ವಿಚಿತ್ರ ಡಬ್ಬಲ್ ವೀಕ್ನೆಸ್ ಮರ್ಡರ್: ಮದ್ಯಕ್ಕಾಗಿ ಬೇಡಿಕೆ ಇಟ್ಟ ಪ್ರಿಯತಮೆಯನ್ನು ಕೊಚ್ಚಿ ಕೊಂದ ಪ್ರಿಯಕರ

ಚಿಕ್ಕಬಳ್ಳಾಪುರ: ಇದೊಂದು ಥರ ವಿಚಿತ್ರ ಡಬ್ಬಲ್ ವೀಕ್ನೆಸ್ ನ ಮರ್ಡರ್. ಅವರಲ್ಲಿ ಒಬ್ಬರು ಇನ್ನಷ್ಟು ಮದ್ಯಕ್ಕಾಗಿ ಪೀಡಿಸಿದ್ದರು. ಅದಕ್ಕಾಗಿ ಇನ್ನೊಬ್ಬರು ಸಂಗಾತಿಯನ್ನು ಮುಗಿಸಿ ಹಾಕಿದ್ದರು. ಬಹುಶಃ ಪ್ರಿಯಕರ ಎಣ್ಣೆ ಜಾಸ್ತಿ ಬೇಕೆಂದು ಕೇಳಿದ್ದಕ್ಕೆ ಆತನನ್ನು ಪ್ರಿಯತಮೆ ಮುಗಿಸಿದ್ದಾಳೆ ಅಂದುಕೊಂಡರೆ ನಿಮ್ಮ ಊಹೆ ಸುಳ್ಳು. ಇಲ್ಲಿ ಹೆಚ್ಚಿನ ಮದ್ಯಕ್ಕೆ ಬೇಡಿಕೆ ಇಟ್ಟದ್ದು ಆಕೆ.

ಪ್ರಿಯತಮೆ ಮದ್ಯ ಕೇಳಿದಳು ಎಂದು ಪ್ರಿಯಕರ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ. ಇಂಥಹಾ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಾರ್ಡ್ ನಂಬರ್ 8ರಲ್ಲಿ ನಡೆದಿದೆ.
ಮದ್ಯ ಬೇಕು ಎಂದು ಬೇಡಿಕೆಯಿಟ್ಟ ರಮಿಜಾಬಿ (25) ಮೃತ ಪ್ರಿಯತಮೆ. ಬಾಬಾಜಾನ್ (40) ಕೊಲೆ ಮಾಡಿದ ಪ್ರಿಯಕರ. ಅವರು ಮೂಲತಃ ಶ್ರೀನಿವಾಸಪುರದ ವಾಸಿಗಳು. ರಮಿಜಾಬಿಗೆ ಬೇರೊಬ್ಬನ ಜೊತೆ ವಿವಾಹವಾಗಿತ್ತು. ಜತೆಗೇ ಮಕ್ಕಳೂ ಇದ್ದರು. ಇತ್ತ ಬಾಬಾಜಾನ್‌ಗೂ ಮದುವೆಯಾಗಿ ಮಕ್ಕಳಿದ್ದರು. ಆದ್ರೂ ಅವರು ಸೆಟಲ್ ಆಗಲಿಲ್ಲ. ಬೇರೊಂದು ಸಂಬಂಧಕ್ಕಾಗಿ ಹಾತೊರೆದು ಅವರಿಬ್ಬರೂ ತಮ್ಮ ಗಂಡ, ಹೆಂಡತಿ ಮತ್ತು ಮಕ್ಕಳನ್ನ ಬಿಟ್ಟು ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದರು. ಇಂದೊಂದು ವೀಕ್ನೆಸ್ ಆಯ್ತಲ್ಲ.
ಇದ್ರ ಜತೆ ಅವರಿಬ್ಬರಿಗೂ ಇನ್ನೊಂದು ವೀಕ್ನೆಸ್ ಇತ್ತು: ಇಬ್ಬರಿಗೂ ಗಂಟಲು ಮುಳುಗುವ. ಮಟ್ಟಕ್ಕೆ ಕುಡಿಯುವ. ಚಟವಿತ್ತು. ಇಬ್ಬರು ಕೂಡಾ ಕುಡಿತದ ಚಟಕ್ಕೆ ಬಿದ್ದಿದ್ದರು. ಕುಡಿದು ಪದೇ ಪದೇ ಕುಡಿದು ಗಲಾಟೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ:Mangalore: ಸಿಎಂ ಫೋಟೋ ಬಳಸಿ ಕೋಮು ಪ್ರಚೋದಕ ಪೋಸ್ಟ್: ಮಹೇಶ್ ವಿಕ್ರಂ ಹೆಗ್ಡೆಗೆ ನ್ಯಾಯಾಂಗ ಬಂಧನ
ನಿನ್ನೆ ಶುಕ್ರವಾರ ಸಂಜೆ ಕುಡಿದು ಗಲಾಟೆ ಮಾಡಿಕೊಂಡಿದ್ದು, ರಮಿಜಾಬಿ ತನಗೆ ಮತ್ತಷ್ಟು ಎಣ್ಣೆ ಬೇಕೆಂದು ಆತನಲ್ಲಿ ಪೀಡಿಸಿದ್ದಳಂತೆ. ಇದರಿಂದ ಸಿಟ್ಟಿಗೆದ್ದ ಬಾಬಾಜಾನ್ ಮಚ್ಚಿನಿಂದ ಮನಸ್ಸೋಇಚ್ಛೆ ಕೊಚ್ಚಿ ಆಕೆಯನ್ನು ಬಲಿ ಪಡೆದಿದ್ದಾನೆ. ಇದೀಗ ಘಟನಾ ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಹಾಗೂ ಎಸ್ಪಿ ಕುಶಲ್ ಚೌಕ್ಸಿ ಭೇಟಿ ನೀಡಿ, ಬಾಬಾಜಾನ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Comments are closed.