾರ್ಟಿ ಖಾಸಗಿಯಾಗಿ ನಡೆಯುತ್ತದೆ. ಇಲ್ಲಿ ಸೀಮಿತ ಜನರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಇಡೀ ಕಾರ್ಯಕ್ರಮವನ್ನು ಎಷ್ಟು ಗೌಪ್ಯವಾಗಿ ಇಡಲಾಗಿತ್ತದೆಂದರೆ, ಸ್ಥಳದ ಬಗ್ಗೆ ಮಾಹಿತಿಯನ್ನು ಕೆಲವು ಗಂಟೆಗಳ ಮೊದಲು ನೋಂದಾಯಿತ ಸದಸ್ಯರಿಗೆ ಮಾತ್ರ ಖಾಸಗಿಯಾಗಿ ಹಂಚಿಕೊಳ್ಳಲಾಗುತ್ತದೆ. ನೋಂದಣಿ ಪ್ರಕ್ರಿಯೆ ಮುಗಿದ ನಂತರ ಹೊರಗಿನವರು ಪಾರ್ಟಿಗೆ ಸೇರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುತ್ತದೆ. ಮೊಬೈಲ್ ಫೋನ್‌ಗಳನ್ನು ಅನುಮತಿಸಲಾಗುವುದಿಲ್ಲ. ನಂತರ ಅಲ್ಲಿ ಯುವಕ-ಯುವತಿಯರು ಬೆತ್ತಲಾಗಿ ಪಾರ್ಟಿ ಮಾಡುತ್ತಾರೆ.

ಇದನ್ನೂ ಓದಿ:Assam: ಅಸ್ಸಾಂನ ಉನ್ನತ ಅಧಿಕಾರಿಯಿಂದ 2 ಕೋಟಿ ರೂ. ನಗದು, ಚಿನ್ನ ವಶ

ಇನ್ನು ಪೊಲೀಸರ ಪ್ರಕಾರ, ಪೋಸ್ಟರ್‌ಗಳು ಸಂಜೆ 4 ಗಂಟೆಯಿಂದ ತಡರಾತ್ರಿಯವರೆಗೆ ಪಾರ್ಟಿಯನ್ನು ಜಾಹೀರಾತು ಮಾಡುತ್ತಿದ್ದವು, ಪ್ರವೇಶ ಶುಲ್ಕ 40,000 ರೂ.ಗಳಾಗಿದ್ದು, ಇದರಲ್ಲಿ ರಾತ್ರಿಯ ಕೊಠಡಿ ವಾಸ್ತವ್ಯವೂ ಸೇರಿದೆ ಎಂದು ಹೇಳಲಾಗಿದೆ. ದೇಶದಲ್ಲಿ ಹಲವು ಬಾರಿ ನಗ್ನ ಪಾರ್ಟಿಗಳಿಗೆ ಸಂಬಂಧಿಸಿದ ಪ್ರಕರಣಗಳು ಕಂಡುಬರುತ್ತವೆ, ಆದಾಗ್ಯೂ, ಭಾರತದ ಕಾನೂನು ಮತ್ತು ಸಂಸ್ಕೃತಿಯ ಪ್ರಕಾರ, ಅಂತಹ ಪಾರ್ಟಿಗಳಿಗೆ ಯಾವುದೇ ಅನುಮತಿ ಇಲ್ಲ.

Comments are closed.