UNESCO: “ಯುನೆಸ್ಕೋ” ಪಟ್ಟಿಗೆ ತಿರುಪತಿ ಸೇರಿ ಭಾರತದ 7 ಸ್ಥಳಗಳು ವಿಶ್ವಪರಂಪರೆ ಲಿಸ್ಟ್​​ಗೆ ಸೇರ್ಪಡೆ

Share the Article

UNESCO: ಜಗತ್ತಿನಲ್ಲಿ ಇರುವ ಪಾರಂಪರಿಕ, ನೈಸರ್ಗಿಕ , ಪುರಾತನ ಸ್ಥಳಗಳ ಸಂರಕ್ಷಣೆ ಮಾಡುವ ಯುನೆಸ್ಕೋದ (UNESCO) ಆಸ್ತಿಗಳ ಪಟ್ಟಿಗೆ ಇದೀಗ ಭಾರತದ (India) ಮಹಾಬಲೇಶ್ವರದ ಡೆಕ್ಕನ್‌ ಟ್ರ್ಯಾಪ್ (Mahabaleshwara deccan traps), ಉಡುಪಿಯಲ್ಲಿರುವ ಸೇಂಟ್‌ ಮೇರಿಸ್‌‍ ದ್ವೀಪ, ತಿರುಮಲ ತಿಮಪನ ಬೆಟ್ಟ (Tirupati hill) ಸೇರಿದಂತೆ ದೇಶದ ಒಟ್ಟು 7 ಹೊಸ ಪ್ರದೇಶಗಳನ್ನು ಯುನೆಸ್ಕೋದ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ, ದೇಶದ ಒಟ್ಟು 7 ಹೊಸ ಪ್ರದೇಶಗಳನ್ನು ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆ ಮಾಡಿರುವುದು, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಹಾಗೂ ಸಂರಕ್ಷಣೆಗೆ ನಿಮ್ಮ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಭಾರತದ ಶಾಶ್ವತ ನಿಯೋಗ ಹೇಳಿದೆ.

ಇದನ್ನೂ ಓದಿ:Soul weight: ‘ಆತ್ಮ’ದ ತೂಕ ಕಂಡುಹಿಡಿದ ವೈದ್ಯರು! : ವಿಜ್ಞಾನಿಗಳು ಅದನ್ನು ತಿರಸ್ಕರಿಸಿದ್ದು ಏಕೆ?

ಈ ಪೈಕಿ ಪಂಚಗಣಿ, ಮಹಾಬಲೇಶ್ವರದಲ್ಲಿರುವ ಡೆಕ್ಕನ್‌ ಟ್ರ್ಯಾಪ್‌ಗಳು, ಮೇಘಾಲಯನ್‌ ಯುಗದ ಗುಹೆಗಳು, ಕರ್ನಾಟಕದ (karnataka) ಉಡುಪಿಯಲ್ಲಿರುವ (udupi)ಸೇಂಟ್‌ ಮೇರಿಸ್‌‍ ದ್ವೀಪ ಸಮೂಹದ ಭೂವೈಜ್ಞಾನಿಕ ಪರಂಪರೆ, ನೈಸರ್ಗಿಕ ವರ್ಗದ ಅಡಿಯಲ್ಲಿ ಈ ಏಳು ಆಸ್ತಿಗಳಲ್ಲಿ ಯುನೆಸ್ಕೋ ಪಟ್ಟಿಗೆ ಸೇರ್ಪಡೆಯಾಗಿದೆ. ಇನ್ನುಳಿದಂತೆ ವಿಶಾಖಪಟ್ಟಣ ಎರ್ರಾ ಮಟ್ಟಿ ದಿಬ್ಬಲು ತಿರುಮಲ ಬೆಟ್ಟಗಳ ನೈಸರ್ಗಿಕ ಪರಂಪರೆ ಮತ್ತು ಕೇರಳದ ವರ್ಕಲಾ ಕೂಡ ಇದೇ ಪರಂಪರೆ ಪಟ್ಟಿಗೆ ಸೇರಿವೆ.

Comments are closed.