Home Health Pregnancy: ಗರ್ಭಧಾರಣೆಗೆ ಸರಿಯಾದ ವಯಸ್ಸು ಯಾವುದು? ಮಹಿಳೆಯರಿಗೆ – ಪುರುಷರಿಗೆ ವೈದ್ಯರು ನೀಡೋ ಟಿಪ್ಸ್ ಏನು?

Pregnancy: ಗರ್ಭಧಾರಣೆಗೆ ಸರಿಯಾದ ವಯಸ್ಸು ಯಾವುದು? ಮಹಿಳೆಯರಿಗೆ – ಪುರುಷರಿಗೆ ವೈದ್ಯರು ನೀಡೋ ಟಿಪ್ಸ್ ಏನು?

Hindu neighbor gifts plot of land

Hindu neighbour gifts land to Muslim journalist

Pregnancy: ಹಿಂದೂ ಹೊಸದಾಗಿ ಮದುವೆಯಾಗುವವರು ‘ಫ್ಯಾಮಿಲಿ ಪ್ಲಾನ್’ ಎಂಬ ನೆಪವನ್ನು ಒಡ್ಡಿ ಮಕ್ಕಳನ್ನು ಪಡೆಯುವ ಸಮಯವನ್ನು ಮುಂದು ಹಾಕುತ್ತಾರೆ. ಆದರೆ ತಾಯ್ತನವನ್ನು ಮುಂದೆ ಹಾಕುವುದು ತುಂಬಾ ಅಪಾಯಕಾರಿ ಎಂಬುದಾಗಿ ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದ್ರೆ ಮಹಿಳೆಯರು ಗರ್ಭಧರಿಸಲು ಸರಿಯಾದ ಸಮಯ ಯಾವುದು? ವೈದ್ಯರು ಹೇಳೋದೇನು?

ಸಾಮಾನ್ಯವಾಗಿ ಮಹಿಳೆಯರು 25ರಿಂದ 35 ವರ್ಷಗಳ ನಡುವೆ ಗರ್ಭ ಧರಿಸುವ ಗುರಿಯಿಟ್ಟುಕೊಳ್ಳುವುದು ಸೂಕ್ತ ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಆದರೆ ಪುರುಷರು 40ಕ್ಕಿಂತ ಮೊದಲು ಯೋಜಿಸುವುದು ಒಳ್ಳೆಯದು. ಈ ವಯಸ್ಸು ಸಾಮಾನ್ಯವಾಗಿ ನೈಸರ್ಗಿಕ ಗರ್ಭಧಾರಣೆ, ಆರೋಗ್ಯಕರ ಗರ್ಭಾವಸ್ಥೆಗೆ ಪೂರಕವಾಗಿದೆ ಮತ್ತು ಹೀಗೆ ಮಾಡಿದರೆ ಎದುರಾಗುವ ತೊಂದರೆಗಳ ಪ್ರಮಾಣವಂತೂ ಕಡಿಮೆಯಾಗುತ್ತದೆ.

ಇದನ್ನೂ ಓದಿ:GST ಕಡಿತವಾಗಿ ಬೆಲೆ ಕಮ್ಮಿಯಾದ್ರೂ ಕಾರು ಮಾರಾಟದಲ್ಲಿ ಭಾರೀ ಕುಸಿತ !! ಕಾರು ಖರೀದಿಸ್ಬೇಕು ಅಂತಿದ್ರೆ ತಪ್ಪದೆ ಕಾರಣ ಗಮನಿಸಿ

20ರ ವಯಸ್ಸಿನ ಆರಂಭದಲ್ಲಿ ಗರ್ಭಧಾರಣಾ ಸಾಮರ್ಥ್ಯವು ಗರಿಷ್ಠವಾಗಿರುತ್ತದೆ, 30ರ ನಂತರ ಕಡಿಮೆಯಾಗಲು ಪ್ರಾರಂಭವಾಗುತ್ತದೆ, 35ರ ನಂತರ ತೀವ್ರವಾಗಿ ಕುಸಿಯುತ್ತದೆ ಮತ್ತು 40ರ ನಂತರ ತೀರಾ ಸೀಮಿತವಾಗುತ್ತದೆ. ಅಂಡಾಣುಗಳ ಸಂಖ್ಯೆ ಮತ್ತು ಅವುಗಳ ಆನುವಂಶಿಕ ಗುಣಮಟ್ಟವು ವಯಸ್ಸು ಹೆಚ್ಚಿದಂತೆಲ್ಲಾ ಕಡಿಮೆಯಾಗುತ್ತದೆ. ಇದು ಗರ್ಭಧಾರಣೆ ಮತ್ತು ಗರ್ಭಾವಸ್ಥೆಯ ಫಲಿತಾಂಶಗಳ ಮೇಲೆ ಪರಿಣಾಮ ಬೀರುತ್ತದೆ. ಪುರುಷರಲ್ಲೂ ವಯಸ್ಸಿಗೆ ಸಂಬಂಧಿಸಿದ ಬದಲಾವಣೆಗಳನ್ನು ಕಾಣಬಹುದು. 40ರ ನಂತರ, ವೀರ್ಯದ ಚಲನಶೀಲತೆ, ಸಂಖ್ಯೆ ಮತ್ತು ಡಿಎನ್‌ಎ ಗುಣಮಟ್ಟ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಹೀಗಾಗಿ ಸರಿಯಾದ ಸಮಯದಲ್ಲಿ ಗರ್ಭದರಿಸಬೇಕೆಂದರೆ ವೈದ್ಯರು ಹೇಳುತ್ತಾರೆ.