Breast Ironing: ಇಲ್ಲಿ ಇಸ್ತ್ರಿ ಮಾಡಿ ಪ್ರಾಯದ ಹುಡುಗಿಯರ ಸ್ತನವನ್ನ ಚಪ್ಪಟೆ ಮಾಡ್ತಾರೆ !! ಕಾರಣ ಮಾತ್ರ ಅಚ್ಚರಿ

Breast Ironing:ಹುಡುಗಿಯರು ಋತುಮತಿಯಾದ ಬಳಿಕ ಅದರ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತದೆ. ಅದರಲ್ಲೂ ಕೂಡ ಸ್ತನಗಳು ಬೆಳೆದು ದೊಡ್ಡವಾಗಿ ಆಕೆಯ ದೈಹಿಕ ಸೌಂದರ್ಯ, ತಾಯ್ತನ ಸೇರಿದಂತೆ ಎಲ್ಲ ವಿಚಾರದಲ್ಲಿಯೂ ಅತೀ ಮುಖ್ಯವಾಗುತ್ತದೆ. ಆದರೆ ಇಲ್ಲೊಂದು ದೇಶದಲ್ಲಿ ಎಳೆ ಹುಡುಗಿಯರ ಸ್ತನವನ್ನು ಐರನ್ ಬಾಕ್ಸ್ ಇಟ್ಟು ಚಪ್ಪಟೆ ಮಾಡುತ್ತಾರೆ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು.

ಹೌದು, ಪಶ್ಚಿಮ ಮತ್ತು ಮಧ್ಯ ಆಫ್ರಿಕಾದ ಬೆನಿನ್, ಬುರ್ಕಿನಾ ಫಾಸೊ, ಕ್ಯಾಮರೂನ್, ಮಧ್ಯ ಆಫ್ರಿಕಾದ ಗಣರಾಜ್ಯ, ಚಾಡ್, ಕೋಟ್ ಡಿ’ಐವೊಯಿರ್, ಗಿನಿಯಾ- ಬಿಸ್ಸೌ, ಗಿನಿಯಾ-ಕೊನಾಕ್ರಿ, ಕೀನ್ಯಾ, ನೈಜೀರಿಯಾ, ಟೋಗೊ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆಗಳಲ್ಲಿ ಹುಡುಗಿಯರು ಈ ಭೀಕರ ನೋವಿನ ಅವಸ್ಥೆಯನ್ನು ಎದುರಿಸುತ್ತಾರೆ. ಲಕ್ಷಾಂತರ ಹುಡುಗಿಯರು ಇಂದಿಗೂ ಈ ನೋವಿನಿಂದ ಬಳಲುತ್ತಿದ್ದಾರೆ. ಇದನ್ನು ಸ್ತನ ಇಸ್ತ್ರಿ ಅಥವಾ ಸ್ತನ ಚಪ್ಪಟೆಗೊಳಿಸುವಿಕೆ (Breast Ironing) ಎಂದು ಕರೆಯಲಾಗುತ್ತೆ. ಒಟ್ಟಿನಲ್ಲಿ ದೇಹವನ್ನೇ ವಿರೂಪಗೊಳಿಸುವ ನೋವಿನ, ಹಾನಿಕಾರಕ ಸಂಪ್ರದಾಯವಿದು.
ಅಂದಹಾಗೆ ಪ್ರೌಢಾವಸ್ಥೆಗೆ ಬಂದ ಹುಡುಗಿಯ ಸ್ತನಗಳನ್ನು ಪದೇ ಪದೇ ಬಡಿಯುವುದು, ಒತ್ತುವುದು, ಇಸ್ತ್ರಿ ಮಾಡುವುದು, ಉಜ್ಜುವುದು ಅಥವಾ ಮಸಾಜ್ ಮಾಡುವುದರ ಮೂಲಕ ಅವು ಬೆಳೆಯುವುದನ್ನು ನಿಲ್ಲಿಸುವುದನ್ನು ಮಾಡುತ್ತಾರೆ. ಇದಕ್ಕೆ ಬಿಸಿಯಾದ ರುಬ್ಬುವ ಕಲ್ಲುಗಳು, ಎರಕ ಹೊಯ್ದ ಕಬ್ಬಿಣದ ಹರಿವಾಣಗಳು, ಲ್ಯಾಡಲ್‌ಗಳು, ಸುತ್ತಿಗೆಗಳು, ಮರದ ಸುತ್ತಿಗೆಗಳು, ಸ್ಪಾಟುಲಾಗಳು, ಚಮಚಗಳು, ಪೊರಕೆಗಳು ಅಥವಾ ಕಬ್ಬಿಣ ಸೇರಿದಂತೆ ವಿವಿಧ ವಸ್ತುಗಳನ್ನು ಬಳಸುತ್ತಾರೆ. ಯುವತಿಯರ ಎದೆಯ ಸುತ್ತಲೂ ಬ್ಯಾಂಡೇಜ್‌ಗಳು, ಎಲಾಸ್ಟಿಕ್ ಕಂಪ್ರೆಸರ್‌ಗಳು, ಬಟ್ಟೆಗಳು ಅಥವಾ ಬೆಲ್ಟ್‌ಗಳನ್ನು ಬಿಗಿಯಾಗಿ ಸುತ್ತುವ ಅಥವಾ ಕಟ್ಟುವ ಮೂಲಕವೂ ಇದನ್ನು ಮಾಡುತ್ತಾರೆ.
ಸ್ತನ ಚಪ್ಪಟೆ ಮಾಡುವುದು ಏಕೆ?
ಸ್ತನಗಳು ಬೆಳೆದಂತೆ ಯುವತಿ ಲೈಂಗಿಕ ಸಂಪರ್ಕ, ಸಂಬಂಧಕ್ಕೆ ಸಿದ್ಧಳಾಗಿದ್ದಾಳೆ ಎಂದು ಗೊತ್ತಾಗುತ್ತದೆ. ಯುವಕರು ಈಕೆಯತ್ತ ಆಕರ್ಷಿತರಾಗುತ್ತಾರೆ. ಆಕೆ ಲೈಂಗಿಕ ಸಂಬಂಧ ಬೆಳೆಸಬಹುದು, ಇನ್ನೂ ಅಪ್ರಾಪ್ತೆಯಾಗಿದ್ದಾಗಲೇ ಗರ್ಭಧಾರಣೆ ಮಾಡಬಹುದು. ಹೀಗಾಗಿ ಅದನ್ನೆಲ್ಲ ತಡೆಯಲು ಇದನ್ನು ಮಾಡುತ್ತಾರೆ. ಅಲ್ಲದೆ ಕುಟುಂಬಗಳು, ವಿಶೇಷವಾಗಿ ತಾಯಂದಿರು, ತಮ್ಮ ಹೆಣ್ಣುಮಕ್ಕಳನ್ನು ಬಲವಂತ, ಅಪಹರಣ ಮತ್ತು ಬಲವಂತದ ಬಾಲ್ಯವಿವಾಹಗಳಿಂದ ರಕ್ಷಿಸುವ ಒಂದು ಮಾರ್ಗವಾಗಿ ಸ್ತನ ಇಸ್ತ್ರಿ ಮಾಡುವಿಕೆಯನ್ನು ನೋಡುತ್ತಾರೆ.
ಇದನ್ನೂ ಓದಿ:Cars: ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಕಾರುಗಳಲ್ಲಿ ಯಾವುದು ಬೆಸ್ಟ್? ಯಾವುದನ್ನು ಕೊಂಡ್ರೆ ಉತ್ತಮ?
ಆದರೆ ಇದನ್ನು ಈಗ ಕಾನೂನುಬಾಹಿರಗೊಳಿಸಲಾಗಿದೆ. ಆದರೆ ರಹಸ್ಯವಾಗಿ ಮಾಡಲಾಗುತ್ತದೆ. ಹೆಚ್ಚಾಗಿ ಹುಡುಗಿಗೆ ಸಂಪೂರ್ಣ ತಿಳುವಳಿಕೆಯಿಲ್ಲದಂತೆ ಮಾಡಲಾಗುತ್ತದೆ. ಜಾಗತಿಕ ಅಂದಾಜಿನ ಪ್ರಕಾರ, ವಿಶ್ವಾದ್ಯಂತ ಸುಮಾರು 38 ಲಕ್ಷ ಹುಡುಗಿಯರು ಸ್ತನ ಇಸ್ತ್ರಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಕ್ಯಾಮರೂನ್‌ನ ಕೆಲವು ಭಾಗಗಳಲ್ಲಿ, ಪ್ರತಿ ಮೂರು ಹುಡುಗಿಯರಲ್ಲಿ ಒಬ್ಬರು ಈ ಅಭ್ಯಾಸಕ್ಕೆ ಒಳಗಾಗುತ್ತಾರೆ ಎಂದು ನಂಬಲಾಗಿದೆ.
Comments are closed.