Dhavan Rakesh: ಸಿದ್ದು ಮೊಮ್ಮಗ ಧವನ್ ರಾಜಕೀಯಕ್ಕೆ ಎಂಟ್ರಿ – ಮುಂದೆ ಈ ಕ್ಷೇತ್ರದಿಂದ ಸ್ಪರ್ಧೆ, ಸಿದ್ದರಾಮಯ್ಯ ಘೋಷಣೆ!!

Share the Article

Dhavan Rakesh : ಕಾಂಗ್ರೆಸ್ ನೇತಾರ ಹಾಗೂ ರಾಜ್ಯದ ಮುಖ್ಯಮಂತ್ರಿ ಆಗಿರುವ ಸಿಎಂ ಸಿದ್ದರಾಮಯ್ಯನವರು ಇದು ನನ್ನ ಕೊನೆ ಚುನಾವಣೆ ಯಾಗಿದ್ದು ಮುಂದಿನ ಎಲೆಕ್ಷನ್ ನಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ. ಇದಾಗಲೇ ಅವರ ಪುತ್ರ ಯತೀಂದ್ರ ಅವರ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಮೊದಲ ಪುತ್ರ ರಾಕೇಶ್ ಅವರ ಮಗ ಧವನ್, ಅಂದರೆ ಸಿದ್ದರಾಮಯ್ಯ ಅವರ ಏಕೈಕ ಮೊಮ್ಮಗ ರಾಜಕೀಯಕ್ಕೆ ಎಂಟ್ರಿ ಯಾಗುವುದು ಫಿಕ್ಸ್ ಎನ್ನಲಾಗುತ್ತಿದೆ. ಈ ಕುರಿತು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಹೇಳಿಕೆ ನೀಡಿದ್ದಾರೆ.

ಹೌದು, ಮೈಸೂರಿನ ವರುಣ ಕ್ಷೇತ್ರದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಅವರನ್ನು ಕಾಂಗ್ರೆಸ್‌ ಮುಖಂಡರು ಸ್ಮರಿಸಿದ್ದಾರೆ. ಇದೇ ವೇಳೆ ರಾಕೇಶ್ ಅವರ ಪುತ್ರ ಧವನ್ ಅವರಿಗೆ ರಾಜಕೀಯಕ್ಕೆ ಎಂಟ್ರಿ ಕೊಡುವಂತೆ ಗ್ರಾಮದ ಮುಖಂಡರು ವೇದಿಕೆಯಲ್ಲೇ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತು ರಾಕೇಶ್ ಅವರು ಅಪಾರ ಕೊಡುಗೆಗಳನ್ನ ನೀಡಿದ್ದು, ಧವನ್ ಮುಂದೆ ಶಾಸಕರಾಗಬೇಕು ಎಂದು ಕೇಳಿಕೊಂಡಿದ್ದಾರೆ. ಅಲ್ಲದೆ ಈ ಹಿಂದೆ ಸಿದ್ದರಾಮಯ್ಯ ಅವರು ಇದೇ ನನ್ನ ಕೊನೆಯ ಚುನಾವಣೆ. ಮುಂದೆ ನನ್ನ ನಂತರ ಯತೀಂದ್ರ ಹಾಗೂ ಮೊಮ್ಮಗ ಧವನ್ ರಾಕೇಶ್ ಇದ್ದಾರೆ ಎಂದು ವಂಶ ರಾಜಕಾರಣದ ಸುಳಿವು ನೀಡಿದ್ದರು. ಹೀಗಾಗಿ ಮುಂದಿನ ಚುನಾವಣೆ ವೇಳೆ ಧವನ್‌ ಅವರ ರಾಜಕೀಯ ಪ್ರವೇಶ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:UNESCO: “ಯುನೆಸ್ಕೋ” ಪಟ್ಟಿಗೆ ತಿರುಪತಿ ಸೇರಿ ಭಾರತದ 7 ಸ್ಥಳಗಳು ವಿಶ್ವಪರಂಪರೆ ಲಿಸ್ಟ್​​ಗೆ ಸೇರ್ಪಡೆ

ಅಂದ ಹಾಗೆ ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದ ಉಪಚುನಾವಣೆ ವೇಳೆ ನಾಮಪತ್ರಕ್ಕೆ ಸಲ್ಲಿಸುವ ಸಂದರ್ಭದಲ್ಲಿ ವರುಣ ಕ್ಷೇತ್ರದ ಭವಿಷ್ಯದ ನಾಯಕ ಎಂದರೆ ಅದು ನನ್ನ ಮೊಮ್ಮಗ ಧವನ್ ರಾಕೇಶ್. ಈ ಬಾರಿಯ ಚುನಾವಣೆ ನನ್ನ ಕೊನೆಯ ಚುನಾವಣೆ. ಹಾಗಾಗಿ ಮುಂದಿನ ದಿನಗಳಲ್ಲಿ ಯತೀಂದ್ರ ಹಾಗೂ ನಂತರ ಮೊಮ್ಮಗ ಧವನ್ ರಾಜಕೀಯಕ್ಕೆ ಬರುತ್ತಾರೆ. ಈಗ ಅವನು ವಿದ್ಯಾಭ್ಯಾಸ ಮಾಡುತ್ತಿದ್ದು,‌ ಮುಂದಿನ ದಿನಗಳಲ್ಲಿ ನಿಮ್ಮ ಸೇವೆಗೆ ಬರ್ತಾನೆ, ಜನ ಅವನನ್ನು ಸ್ವೀಕರಿಸಬೇಕು ಸಿದ್ದರಾಮಯ್ಯ ಮನವಿ ಮಾಡಿದ್ದರು. ಹಾಗಾಗಿ ಮುಂದಿನ ವಿಧಾನಸಭೆ ಚುನಾವಣೆಗೆ ವರುಣಾ ಕ್ಷೇತ್ರದಿಂದಲೇ ಧವನ್‌ ಚುನಾವಣೆಗೆ ಸ್ಪರ್ಧೆ ಮಾಡುವುದು ಬಹುತೇಕ ಫಿಕ್ಸ್‌ ಎಂದು ಹೇಳಲಾಗುತ್ತಿದೆ.

Comments are closed.